Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶೇನ್ ವಾರ್ನ್‌ಗೆ 12 ತಿಂಗಳು ಡ್ರೈವಿಂಗ್ ನಿಷೇಧ, ವಕೀಲರ ಪ್ರತಿಕ್ರಿಯೆ ಏನು?

Shane Warne banned from driving for 12 months by London court

ಲಂಡನ್, ಸೆ. 24: ಬಹುಕಾಲದ ನಂತರ ಮತ್ತೊಮ್ಮೆ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಬೇಡದ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅತಿವೇಗದಿಂದ ವಾಹನ ಚಲಾಯಿಸಿದ್ದಕ್ಕೆ ಸ್ಪಿನ್​ ಮಾಂತ್ರಿಕ ಶೇನ್​ ವಾರ್ನ್​ ಅವರು ಭಾರಿ ದಂಡ ತೆರಬೇಕಾಗಿ ಬಂದಿದೆ. ವಾರ್ನ್‌ಗೆ 12 ತಿಂಗಳು ಕಾಲ ಡ್ರೈವಿಂಗ್ ಮಾಡದಂತೆ ಇಲ್ಲಿನ ಪೊಲೀಸರು ನಿಷೇಧ ಹೇರಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 6 ಬಾರಿ ಇದೇ ರೀತಿ ತಪ್ಪು ಮಾಡಿ ಸಿಕ್ಕಿಬಿದ್ದಿದ್ದಾರೆ.

50 ವರ್ಷದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಶೇನ್​ ವಾರ್ನ್​, ವಿಂಬಲ್ಡನ್​ನ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಮುಂದೆ ಸೋಮವಾರದಂದು ಹಾಜರಾಗಿದ್ದರು. ತಮ್ಮ ತಪ್ಪನ್ನು ಕೋರ್ಟಿನ ಕಟಕಟೆಯಲ್ಲಿ ನಿಂತು ಒಪ್ಪಿಕೊಂಡಿದ್ದರು.

ಆದರೆ ವಾರ್ನ್ ಪರ ವಕೀಲ ಬ್ಯಾರಿ ವಾರ್ ಬರ್ಟನ್ ಅವರು ವಾದ ಮಂಡಿಸಿ, ಕಂಪ್ಯೂಟರ್ ಗಳು ಸರಿಯಾಗಿ ಅಪ್ಡೇಟ್ ಆಗಿರುವುದಿಲ್ಲ. ಹಲವಾರು ಮಂಡಿ 30 ಅಂಕಗಳ ಜುಲ್ಮಾನೆ ಪಡೆದಿದ್ದರೂ ರಸ್ತೆಯಲ್ಲಿ ಸಂಚರಿಸುತ್ತಿರುತ್ತಾರೆ, ಅವರಿಗೆ ಯಾವುದೇ ನಿಷೇಧ ಹೇರಿಲ್ಲ ಏಕೆ" ಎಂದು ಪ್ರಶ್ನಿಸಿದ್ದಾರೆ.

ವಾರ್ನ್ ಅವರು ಮತ್ತೊಂದು ಲೈಸನ್ಸ್ ಹೊಂದಿರುವುದು ನನಗೂ ಗೊತ್ತಿರಲಿಲ್ಲ. ಬ್ರಿಟಿಷ್ ಡ್ರೈವಿಂಗ್ ಲೈಸನ್ಸ್ ಯುರೋಪಿಯನ್ ಯೂನಿಯನ್ ಅಲ್ಲದೆ ಬೇರೆ ದೇಶಗಳಲ್ಲಿ ಉಪಯೋಗಿಸಿದರೆ ವಿಮೆ ಇರುವುದಿಲ್ಲ ಎಂದಿದ್ದಾರೆ.

ಕಳೆದ ಆಗಸ್ಟ್​ ತಿಂಗಳಲ್ಲಿ ಕಿಂಗ್​​ಸ್ಟನ್​ನಲ್ಲಿ ತಮ್ಮ ಜಾಗ್ವಾರ್​ ಕಾರಿನಲ್ಲಿ ತೆರಳುತ್ತಿದ್ದ ಶೇನ್​ ವಾರ್ನ್​, ಗಂಟೆಗೆ 40 ಮೈಲಿ ಪ್ರತಿ ಗಂಟೆ ವೇಗದಲ್ಲಿ ಚಾಲನೆ ಮಾಡಬೇಕಾದ ರಸ್ತೆಯಲ್ಲಿ ಗಂಟೆಗೆ 47 ಮೈಲಿ ಪ್ರತಿ ಗಂಟೆ ಯಂತೆ ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

ವಾರ್ನ್​ ಅವರ ಲೈಸೆನ್ಸ್​ ಮೇಲೆ 15 ಪೆನಾಲ್ಟಿ ಅಂಕಗಳನ್ನು ಹಾಕಲಾಗಿದ್ದು, 2016ರ ಏಪ್ರಿಲ್​ನಿಂದ ಇಲ್ಲಿ ತನಕ ಅತಿವೇಗದ ಚಾಲನೆ ಮಾಡಿ 5 ಅಪರಾಧಗಳನ್ನು ವಾರ್ನ್​ ಎಸಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

5 ಬಾರಿ ಅಪರಾಧ ಎಸಗಿರುವುದಕ್ಕೆ 1,845 ಪೌಂಡ್​ ದಂಡವನ್ನು ವಿಂಬಲ್ಡನ್ ನ್ಯಾಯಾಲಯಕ್ಕೆ ಪಾವತಿಸುವಂತೆ ಡೆಪ್ಯುಟಿ ಡಿಸ್ಟ್ರಿಕ್ ಜಡ್ಜ್ ಆಂಡ್ರಿಯನ್ ಟರ್ನರ್ ಆದೇಶಿಸಿದ್ದಾರೆ ಜೊತೆಗೆ 12 ತಿಂಗಳು ಡ್ರೈವಿಂಗ್​ನಿಂದ ನಿಷೇಧ ಹೇರಿದೆ.

ಪಶ್ಚಿಮ ಲಂಡನ್ನಿನ ನಿವಾಸಿಯಾಗಿರುವ ವಾರ್ನ್ ಅವರು 1992 ಮತ್ತು 2007ರ ಅವಧಿಯಲ್ಲಿ 145 ಟೆಸ್ಟ್​ ಪಂದ್ಯಗಳಲ್ಲಿ 708 ವಿಕೆಟ್​ ಕಬಳಿಸಿದ್ದಾರೆ.

Story first published: Tuesday, September 24, 2019, 12:40 [IST]
Other articles published on Sep 24, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+