ಬೆನ್ ಸ್ಟೋಕ್ಸ್ ಎಂಟ್ರಿ ಬಗ್ಗೆ ಸುಳಿವು ನೀಡಿದ ಶೇನ್ ವಾರ್ನ್

ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಲ್ ರೌಂಡರ್ ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಯಾವಾಗ ಕಣಕ್ಕಿಳಿಯಲಿದ್ದಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಶೇನ್ ವಾರ್ನ್ ಉತ್ತರಿಸಿದ್ದಾರೆ. ಬೆನ್ ಸ್ಟೋಕ್ಸ್ ತಂಡಕ್ಕೆ ಶೀಘ್ರವೇ ಮರಳುತ್ತಾರೆ ಎಂಬ ಸುಳಿವನ್ನು ನೀಡಿದ್ದಾರೆ.
ಐಪಿಎಲ್2020ರಲ್ಲಿ ರಾಜಸ್ಥಾನ್ ರಾಯಲ್ಸ್‌ಗೆ ಆಯ್ಕೆಯಾಗಿದ್ದರೂ, ಬೆನ್ ಸ್ಟೋಕ್ಸ್ ಪ್ರಸ್ತುತ ಆಟದಿಂದ ಹೊರಗುಳಿದಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಬೆನ್ ಸ್ಟೋಕ್ಸ್ ತಂಡಕ್ಕೆ ಮರಳಲಿದ್ದಾರೆ ಎಂಬ ಸುದ್ದಿಯನ್ನು ಖಚಿತಪಡಿಸಿರುವ ವಾರ್ನ್, ಬೌಲಿಂಗ್ ವಿಭಾಗದಲ್ಲೂ ಬೆನ್ ಸ್ಟೋಕ್ಸ್ ಪ್ರಮುಖ ಅಸ್ತ್ರವಾಗಿದ್ದಾರೆ ಎಂದಿದ್ದಾರೆ.
ವಿಶ್ವಕಪ್ ತಾರೆ ಸ್ಟೋಕ್ಸ್ ಅವರು ಸದ್ಯ ನ್ಯೂಜಿಲೆಂಡ್ ನಲ್ಲಿ ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ ಅವರ ತಂದೆಗೆ ಮೆದುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.
ಇಲ್ಲಿಯವರೆಗೆ, ತಂಡದ ಫ್ರ್ಯಾಂಚೈಸಿಗಳು ಬೆನ್ ಸ್ಟೋಕ್ಸ್ ಗುತ್ತಿಗೆ ನವೀಕರಣವನ್ನು ನೀಡಿರಲಿಲ್ಲ. ಆದರೆ, ರಾಜಸ್ಥಾನ್ ರಾಯಲ್ಸ್ ಮೆಂಟರ್ ಶೇನ್ ವಾರ್ನ್ ಗುತ್ತಿಗೆ ನವೀಕರಣ ನೀಡಿದ್ದಾರೆ.
ಇದಲ್ಲದೆ, ಬೆನ್ ಸ್ಟೋಕ್ಸ್ ಅವರು ನ್ಯೂಜಿಲೆಂಡ್ ನಲ್ಲಿ ಅಭ್ಯಾಸ ಮಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಒಟ್ಟಾರೆಯಾಗಿ, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದು, ವಾರ್ನ್ ನೀಡಿರುವ ಶುಭ ಸುದ್ದಿ ನಿಜವಾಗಿ ಮೈದಾನಕ್ಕೆ ಸ್ಟೋಕ್ಸ್ ಇಳಿಯಲ್ಲಿ ಎಂದು ಆಶಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications