For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್ ಗೆ ಆಲ್ ರೌಂಡರ್ ಶೇನ್ ವಾಟ್ಸನ್ ಗುಡ್ ಬೈ

ಲಂಡನ್‌ , ಸೆಪ್ಟೆಂಬರ್, 06: ಮತ್ತೊಬ್ಬ ಕ್ರಿಕೆಟ್ ದಿಗ್ಗಜ ಟೆಸ್ಟ್ ಕ್ರಿಕೆಟ್ ನಿಂದ ದೂರ ಸರಿದಿದ್ದಾರೆ. ಆಸ್ಟ್ರೇಲಿಯಾ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ಅವರು ಟೆಸ್ಟ್‌ ಕ್ರಿಕೆಟ್‌ಗೆ ಭಾನುವಾರ ನಿವೃತ್ತಿ ಘೋಷಿಸಿದ್ದಾರೆ.

ವಾಟ್ಸನ್‌ ಅವರ ನಿವೃತ್ತಿ ವಿಷಯವನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ತನ್ನ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಪ್ರಕಟ ಮಾಡಿದೆ. ಮೈಕಲ್ ಕ್ಲಾರ್ಕ ಸಹ ಆಶ್ಯಸ್‌ ಸರಣಿ ಸೋಲಿನ ಬಳಿಕ ನಿವೃತ್ತಿ ಘೋಷಣೆ ಮಾಡಿದ್ದರು.[ಎಂಎಸ್ ಧೋನಿ ಟೆಸ್ಟ್ ನಿವೃತ್ತಿ ಗುಟ್ಟು ಬಿಚ್ಚಿಟ್ಟ ರವಿ ಶಾಸ್ತ್ರಿ!]

cricket

ಕಾರ್ಡಿಫ್ ನಲ್ಲಿ ಆಡಿದ ಟೆಸ್ಟ್ ಪಂದ್ಯವೇ ವ್ಯಾಟ್ಸನ್ ಅವರ ಕೊನೆ ಪಂದ್ಯವಾಗಿದೆ. 34 ವರ್ಷದ ವ್ಯಾಟ್ಸನ್‌, ತಮ್ಮ ಕೊನೆಯ ಪಂದ್ಯದಲ್ಲಿ ಕ್ರಮವಾಗಿ 30 ಹಾಗೂ 19 ರನ್‌ಗಳ ಗಳಿಸಿದ್ದರು. ಕಳೆದ ಕೆಲ ತಿಂಗಳುಗಳಿಂದ ವಾಟ್ಸನ್ ಅವರಿಂದ ನಿರೀಕ್ಷಿತ ಪ್ರಮಾಣದ ಆಟ ಮೂಡಿಬರುತ್ತಿರಲಿಲ್ಲ.[ಲಂಕಾ ರನ್ ಚೇಸ್, ಸಂಗಕ್ಕಾರ ಕ್ರಿಕೆಟ್ ಬದುಕು ಅಂತ್ಯ]

ಆಸ್ಟ್ರೇಲಿಯಾ ಪರ 59 ಟೆಸ್ಟ್‌ ಆಡಿರುವ ಆಲ್ ರೌಂಡರ್ 35.19ರ ಸರಾಸರಿಯಲ್ಲಿ 3731 ರನ್‌ ಗಳಿಸಿದ್ದರು ಅಲ್ಲದೇ 75 ವಿಕೆಟ್‌ ಉರುಳಿಸಿದ್ದರು. ಆಶ್ಯಸ್ ಸೋಲಿನ ನಂತರ ಎರಡು ಆಟಗಾರರು ಅಂದರೆ ಮೈಕಲ್ ಕ್ಲಾರ್ಕ್ ಮತ್ತು ವ್ಯಾಟ್ಸನ್ ನಿವೃತ್ತಿ ಘೋಷಣೆ ಮಾಡಿದಂತಾಗಿದೆ. ಶ್ರೀಲಂಕಾದ ಕುಮಾರ ಸಂಗಕ್ಕಾರ ಸಹ ಕೆಲ ದಿನಗಳ ಹಿಂದೆ ಟೆಸ್ಟ್ ಕ್ರಿಕೆಟ್ ನಿಂದ ದೂರ ಸರಿದಿದ್ದರು.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+