ಆಸ್ಟ್ರೇಲಿಯಾ ಏಕದಿನ ತಂಡ ಹಾಸ್ಯಾಸ್ಪದವಾಗಿದೆ: ಶೇನ್ ವಾರ್ನ್ ಕಿಡಿ


ಸಿಡ್ನಿ, ಜನವರಿ 4: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಜನವರಿ 12ರಿಂದ ಆರಂಭಗೊಳ್ಳಲಿರುವ ಭಾರತ-ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದೆ. ಆದರೆ ಪ್ರಕಟಿತ ಆಸೀಸ್ ತಂಡ ಹಾಸ್ಯಾಸ್ಪದವಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ (ಜನವರಿ 4) ಕ್ರಿಕೆಟ್ ಆಸ್ಟ್ರೇಲಿಯಾ ಏಕದಿನ ಸರಣಿಗಾಗಿ 14 ಜನ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಅನುಭವಿ ವೇಗಿ ಪೀಟರ್ ಸಿಡ್ಲ್, ಉಸ್ಮಾನ್ ಖವಾಜಾ ಮತ್ತು ನಾಥನ್ ಲಿಯಾನ್ ಕೂಡ ಇದ್ದಾರೆ. ಆದರೂ ಸ್ಪಿನ್ ಮಾಂತ್ರಿಕ ವಾರ್ನ್ ಆಸೀಸ್ ಆಯ್ಕೆ ಸಮಿತಿಯ ಮೇಲೆ ಕಿಡಿ ಕಾರಿದ್ದಾರೆ.
ಶುಕ್ರವಾರ (ಜ.4) ಟ್ವೀಟ್ ಮಾಡಿರುವ ಶೇನ್, 'ಇಂಥ ಹಾಸ್ಯಾಸ್ಪದ ಆಯ್ಕೆಯನ್ನು ಎಲ್ಲಾ ಮಾದರಿಯ ಆಸ್ಟ್ರೇಲಿಯಾ ಕ್ರಿಕೆಟ್‌ನಿಂದ ನಿಲ್ಲಿಸಬೇಕು. ಇದು ಕೊನೆಯಾಗಬೇಕು' ಎಂದು ಬರೆದುಕೊಂಡಿದ್ದಾರಲ್ಲದೆ ಜೊತೆಗೊಂದು ಸಿಡುಕುವ ಇಮೋಜಿಯನ್ನೂ ಸೇರಿಸಿದ್ದಾರೆ.

ಶೇನ್ ಕಳವಳದಲ್ಲಿ ಅರ್ಥವಿದೆ
'ಏಕದಿನಕ್ಕಾಗಿ ಪ್ರಕಟಿಸಿರುವ ಆಸೀಸ್ ತಂಡವನ್ನು ಗಮನಿಸಿದೆ. ಕೆಲವೊಬ್ಬರನ್ನು ಸೇರಿಸಲಾಗಿದೆ, ಇನ್ನು ಕೆಲವರನ್ನು ಕೈ ಬಿಡಲಾಗಿದೆ. ಒಟ್ಟಿನಲ್ಲಿ ಇದೊಂದು ಹಾಸ್ಯಾಸ್ಪದ ತಂಡ' ಎಂದು ಶೇನ್ ಹೇಳಿದರು. ಶೇನ್ ಕಳವಳದಲ್ಲಿ ಅರ್ಥವೂ ಇದೆ. ಮುಂಬರಲಿರುವ ಐಸಿಸಿ ವಿಶ್ವಕಪ್ ಗಮನದಲ್ಲಿರಿಸಿಕೊಂಡು ಆಸೀಸ್ ಆಯ್ಕೆ ನಡೆಸಿಲ್ಲ ಎನ್ನುವುದು ವಾರ್ನ್ ವಾದ.

ತ್ರಿವಳಿ ಆಟಗಾರರಿಲ್ಲ
ಜನವರಿ 12ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಆರಂಭಗೊಳ್ಳಲಿರುವ ಏಕದಿನ ಸರಣಿಗಾಗಿ ಪ್ರಕಟಿಸಲಾಗಿರುವ ಆಸ್ಟ್ರೇಲಿಯಾ ತಂಡದಲ್ಲಿ ಪ್ರಮುಖ ತ್ರಿವಳಿ ಆಟಗಾರರಾದ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝೆಲ್ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರಿಗೆ ಸ್ಥಾನ ನೀಡಿಲ್ಲ. ಇದೇ ವಾರ್ನ್ ಅಸಮಾಧಾನಕ್ಕೆ ಕಾರಣವಿರಲೂಬಹುದು.

ಇನ್ನೂ ಐವರು ಹೊರಗೆ
ಆಸ್ಟ್ರೇಲಿಯಾ ಆಯ್ಕೆ ಸಮಿತಿಯು ಟ್ರಾವಿಸ್ ಹೆಡ್, ಕ್ರಿಸ್ ಲಿನ್, ಡಿ ಆರ್ಕಿ ಶಾರ್ಟ್, ಬೆನ್ ಮ್ಯಾಕ್ಡರ್ಮಾಟ್ ಮತ್ತು ಆಲ್-ರೌಂಡರ್ ಆಷ್ಟನ್ ಅಗರ್ ಈ ಐವರು ಆಟಗಾರರನ್ನೂ ತಂಡದಲ್ಲಿ ಪರಿಗಣಿಸಿಲ್ಲ. ಲಿಮಿಟೆಡ್ ಓವರ್‌ಗೆ ಸಂಬಂಧಿಸಿ ಈ ಆಟಗಾರರು ಉತ್ತಮ ಸಾಧನೆ ತೋರದಿರುವುದು ಇದಕ್ಕೆ ಕಾರಣ ಎಂದು ಆಸೀಸ್ ಹೇಳಿದೆ.

ಆಸ್ಟ್ರೇಲಿಯಾದ 14 ಜನರ ತಂಡ
ಆ್ಯರನ್ ಫಿಂಚ್ (ಕ್ಯಾಪ್ಟನ್), ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚ್ ಮಾರ್ಷ್, ಅಲೆಕ್ಸ್ ಕ್ಯಾರಿ, ಜೀಯೆ ರಿಚರ್ಡ್ಸನ್, ಬಿಲ್ಲಿ ಸ್ಟ್ಯಾನ್ಲೇಕ್, ಜಾಸನ್ ಬೆಹೆರೆನ್ಡಾಫ್, ಪೀಟರ್ ಸಿಡಿಲ್, ನಾಥನ್ ಲಿಯಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications