For Quick Alerts
ALLOW NOTIFICATIONS  
For Daily Alerts
 

ಶೇನ್ ವಾರ್ನ್ ಅಕಾಲಿಕ ಸಾವು: ಬ್ಯಾಂಕಾಕ್ ಏರ್‌ಪೋರ್ಟ್ ತಲುಪಿದ ದಿಗ್ಗಜ ಸ್ಪಿನ್ನರ್ ಮೃತದೇಹ

Shane Warne Death: Shane Warnes Body arrived at Bangkok Airport and will be taken back to Australia

ಆಸ್ಟ್ರೇಲಿಯಾ ಕ್ರಿಕೆಟ್‌ನ ದಿಗ್ಗಜ ಆಟಗಾರ ಶೇನ್ ವಾರ್ನ್ ಕಳೆದ ವಾರ ಥಾಯ್ಲೆಂಡ್‌ಗೆ ಖಾಸಗಿ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಅಕಾಲಿಕ ನಿಧನ ಹೊಂದಿದ್ದರು. ಹೃದಯಾಘಾತದಿಂದ ವಾರ್ನ್ ಮೃತಪಟ್ಟಿರುವುದಾಗಿ ಶಂಕಿಸಲಾಗಿದ್ದು ಮರಣೋತ್ತರ ಪರೀಕ್ಷೆಯಲ್ಲಿಯೂ ಶೇನ್ ವಾರ್ನ್ ಅವರದ್ದು ಸಹಜ ಸಾವು ಎಂಬುದು ಸಾಬೀತಾಗಿದೆ. ಥಾಯ್ಲೆಂಡ್‌ನಲ್ಲಿ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿದ್ದು ಶೇನ್ ವಾರ್ನ್ ಮೃತದೇಹವನ್ನು ಆಸ್ಟ್ರೇಲಿಯಾಗೆ ತೆಗೆದುಕೊಂಡು ಹೋಗುವ ಪ್ರಕ್ರಿಯೆ ನಡೆಯುತ್ತಿದೆ.

ಶೇನ್ ವಾರ್ನ್ ಅವರ ಮೃತದೇಹ ಸದ್ಯ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ ಏರ್‌ಪೋರ್ಟ್‌ಗೆ ತಲುಪಿದ್ದು ಅಲ್ಲಿಂದ ಶೇನ್ ವಾರ್ನ್ ಅವರ ತವರು ಆಸ್ಟ್ರೇಲಿಯಾಗೆ ತೆಗೆದುಕೊಂಡು ಹೋಗಲಾಗುತ್ತದೆ. ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶೇನ್ ವಾರ್ನ್‌ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ವಿದಾಯ ನೀಡಲು ಆಸ್ಟ್ರೇಲಿಯಾ ಸರ್ಕಾರ ನಿರ್ಧರಿಸಿದ್ದು ಮಾರ್ಚ್ 30ರಂದು ಸ್ಟೇಟ್ ಫುನರಲ್ ಕಾರ್ಯಕ್ರಮ ನಡೆಯಲಿದೆ.

ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ಅವರ ಮೃತದೇಹವನ್ನು ಹೊಂದಿರುವ ಶವಪೆಟ್ಟಿಗೆಗೆ ಆಸ್ಟ್ರೇಲಿಯಾದ ಧ್ವಜವನ್ನು ಹೊದಿಸಲಾಗಿದ್ದು ಬ್ಯಾಂಕಾಕ್‌ನ ಡಾನ್ ಮುವಾಂಗ್ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಅಲ್ಲಿಂದ ನೇರವಾಗಿ ಆಸ್ಟ್ರೇಲಿಯಾಗೆ ವಾರ್ನ್ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತದೆ.

ಶೇನ್ ವಾರ್ನ್ ಅವರ ಸಾವನ್ನು ಥಾಯ್ಲೆಂಡ್ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿಲ್ಲ ಎಂದು ಥಾಯ್ಲೆಂಡ್ ಪೊಲೀಸ್ ಆಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು. ಹಾಗಿದ್ದರೂ ಸ್ಥಳೀಯ ಪೊಲೀಸರು ಶನಿವಾರ ಶೇನ್ ವಾರ್ನ್ ಅವರ ಮೂವರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಾರ್ನ್ ಮೃತಪಡುವ ಮುನ್ನ ಈ ಮೂವರು ಸ್ನೇಹಿರತರೊಂದಿಗೆ ಉಳಿದುಕೊಂಡಿದ್ದರು.

ಹೇಗಾಯಿತು ವಾರ್ನ್ ಸಾವು?: ಶುಕ್ರವಾರ ಸಂಜೆಯ ವೇಳೆಗೆ ಥಾಯ್ಲೆಂಡ್‌ನ ವಿಲ್ಲಾದಲ್ಲಿ ಸ್ನೇಹಿತರೊಂದಿಗೆ ಇದ್ದ ಶೇನ್ ವಾರ್ನ್ ಸಂಜೆಯ ವೇಳೆಗೆ ಪ್ರಜ್ಞಾಹೀನವಾಗಿ ಪತ್ತೆಯಾಗಿದ್ದರು. ಈ ವಿಚಾರವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಪ್ರಜ್ಞಾಹೀನವಾಗಿ ಪತ್ತೆಯಾಗುದ್ದ ವಾರ್ನ್ ಅವರ ಪ್ರಾಣ ಉಳಿಸುವ ಪ್ರಯತ್ನವನ್ನು ಸ್ನೇಹಿತರು ನಡೆಸಿದರು. ನಂತರ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ ಕೂಡ ಶೇನ್ ವಾರ್ನ್ ಅವರನ್ನು ಬದುಕಿಸುವ ಪ್ರಯತ್ನ ನಡೆಸಿದರು ಕೂಡ ಅದು ಸಾಧ್ಯವಾಗಿರಲಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಚಾಚವಾನ್ ರಾಯ್ಟರ್ಸ್‌ಗೆ ಮಾಹಿತಿ ನೀಡಿದ್ದಾರೆ.

ಶೇನ್ ವಾರ್ನ್ ಜೊತೆಗೆ ಥಾಯ್ಲೆಂಡ್‌ನಲ್ಲಿ ರಜಾ ಕಳೆಯಲು ತೆರಳಿದ್ದ ಅವರ ಸ್ನೇಹಿತ ಟಾಮ್ ಹಾಲ್ ದಿಗ್ಗಜ ಕ್ರಿಕೆಟಿಗನ ಸಾವಿಗೆ ಒಂದು ಗಂಟೆ ಹಿಂದೆ ವಾರ್ನ್ ಹರಟಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ. ವಾರ್ನ್ ಸಾವಿಗೆ ಕೆಲವೇ ಗಂಟೆಗಳಿರುವಾರ ಐಪಿಎಲ್‌ನ ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನ ಬಗ್ಗೆ ಮಾತನಾಡಿದ್ದರು ಎಂದು ಟಾಮ್ ಹಾಲ್ ತಿಳಿಸಿದ್ದಾರೆ. ಶೇನ್ ವಾರ್ನ್ ಕೋಹ್ ಸಮುಯ್ ದ್ವೀಪದ ಸಮುಜಾನ್ ರೆಸಾರ್ಟ್‌ನಲ್ಲಿ ವಾಸವಿದ್ದ ಗೆಳೆಯರ ಗುಂಪಿನಲ್ಲಿ ಟಾಮ್ ಹಾಲ್ ಕೂಡ ಇದ್ದರು.

'ದಿ ಸ್ಪೋರ್ಟಿಂಗ್ ನ್ಯೂಸ್‌'ಗೆ ಆರ್ಟಿಕಲ್‌ ಬರೆದಿದ್ದು ಈ ಬರಹದಲ್ಲಿ ಶೇನ್ ವಾರ್ನ್ ಅವರ ನಿಧನಕ್ಕೆ ಹಿಂದಿನ ಒಂದು ಗಂಟೆಯ ಅವಧಿಯಲ್ಲಿ ಏನಾಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಈ ಬರಹದಲ್ಲಿ ಹಾಲ್ ಶೇನ್ ವಾರ್ನ್ ಐಪಿಎಲ್‌ನಲ್ಲಿ ವಿಶೇಷವಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಸಾಧನೆಗೆ ಹೆಮ್ಮೆಯನ್ನು ಹೊಂದಿದ್ದರು ಎಂದು ಬರೆದುಕೊಂಡಿದ್ದಾರೆ. "ಕ್ರಿಕೆಟ್ ವಿಚಾರಗಳ ಬಗ್ಗೆ ಹರಟಿ ತಮಾಷೆ ಮಾಡಿಕೊಂಡ ನಂತರ ಶೇನ್ ವಾರ್ನ್ ಜೊತೆಗೆ ಕೆಲವರು ಫೋಟೋ ತೆಗೆದುಕೊಂಡರು. ಅದಾದ ಬಳಿಕ ನಾವು ತಕ್ಷಣವೇ ಏನನ್ನಾದರೂ ತಿನ್ನಲು ನಿರ್ಧರಿಸದೆವು" ಎಂದು ಈ ಆರ್ಟಿಕಲ್‌ನಲ್ಲಿ ಬರೆದುಕೊಂಡಿದ್ದಾರೆ.

Story first published: Thursday, March 10, 2022, 13:24 [IST]
Other articles published on Mar 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+