ನಟಿಯ ಮೇಲೆ ಹಲ್ಲೆ ಮಾಡಿದ ಆರೋಪ ನಿರಾಕರಿಸಿದ ವಾರ್ನ್
ಲಂಡನ್, ಸೆಪ್ಟೆಂಬರ್ 25: ಇಲ್ಲಿನ ನೈಟ್ ಕ್ಲಬ್ ಒಂದರಲ್ಲಿ ನಟಿಯೊಬ್ಬಳ ಮೇಲೆ ತಮ್ಮಿಂದ ಹಲ್ಲೆಯಾಗಿರುವ ಆರೋಪಗಳನ್ನು ಆಸ್ಟ್ರೇಲಿಯಾ ಕ್ರಿಕೆಟ್ ನ ದಂತಕತೆ ಹಾಗೂ ವಿಶ್ವವಿಖ್ಯಾತ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ನಿರಾಕರಿಸಿದ್ದಾರೆ.
ಭಾನುವಾರ (ಸೆ. 24) ಬೆಳಗ್ಗೆ ಇಲ್ಲಿನ ಮೈಫೇರ್ ನಲ್ಲಿರುವ ನೈಟ್ ಕ್ಲಬ್ ಒಂದಕ್ಕೆ ಬಂದಿದ್ದ ವಾರ್ನ್, ಅಲ್ಲಿ ವ್ಯಾಲೆರಿ ಫಾಕ್ಸ್ ಎಂಬ ಸಿನಿಮಾ ನಟಿಯ ಜತೆಗೆ ಜಗಳ ಕಾಯ್ದಿದ್ದು, ಆನಂತರ ಆಕೆಯ ಮೇಲೆ ಹಲ್ಲೆ ನಡೆಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿತ್ತು.

ತಮ್ಮ ಮೇಲಾದ ಹಲ್ಲೆಯ ಬಗ್ಗೆ ದೂರು ನೀಡಿದ್ದ ಫಾಕ್ಸ್, ವಾರ್ನ್ ಅವರು, ತಮ್ಮ ಮುಖಕ್ಕೆ ಬಿಗಿಮುಷ್ಠಿಯಿಂದ ಚಚ್ಚಿದ್ದಾರೆಂದು ಲಂಡನ್ ಪೊಲೀಸರಿಗೆ ದೂರು ನೀಡಿದ್ದಳು. ಈ ವಿಚಾರವನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಹೇಳಿಕೊಂಡಿದ್ದಾರೆ.
ಪೊಲೀಸರಿಗೆ ದೂರು ಕೊಟ್ಟ ಬೆನ್ನಲ್ಲೇ ವಾರ್ನ್ ಅವರ ಬಂಧನವಾಗಿತ್ತು ಎಂದು ಲಂಡನ್ ನ ಕೆಲವು ಮಾಧ್ಯಮಗಳು ಹೇಳಿವೆ.
ಆದರೆ, ಇದಕ್ಕೆ ಖುದ್ದು ಸ್ಪಷ್ಟನೆ ನೀಡಿರುವ ವಾರ್ನ್, ಈ ಆರೋಪಗಳು ನಿರಾಧಾರ ಎಂದಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಾರ್ನ್, ''ಮಹಿಳೆಯೊಬ್ಬಳ ಮೇಲೆ ನಾನು ಹಲ್ಲೆ ನಡೆಸಿದೆ ಎಂಬುದಾಗಿ ಹಲವಾರು ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ನನ್ನನ್ನು ಘಾಸಿಗೊಳಿಸಿವೆ. ನೈಟ್ ಕ್ಲಬ್ ನಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿರುವ ಪೊಲೀಸರು ನನ್ನನ್ನು ನಿರಪರಾಧಿ ಎಂದು ತೀರ್ಮಾನಿಸಿದ್ದಾರೆ. ಮುಂದೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೆಂಬ ಭರವಸೆಯನ್ನೂ ನೀಡಿದ್ದಾರೆ. ಸತ್ಯವು ಗೆದ್ದಿದೆ'' ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications