ಕಳೆದ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಬಳಿಕ ಈ ಪ್ಲೇಯರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮೂರನೇ ಕ್ರಮಾಂಕಕ್ಕೆ ನ್ಯಾಯ ಒದಗಿಸಿದ್ದ ಪ್ಲೇಯರ್, ಈಗ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅಂದು ವಿದೇಶಿ ಪ್ರವಾಸಕ್ಕೆ ಭಾರತ ತಂಡ ಟೆಸ್ಟ್ ಸರಣಿ ಆಡಲು ಹೊರಟರೆ, ಈ ಪ್ಲೇಯರ್ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತಿತ್ತು. ಆದರೆ ಈಗ ಅವಕಾಶ ವಂಚಿತರಾಗಿದ್ದಾರೆ. ಈ ವರ್ಷ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಚೇತೇಶ್ವರ್ ಪೂಜಾರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆಯಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಡುವುದು ಅನುಮನಾವಾಗಿದೆ. ಟೆಸ್ಟ್ ಸ್ಪೇಷಲಿಸ್ಟ್ ಬ್ಯಾಟರ್ ಇಲ್ಲದೆ ಆಸೀಸ್ ಪ್ರವಾಸ ಬೆಳಿಸದರೆ ಟೀಮ್ ಇಂಡಿಯಾ ಕಥೆ ಏನು ಎಂಬ ಪ್ರಶ್ನೆಗಳು ಕಾಡುತ್ತಿವೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿದ ಚೇತೇಶ್ವರ್ ಪೂಜಾರ ಸದ್ಯ ತಂಡದಿಂದ ಹೊರಗುಳಿದಿದ್ದಾರೆ. ಆದರೆ ಕಳೆದ ಪ್ರವಾಸದಲ್ಲಿ ಇವರು ಆಸೀಸ್ ತಂಡವನ್ನು ಕಾಡಿದ್ದು ಈಗಲೂ ನೆನಪಾಗುತ್ತದೆ. ಇವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಬೌನ್ಸಿ ಪಿಚ್‌ನಲ್ಲಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದೇ ಎಲ್ಲರ ಪ್ರಶ್ನೆ ಆಗಿದೆ.

ಚೇತೇಶ್ವರ್ ಪೂಜಾರ್ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರ ಎಂದು ಮತ್ತೊಮ್ಮೆ ಸಾಬಿತು ಪಡಿಸಿದ್ದು ಆಸ್ಟ್ರೇಲಿಯಾದಲ್ಲಿ. 2021ರಲ್ಲಿ ಭಾರತ, ಆಸೀಸ್ ಪ್ರವಾಸ ಬೆಳಸಿದ್ದಾಗ, ನಾಲ್ಕನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಪೂಜಾರ ತಮ್ಮಲ್ಲಿರುವ ಕ್ಲಾಸ್ ಬ್ಯಾಟಿಂಗ್ ಪ್ರಸ್ತುತ ಪಡಿಸಿದರು.
ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡಿದ ಪೂಜಾರ್ ಬೌನ್ಸಿ ಟ್ರ್ಯಾಕ್ ಸವಾಲುಗಳನ್ನು ನಿರ್ಭಿತಿಯಿಂದ ಎದುರಿಸಿದರು. 11 ಎಸೆತಗಳು ದೇಹಕ್ಕೆ ಬಡಿದ ಪರಿಣಾಮ ಅವರಿಗೆ ಗಾಯವೂ ಆಗಿತ್ತು. ಆದರೆ ಈ ವೇಳೆ ಪೂಜಾರ ಅಮೋಘ ಇನಿಂಗ್ಸ್ ಕಟ್ಟಿದರು. ಈ ಇನಿಂಗ್ಸ್‌ನಲ್ಲಿ ಪೂಜಾರ ಶತಕ ಬಾರಿಸದೆ ಇದ್ದರೂ, ತಂಡವನ್ನು ಅಪಾಯದಿಂದ ಪಾರು ಮಾಡಿದರು. ಎರಡನೇ ಇನಿಂಗ್ಸ್‌ನಲ್ಲಿ 211 ಎಸೆತಗಳನ್ನು ಎದುರಿಸಿ 56 ರನ್ ಸಿಡಿಸಿದರು.
ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾ ತಂಡವನ್ನು ಬಹುವಾಗಿ ಕಾಡುವ ಆಟಗಾರ. ತವರು ಹಾಗೂ ವಿದೇಶಿ ನೆಲದಲ್ಲಿ ಟೆಸ್ಟ್ ಆದಗಲೂ ಇವರು ತಂಡದ ನೆರವಿಗೆ ನಿಂತ ಪ್ಲೇಯರ್. ಈ ವರಗೆ ಇವರು ಭಾರತದಲ್ಲಿ ಆಸೀಸ್ ವಿರುದ್ಧ 25 ಟೆಸ್ಟ್ ಪಂದ್ಯಗಳ 45 ಇನಿಂಗ್ಸ್‌ಗಳಲ್ಲಿ ಕಣಕ್ಕೆ ಇಳಿದಿದ್ದು, 49.38ರ ಸರಾಸರಿಯಲ್ಲಿ 2074 ರನ್ ಸಿಡಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 11 ಅರ್ಧಶತಕಗಳು ಸೇರಿವೆ.
ಆಸ್ಟ್ರೇಲಿಯಾದಲ್ಲೂ ಪೂಜಾರ ಅಬ್ಬರಿಸಿದ್ದಾರೆ. ಕಾಂಗರೂ ನಾಡಿನಲ್ಲಿ ಆಡಿದ 11 ಟೆಸ್ಟ್ ಪಂದ್ಯಗಳ 21 ಇನಿಂಗ್ಸ್‌ಗಳಲ್ಲಿ 47.28ರ ಸರಾಸರಿಯಲ್ಲಿ 993 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 3 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ.