ರಾಜಸ್ಥಾನ ರಾಯಲ್ಸ್ ಮಾರಾಟದಿಂದ ಶೇನ್ ವಾರ್ನ್ ಕುಟುಂಬಕ್ಕೆ 450 ಕೋಟಿ ಸೇರಿದ್ದು ಹೇಗೆ?
ಶೇನ್ ವಾರ್ನ್ ಅವರು ಮೈದಾನದಲ್ಲಿ ತಮ್ಮ ಮ್ಯಾಜಿಕ್ ಬೌಲಿಂಗ್‌ನಿಂದ ಫೇಮಸ್. ಐಪಿಎಲ್‌ನಲ್ಲೂ ಶೇನ್ ತಮ್ಮ ಛಾಪು ಮೂಡಿಸಿದ ಆಟಗಾರ. ಮೊದಲ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದಾಗ ಶೇನ್ ತಂಡದ ಭಾಗವಾಗಿದ್ದರು. ಅಂದು ಶೇನ್ ವಾರ್ನ್ ಅವರ ಆ ಚಾಣಕ್ಯ ನಡೆ ಮೆಚ್ಚುಗೆಗೆ ಪಾತ್ರರವಾಗಿದೆ.
ಐಪಿಎಲ್‌ನ ತಂಡಗಳಲ್ಲಿ ಒಂದಾಗಿರುವ ರಾಜಸ್ಥಾನ ರಾಯಲ್ಸ್ ತಂಡ ಮಾರಾಟವಾದ ಬಗ್ಗೆ ಈಗಾಗಲೇ ಹಲವು ಸುದ್ದಿಗಳು ಬಂದಿವೆ. ಆದರೆ ಈ ಮಾರಾಟದಲ್ಲಿ ಶೇನ್ ವಾರ್ನ್ ಅವರಿಗೆ ಷೇರು ಹೋಗುತ್ತದೆ ಎಂದರೆ ನಂಬಲು ಅಸಾಧ್ಯ. ಆದರೆ ಅಂದು ಶೇನ್ ವಾರ್ನ್ ಅವರ ಆ ಒಂದು ಜಾಣ ನಡೆಯಿಂದ ಇಂದು ಕುಟುಂಬಕ್ಕೆ 450 ಕೋಟಿ ಸಿಗುವಂತೆ ಆಗಿದೆ. ಶೇನ್ ವಾರ್ನ್ ಮಾಡಿದ ಆ ಕೆಲಸ ಏನು ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ರಾಜಸ್ಥಾನ ರಾಯಲ್ಸ್ ಮಾರಾಟ
18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಅಮೆರಿಕದ ಕಂಪನಿ ರಾಜಸ್ಥಾನ ರಾಯಲ್ಸ್ ತಂಡವನ್ನುಖರೀದಿಸಿದೆ. ಈ ತಂಡವನ್ನು ಅಮೆರಿಕದ ಕಂಪನಿ ದಾಖಲೆಯ $1.63 ಬಿಲಿಯನ್ (ಸುಮಾರು ರೂ. 15,290 ಕೋಟಿ) ಗೆ ಖರೀದಿಸಿದೆ. ಈ ವೇಳೆ ಚರ್ಚಾ ವಸ್ತುವಾಗಿದ್ದು ಶೇನ್ ವಾರ್ನ್ ಅವರ ಮಾಸ್ಟರ್‌ಸ್ಟ್ರೋಕ್ ಹೂಡಿಕೆ.
ವಾರ್ನ್ ಕುಟುಂಬಕ್ಕೆ ಬಂಪರ್
2008 ರಲ್ಲಿ ಐಪಿಎಲ್ ಪ್ರಾರಂಭವಾದಾಗ, ಶೇನ್ ವಾರ್ನ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಮತ್ತು ಮಾರ್ಗದರ್ಶಕರನ್ನಾಗಿ ನೇಮಿಸಲಾಯಿತು. ಈ ವೇಳೆ ವಾರ್ನ್ ಒಂದು ವಿಶಿಷ್ಟ ಒಪ್ಪಂದಕ್ಕೆ ಸಹಿ ಹಾಕಿದರು. ಅವರು ಆಡಿದ ಪ್ರತಿ ವರ್ಷಕ್ಕೆ ಬದಲಾಗಿ 0.75% ಈಕ್ವಿಟಿ ಪಾಲಾನ್ನು ಪಡೆಯುತ್ತಿದ್ದರು. ಇದರ ಅನುಸಾರ ಶೇನ್ ಒಟ್ಟು ನಾಲ್ಕ ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದರು. ಪರಿಣಾಮ ಅವರ ಬಳಿ 3% ಈಕ್ವಿಟಿ ಇತ್ತು.
2019 ರಲ್ಲಿ, ತಂಡದ ಮೌಲ್ಯಮಾಪನ $400 ಮಿಲಿಯನ್ ಆಗಿದ್ದಾಗ, ವಾರ್ನ್ 3% ಪಾಲು ಒಳ್ಳೆಯ ಒಪ್ಪಂದವಾಗಿತ್ತು. ಈ ಬಗ್ಗೆ ಶೇನ್ ಸಹ ಇದು ಒಂದು ಒಳ್ಳೆಯ ಒಪ್ಪಂದ ಎಂದು ಸಹ ಹೇಳಿದ್ದರು. ಅವರ ಹೇಳಿಕೆ ಈಗ ನಿಜವಾಗಿದೆ. ಶೇನ್ ವಾರ್ನ್ ಅವರ ಕುಟುಂಬ ಹೊಂದಿರುವ 3% ಪಾಲು ಈಗ ₹450 ರಿಂದ ₹460 ಕೋಟಿಗಳ ನಡುವೆ ಮೌಲ್ಯದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications