For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗೆ ಈ ಆಟಗಾರ ಭಾರತಕ್ಕೆ ಅತ್ಯಗತ್ಯ: ಶೇನ್ ಬಾಂಡ್ ಹೇಳಿಕೆ

Shane Bond Praises Indian cricketer said Team India Needs him For t20 World Cup

ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್ ಈ ಭಾರಿಯ ಐಪಿಎಲ್‌ಮಲ್ಲಿ ಅದ್ಭುತ ಪ್ರದರ್ಶನ ನಿಡಿದ ಭಾರತೀಯ ಆಟಗಾರನೋರ್ವನ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಈ ಐಪಿಎಲ್‌ನ ಪ್ರದರ್ಶನವನ್ನು ನೋಡಿದ ಬಳಿಕ ಈ ಆಟಗಾರ ಭಾರತೀಯ ತಂಡಕ್ಕೆ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ಅಗತ್ಯವಾಗಿರುವ ಆಟಗಾರ ಎಂದಿದ್ದಾರೆ ಶೇನ್ ಬಾಂಡ್.

ನ್ಯೂಜಿಲೆಂಡ್ ಕ್ರಿಕೆಟ್‌ನ ದಿಗ್ಗಜ ಆಟಗಾರ ಶೇನ್ ಬಾಂಡ್ ಹೀಗೆ ಪ್ರಶಂಸೆಯ ಮಾತುಗಳನ್ನಾಡಿರುವುದು ಭಾರತೀಯ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ನಾಯಕನಾಗಿಯೂ ಮಿಂಚಿದ್ದಾರೆ. ಚೊಚ್ಚ ಆವೃತ್ತಿಯಲ್ಲಿಯೇ ಗುಜರಾತ್ ಟೈಟನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಗುಜರಾತ್ ಟೈಟನ್ಸ್ ತಂಡದ ಯಶಸ್ವಿನಲ್ಲಿ ಪ್ರಮುಖ ಪಾತ್ರವಹಿಸಿರುವ ಹಾರ್ದಿಕ್ ಪಾಂಡ್ಯ ಮುಂದೆ ನಿಂತು ತಂಡವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ತಂಡದ ಪರವಾಗಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದಾರೆ ಪಾಂಡ್ಯ. ಆಡಿದ 15 ಪಂದ್ಯಗಳಲ್ಲಿ 44.27ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಹಾರ್ದಿಕ್ 487 ರನ್‌ಗಳಿಸಿದರು. ಇನ್ನು ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಹಾರ್ದಿಕ್ 17 ರನ್ ನಿಡಿ ಮೂರು ವಿಕೆಟ್ ಪಡೆದಿದ್ದರೆ 34 ರನ್‌ಗಳನ್ನು ಬ್ಯಾಟಿಂಗ್‌ನ ಮೂಲಕ ಗಳಿಸಿ ತಂಡದ ಗೆಲುವಿಗೆ ಕಾರಣವಾದರು.

ಇನ್ನು ಹಾರ್ದಿಕ್ ನಾಯಕತ್ವದ ಬಗ್ಗೆ ಹಾಗೂ ಪ್ರದರ್ಶನದ ಬಗ್ಗೆ ಮಾತನಾಡಿರುವ ಶೇನ್ ಬಾಂಡ್ "ಹಾರ್ದಿಕ್ ಓರ್ವ ಶಾಂತ ಮನಸ್ಸಿನ ನಾಯಕನಾಗಿದ್ದಾರೆ. ಮುಂಬೈ ಇಂಡಿಯನ್ಸ್‌ನಲ್ಲಿ ನನ್ನ ಮೊದಲ ಆವೃತ್ತಿಯಲ್ಲಿ ಆತ ಕೂಡ ಸೇರಿಕೊಂಡಿದ್ದ. ಹೀಗಾಗಿ ನಾನು ಆತನ ಜೊತೆಗೆ ಉತ್ತಮ ಸಮಯವನ್ನು ಕಳೆದಿದ್ದೇನೆ. ನಾಯಕನಾಗಿ ಭಿನ್ನ ತಂಡವೊಂದನ್ನು ಮುನ್ನಡೆಸುವುದು ಆತನಿಗೂ ಮೊದಲ ಅನುಭವವಾಗಿತ್ತು. ಆದರೆ ಆತ ಆ ಜವಾಬ್ಧಾರಿಯನ್ನು ಶ್ರೇಷ್ಠವಾಗಿ ನಿಭಾಯಿಸಿದ್ದಾರೆ" ಎಂದು ಶೇನ್ ಬಾಂಡ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಮುಂದುವರಿಸು ಮಾತನಾಡಿದ ಬಾಂಡ್ "ನನ್ನ ದೃಷ್ಟಿಕೋನದಿಂದ ಹೇಳುವುದಾದರೆ ನಾನು ಆತನನ್ನು ಮಿಸ್ ಮಾಡಿಕೊಂಡಿದ್ದೇನೆ. ಆತನಂತಾ ಗುಣಮಟ್ಟದ ಆಟಗಾರನನ್ನು ಹೊಂದುವುದು ಉತ್ತಮ ಸಂಗತಿ. ಭಾರತಕ್ಕೆ ಕೂಡ ಟಿ20 ವಿಶ್ವಕಪ್‌ನಲ್ಲಿ ಆತನ ಅಗತ್ಯವಿದೆ. ಯಾಕೆಂದರೆ ತಾನೋರ್ವ ಎಂತಾ ಗುಣಮಟ್ಟದ ಆಟಗಾರ ಎಂಬೂದನ್ನು ಆತ ಸಾಬೀತುಪಡಿಸಿದ್ದಾರೆ. ಅಲ್ಲದೆ ಎಷ್ಟು ಉತ್ತಮ ನಾಯಕ ಎಂಬುದನ್ನು ಕುಡ ಸಾಬೀತುಪಡಿಸಿದ್ದಾರೆ" ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಹಾರ್ದಿಕ್ ಪಾಂಡ್ಯ.

Story first published: Monday, June 6, 2022, 9:42 [IST]
Other articles published on Jun 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+