ಆಸೀಸ್ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಚಿತ್ರ!

ಸಿಡ್ನಿ, ಅಕ್ಟೋಬರ್ 15: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಆಟಗಾರ ಶೇನ್ ವಾಟ್ಸನ್ ಅವರು ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್‌ನಲ್ಲಿ ಶೇನ್ ವಾಟ್ಸನ್ ಹೆಸರಿನಲ್ಲಿ ಅಶ್ಲೀಲ ಚಿತ್ರ ಪೋಟ್ಸ್ ಆಗಿದ್ದು ಇದಕ್ಕೆ ಕಾರಣ.
ಶೇನ್ ವಾಟ್ಸನ್ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಮಂಗಳವಾರ (ಅಕ್ಟೋಬರ್ 15) ಹ್ಯಾಕ್ ಆಗಿದೆ. ಹ್ಯಾಕ್ ಮಾಡಿರುವ ಕಿಡಿಗೇಡಿಗಳು ವಾಟ್ಸನ್ ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾರೆ.
ಇದಕ್ಕೂ ಮುನ್ನ ಶೇನ್ ವಾಟ್ಸನ್ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು.

ಕ್ಷಮೆಯಾಚಿಸಿದ ವಾಟ್ಸನ್
ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಶ್ಲೀಲ ಚಿತ್ರಗಳು ಅಪ್ಲೋಡ್ ಆಗುತ್ತಿರುವುದು ಗಮನಕ್ಕೆ ಬರುತ್ತಲೇ ವಾಟ್ಸನ್ ಎಚ್ಚೆತ್ತುಕೊಂಡಿದ್ದಾರೆ. ತನ್ನ ಖಾತೆಯ ಮೂಲಕ ಅಶ್ಲೀಲ ಚಿತ್ರಗಳು ಅಪ್ಲೋಡ್ ಆಗಿದ್ದಕ್ಕೆ ವಾಟ್ಸನ್ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.
ಪ್ರೊಫೈಲ್ ಚಿತ್ರ ಬದಲು
ವಾಟ್ಸನ್ ಇನ್‌ಸ್ಟಾಗ್ರಾಮ್ ಹ್ಯಾಕ್ ಮಾಡೋದಕ್ಕೂ ಮುನ್ನ ವಾಟ್ಸನ್ ಟ್ವಿಟರ್ ಖಾತೆ ಹ್ಯಾಕ್ ಮಾಡಿದ್ದ ಹ್ಯಾಕರ್ಸ್, ಖಾತೆಯ ಪ್ರೊಫೈಲ್ ಪಿಕ್ಚರನ್ನೇ ಬದಲಿಸಿದ್ದರು. ಅಕ್ಷೇಪಾರ್ಹ ಚಿತ್ರವನ್ನು ಪ್ರೊಫೈಲ್‌ಗೆ ಹಾಕಿದ್ದರು.

ಶೇನ್ ಅಸಮಾಧಾನ
'ನನ್ನ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಕೆಟ್ಟ ಚಿತ್ರಗಳು ಪ್ರಕಟವಾಗಿದ್ದಕ್ಕೆ ಎಲ್ಲರಲ್ಲೂ ಕ್ಷಮೆ ಯಾಚಿಸುತ್ತೇನೆ. ಮೊದಲು ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು, ಇವತ್ತು ಇನ್‌ಸ್ಟಾಗ್ರಾಮ್. ಇಂಥದ್ದಾದಾಗ ಇದನ್ನು ಬೇಗನೆ ಸರಿಪಡಿಸಲು ಇನ್‌ಸ್ಟಾಗ್ರಾಮ್ ಸಹರಿಸಬೇಕು. ಇದು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ,' ಎಂದು ವಾಟ್ಸನ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ದೊಡ್ಡ ಸಂಖ್ಯೆಯ ಫಾಲೋವರ್ಸ್
'rwatson33' ಎಂಬ ಹೆಸರಿನಲ್ಲಿರುವ ವಾಟ್ಸನ್ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 1.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅಕೌಂಟ್ ಹ್ಯಾಕ್ ಮಾಡಿದ್ದ ಹ್ಯಾಕರ್ಸ್, ಖಾತೆಯಲ್ಲಿ ಯಾವುದೋ ಜಾಲತಾಣದ ಲಿಂಕ್ ಹಾಕಿ ಅಶ್ಲೀಲ, ಕೆಟ್ಟ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications