For Quick Alerts
ALLOW NOTIFICATIONS  
For Daily Alerts
 

ಶೇನ್ ವಾರ್ನ್ ಅಕಾಲಿಕ ನಿಧನ: ಸಾವು ಅನುಮಾನಾಸ್ಪದ ಎಂದು ಪರಿಗಣಿಸಿಲ್ಲ ಎಂದ ಥಾಯ್ಲೆಂಡ್ ಪೊಲೀಸ್

Shane Warne Death: Death not treating suspicious said Thailand Police

ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಅವರ ಅಕಾಲಿಕ ನಿಧನ ಕ್ರಿಕೆಟ್ ಲೋಕ ತಲ್ಲಣಗೊಂಡಿದೆ. ಕ್ರಿಕೆಟ್ ಚಟುವಟಿಕೆಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದ ಶೇನ್ ವಾರ್ನ್ ಇನ್ನಿಲ್ಲ ಎಂಬ ಆಘಾತಕಾರಿ ಸಂಗತಿಯನ್ನು ಅರಗಿಸಿಕೊಳ್ಳಲು ಅಭಿಮಾನಿಗಳು ಹಾಗೂ ಅವರ ಆಪ್ತರಿಗೆ ಸಾಧ್ಯವಾಗುತ್ತಿಲ್ಲ. ಥಾಯ್ಲೆಂಡ್‌ನಲ್ಲಿನ ವಿಲ್ಲಾದಲ್ಲಿ ಉಳಿದುಕೊಂಡಿದ್ದ ವಾರ್ನ್ ಹೃದಾಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಸಾವಿನ ಬಗ್ಗೆ ಥಾಯ್ಲೆಂಡ್ ಪೊಲೀಸರು ತನಿಖೆ ಆರಂಭಿಸಿದ್ದು ಕೆಲ ಪ್ರಮುಖ ಮಾಹಿತಿಗಳು ಲಭ್ಯವಾಗಿದೆ.

ಶೇನ್ ವಾರ್ನ್ ಅವರ ಸಾವನ್ನು ಥಾಯ್ಲೆಂಡ್ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿಲ್ಲ ಎಂದು ತಿಳಿದುಬಂದಿದೆ. ಹಾಗಿದ್ದರೂ ಸ್ಥಳೀಯ ಪೊಲೀಸರು ಶನಿವಾರ ಶೇನ್ ವಾರ್ನ್ ಅವರ ಮೂವರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಾರ್ನ್ ಮೃತಪಡುವ ಮುನ್ನ ಈ ಮೂವರು ಸ್ನೇಹಿರತರೊಂದಿಗೆ ಉಳಿದುಕೊಂಡಿದ್ದರು ಎನ್ನಲಾಗಿದೆ.

ಹೇಗಾಯಿತು ವಾರ್ನ್ ಸಾವು?: ಶುಕ್ರವಾರ ಸಂಜೆಯ ವೇಳೆಗೆ ಥಾಯ್ಲೆಂಡ್‌ನ ವಿಲ್ಲಾದಲ್ಲಿ ಸ್ನೇಹಿತರೊಂದಿಗೆ ಇದ್ದ ಶೇನ್ ವಾರ್ನ್ ಸಂಜೆಯ ವೇಳೆಗೆ ಪ್ರಜ್ಞಾಹೀನವಾಗಿ ಪತ್ತೆಯಾಗಿದ್ದರು. ಈ ವಿಚಾರವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಪ್ರಜ್ಞಾಹೀನವಾಗಿ ಪತ್ತೆಯಾಗುದ್ದ ವಾರ್ನ್ ಅವರ ಪ್ರಾಣ ಉಳಿಸುವ ಪ್ರಯತ್ನವನ್ನು ಸ್ನೇಹಿತರು ನಡೆಸಿದರು. ನಂತರ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಕೂಡ ಶೇನ್ ವಾರ್ನ್ ಅವರನ್ನು ಬದುಕಿಸುವ ಪ್ರಯತ್ನ ನಡೆಸಿದರು ಕೂಡ ಅದು ಸಾಧ್ಯವಾಗಿರಲಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಚಾಚವಾನ್ ರಾಯ್ಟರ್ಸ್‌ಗೆ ಮಾಹಿತಿ ನೀಡಿದ್ದಾರೆ.

ಶೇನ್ ವಾರ್ನ್ ಅವರ ಮೃತದೇಹವನ್ನು ಶವಪರೀಕ್ಷೆಗಾಗಿ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಶನಿವಾರ ಶೇನ್ ವಾರ್ನ್ ಅವರ ಸ್ನೇಹಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಚಾಚವಾನ್ ನೀಡಿದ ಮಾಹಿತಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಪೊಲೀಸರು ಈ ಸಾವನ್ನು ಅನುಮಾನಾಸ್ಪ ಸಾವು ಎಂದು ಪರಿಗಣಿಸಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.

ಕೆಲ ವರದಿಗಳ ಪ್ರಕಾರ ಗುರುವಾರ ಶೇನ್ ವಾರ್ನ್ ಥಾಯ್ಲೆಂಡ್‌ಗೆ ಬಂದಿಳಿದಿದ್ದರು ಎನ್ನಲಾಗಿದೆ. ಕೊಹ್ ಸಮುಯಿನ ಐಷಾರಾಮಿ ಸಮುಜನ ವಿಲ್ಲಾಸ್ ರೆಸಾರ್ಟ್‌ಲ್ಲಿ ವಾಸ್ತವ್ಯ ಹೂಡಿದ್ದರು. ಇದೇ ವಿಲ್ಲಾದಲ್ಲಿ ವಾರ್ನ್ ಮೃತಪಟ್ಟಿದ್ದಾರೆ ಎಂಬ ಅಂಶವನ್ನು ಸ್ಥಳೀಯ ಪೊಲೀಸರು ಖಚಿತಪಡಿಸಿದ್ದಾರೆ.

Story first published: Saturday, March 5, 2022, 10:22 [IST]
Other articles published on Mar 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+