ಶೇನ್‌ವಾರ್ನ್ ನಿಧನ: ದಿಗ್ಗಜ ಆಟಗಾರನಿಗೆ ವಿದಾಯ ಹೇಳಿದ ಕುಟುಂಬ ಸದಸ್ಯರು, ಸ್ನೇಹಿತರು

ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ಎರಡು ವಾರಗಳ ಹಿಂದೆಯಷ್ಟೇ ಹೃದಯಾಘಾತದಿಂದ ನಿಧನರಾಗಿದ್ದು ಹುಟ್ಟೂರಿನಲ್ಲಿ ಶೇನ್‌ವಾರ್ನ್ ಅವರಿಗೆ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ವಿದಾಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ಶೇನ್ ವಾರ್ನ್ ಅವರ ಕುಟುಂಬ ಸದಸ್ಯರು ಹಾಗೂ ದಿಗ್ಗಜ ಕ್ರಿಕೆಟಿಗನ ಸಹ ಆಟಗಾರರು ಈ ಖಾಸಗಿ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶೇನ್ ವಾರ್ನ್ ಅವರ ಹುಟ್ಟೂರು ಮೆಲ್ಬರ್ನ್‌ನಲ್ಲಿ ಈ ಕಾರ್ಯಕ್ರಮ ನೆರವೇರಿದೆ.
ಈ ವಿದಾಯದ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಹಾಗೂ ಕೆಲ ಮಾಜಿ ಕ್ರಿಕೆಟಿಗರು ಸೇರಿದಂತೆ ಒಟ್ಟು 80 ಮಂದಿ ಭಾಗಿಯಾಗಿದ್ದಾರೆ. ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಮಾರ್ಕ್ ಟೇಯ್ಲರ್, ಆಲನ್ ಬಾರ್ಡರ್, ಮೈಕಲ್ ಕ್ಲಾರ್ಕ್ ಹಾಗೂ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡ ಭಾಗಿಯಾಗಿದ್ದಾರೆ. ಅಲ್ಲದೆ ವಾನ್ ಜೊತೆ ದೀರ್ಘ ಕಾಲ ಸಹಪಾಠಿಯಾಗಿದ್ದ ಮಾರ್ಕ್ ವಾ, ಇಯಾನ್ ಹೀಲೆ ಶ್ರೇಷ್ಠ ಬೌಲರ್‌ಗಳಾದ ಮಾರ್ವ್ ಹೂಜ್ ಮತ್ತು ಗ್ಲೆನ್ ಮೆಕ್‌ಗ್ರಾಥ್ ಕೂಡ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು.
ಎರಡು ವಾರಗಳ ಹಿಂದೆ ಥಾಯ್ಲೆಂಡ್‌ಗೆ ಖಾಸಗೀ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಂಜೆಯ ವೇಳೆಗೆ ಥಾಯ್ಲೆಂಡ್‌ನ ವಿಲ್ಲಾದಲ್ಲಿ ಸ್ನೇಹಿತರೊಂದಿಗೆ ಇದ್ದ ಶೇನ್ ವಾರ್ನ್ ಸಂಜೆಯ ವೇಳೆಗೆ ಪ್ರಜ್ಞಾಹೀನವಾಗಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ವಾರ್ನ್ ಮೃತಪಟ್ಟಿರುವುದಾಗಿ ಶಂಕಿಸಲಾಗಿದ್ದು ಮರಣೋತ್ತರ ಪರೀಕ್ಷೆಯಲ್ಲಿಯೂ ಶೇನ್ ವಾರ್ನ್ ಅವರದ್ದು ಸಹಜ ಸಾವು ಎಂಬುದು ಸಾಬೀತಾಗಿದೆ. ಈ ವಿಚಾರವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಪ್ರಜ್ಞಾಹೀನವಾಗಿ ಪತ್ತೆಯಾಗುದ್ದ ವಾರ್ನ್ ಅವರ ಪ್ರಾಣ ಉಳಿಸುವ ಪ್ರಯತ್ನವನ್ನು ಸ್ನೇಹಿತರು ನಡೆಸಿದರು ಎಂದು ಮಾಹಿತಿ ನೀಡಿದ್ದರು.
ಶೇನ್ ವಾರ್ನ್ ಜೊತೆಗೆ ಥಾಯ್ಲೆಂಡ್‌ನಲ್ಲಿ ರಜಾ ಕಳೆಯಲು ತೆರಳಿದ್ದ ಅವರ ಸ್ನೇಹಿತ ಟಾಮ್ ಹಾಲ್ ದಿಗ್ಗಜ ಕ್ರಿಕೆಟಿಗನ ಸಾವಿಗೆ ಒಂದು ಗಂಟೆ ಹಿಂದೆ ವಾರ್ನ್ ಹರಟಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ. ವಾರ್ನ್ ಸಾವಿಗೆ ಕೆಲವೇ ಗಂಟೆಗಳಿರುವಾರ ಐಪಿಎಲ್‌ನ ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನ ಬಗ್ಗೆ ಮಾತನಾಡಿದ್ದರು ಎಂದು ಟಾಮ್ ಹಾಲ್ ತಿಳಿಸಿದ್ದಾರೆ. ಶೇನ್ ವಾರ್ನ್ ಕೋಹ್ ಸಮುಯ್ ದ್ವೀಪದ ಸಮುಜಾನ್ ರೆಸಾರ್ಟ್‌ನಲ್ಲಿ ವಾಸವಿದ್ದ ಗೆಳೆಯರ ಗುಂಪಿನಲ್ಲಿ ಟಾಮ್ ಹಾಲ್ ಕೂಡ ಇದ್ದರು.
145 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿರುವ ಶೇನ್ ವಾರ್ನ್ 708 ವಿಕೆಟ್‌ಗಳನ್ನು ಪಡೆದುಕೊಂಡಿದ್ದು 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಅವರು ವಿಶ್ವ ಕ್ರಿಕೆಟ್‌ನಲ್ಲಿ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ.
ಇನ್ನು ಶೇನ್ ವಾರ್ನ್ ಅವರ ಅಕಾಲಿಕ ನಿಧನದ ನಂತರ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ವಾರ್ನ್ ಬಗ್ಗೆ ಭಾವನಾತ್ಮಕ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. "ಶೇನ್ ವಾರ್ನ್.. ಮಾಯಾಜಾಲಕ್ಕೆ ಅನ್ವರ್ಥ ನಾಮ. ನಮ್ಮ ಮೊದಲ ರಾಯಲ್. ಅಸಾಧ್ಯ ಎಂಬುದು ಒಂದು ಸುಳ್ಳು ಎಂಬುದನ್ನು ನಂಬುವಂತೆ ಮಾಡಿದ ವ್ಯಕ್ತಿ. ತನ್ನ ಹಾದಿಯಲ್ಲೇ ನಡೆದ, ತಾನು ನುಡಿದ ಮಾತಿನಂತೆಯೇ ಆಡಿದ, ಅಂಡರ್‌ಡಾಗ್‌ಗಳಾಗಿದ್ದವರನ್ನು ಚಾಂಪಿಯನ್ನರನ್ನಾಗಿಸಿದ ವ್ಯಕ್ತಿ. ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಸಾಮರ್ಥ್ಯ ಹೊಂದಿದ್ದ ಮಾರ್ಗದರ್ಶಕ"
"ಈ ಕ್ಷಣದಲ್ಲಿ ನಮ್ಮ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆದರೆ ಅವರ ಅವರ ಮುಗುಳಿನಗೆಯಿಲ್ಲದೆ, ಅವರ ಬಿದ್ದಿವಂತಿಕೆಯಿಲ್ಲದೆ, ಜೀವನವನ್ನು ಸಂಪೂರ್ಣವಾಗಿ ಆನಂದಿಸುವ ಅವರ ಲವಲವಿಕೆಯನ್ನು ಕಳೆದುಕೊಂಡು ಜಗತ್ತು ಎಷ್ಟು ಬಡವಾಗಿದೆ ಎಂಬುದು ನಮಗೆ ತಿಳಿದಿದೆ. ಜಗತ್ತಿನ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಂತೆಯೇ ನಮ್ಮ ಹೃದಯ ಕೂಡ ಸಂಪೂರ್ಣ ಛಿದ್ರವಾಗಿದೆ" ಎಂದು ರಾಜಸ್ಥಾನ್ ರಾಯಲ್ಸ್ ಭಾವನಾತ್ಮಕ ನುಡಿ ನಮನ ಸಲ್ಲಿದೆ.
ಶೇನ್ ವಾರ್ನ್‌ಗೆ ಆಸ್ಟ್ರೇಲಿಯಾ ಸರ್ಕಾರ ಸ್ಟೇಟ್ ಮೆಮೋರಿಯಲ್ ಸರ್ವೀಸ್ ನೀಡುವುದಾಗಿ ಘೋಷಿಸಿದ್ದು ಮಾರ್ಚ್ 30ರಂದು ಈ ಕಾರ್ಯಕ್ರಮ ಮೆಲ್ಬರ್ನ್‌ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications