ಪೈನ್ ರನ್‌ಔಟ್‌ಗೆ ನಾಟೌಟ್ ತೀರ್ಪಿತ್ತ ಥರ್ಡ್ ಅಂಪೈರ್ ನಿರ್ಧಾರಕ್ಕೆ ಟ್ವಿಟ್ಟರ್‌ನಲ್ಲಿ ಕಿಡಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಅದ್ಭುತವಾದ ಪ್ರದರ್ಶನವನ್ನು ನೀಡಿ ಆಸ್ಟ್ರೇಲಿಯಾವನ್ನು 195 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ, ಈ ಮಧ್ಯೆ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ಅವರ ರನ್‌ಔಟ್ ಮನವಿಗೆ ಥರ್ಡ್ ಅಫೈರ್ ನೀಡಿದ ತೀರ್ಪು ಟ್ವಿಟ್ಟರ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಮಾಜಿ ಕ್ರಿಕೆಟಿಗರು ಸೇರಿದಂತೆ ಸಾಕಷ್ಟು ಅಭಿಪ್ರಾಯಗಳು ಈ ತೀರ್ಪಿನ ವಿರುದ್ಧ ಕೇಳಿ ಬಂದಿದೆ.
ಟಿಮ್ ಪೈನ್ ರನ್ ಕದಿಯುವ ವೇಳೆ ಬೇಲ್ಸ್ ಹಾರಿಸಿದ ಟೀಮ್ ಇಂಡಿಯಾ ಆಟಗಾರರು ಔಟಿಗಾಗಿ ಮನವಿ ಮಾಡಿದರು. ಈ ಮನವಿಯನ್ನು ಫೀಲ್ಡ್ ಅಂಪಾಯರ್ ಮೂರನೇ ಅಂಫಯರ್‌ಗೆ ಶುಫಾರಸುಮಾಡಿದರು. ಸಾಕಷ್ಟು ಕಠಿಣವಾಗಿದ್ದ ಈ ರನ್‌ಔಟ್ ಮನವಿಯನ್ನು ಪರಿಶೀಲನೆ ನಡೆಸಿದ ಬಳಿಕ ಮೂರನೇ ಅಂಪಾಯರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಈ ತೀರ್ಪು ಈಗ ಚರ್ಚೆಗೆ ಕಾರಣವಾಗಿದೆ.
ಮೂರನೇ ಅಂಫಾಯರ್ ನೀಡಿದ ಈ ತೀರ್ಪಿಗೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಶೇನ್ ವಾರ್ನ್ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ರನ್‌ಔಟ್ ಪರಿಶೀಲನೆಯಲ್ಲಿ ಟಿಮ್ ಪೈನ್ ಮನವಿಯನ್ನು ಮಾಡಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ಗೆರೆಯ ಮೇಲೆ ಆತನ ಬ್ಯಾಟ್‌ನ ಭಾಗವಿಲ್ಲ. ನನ್ನ ಅಭಿಪ್ರಾಯದಲ್ಲಿ ಆತ ಔಟ್" ಎಂದು ಶೇನ್ ವಾರ್ನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಅಂಪಾಯರ್ ನೀಡಿದ ಈ ತೀರ್ಪಿಗೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ತಮಾಷೆಯಾಗಿ ಈ ಸಂದರ್ಭವನ್ನು ವಾಸಿಂ ಜಾಫರ್ ಹಂಚಿಕೊಂಡಿದ್ದಾರೆ.
ಮೂರನೇ ಅಂಫಾಯರ್ ಈ ತೀರ್ಪನ್ನು ನಾಟೌಟ್ ಎಂದು ಘೋಷಿಸಿದರಾದರೂ ಅದು ತಂಡಕ್ಕೆ ಹೆಚ್ಚಿನ ಹಾನಿಯನ್ನು ಮಾಡಲಿಲ್ಲ. ಅದಾದ ಟಿಮ್ ಪೈನ್ ದೊಡ್ಡ ಮೊತ್ತವನ್ನು ಪೇರಿಸಲು ಸಾಧ್ಯವಾಗಲಿಲ್ಲ. 13 ರನ್‌ಗೆ ಟಿಮ್ ಪೈನ್ ವಿಕೆಟ್ ಒಪ್ಪಿಸಿ ಹೊರನಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications