Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SL vs BAN Test: ಲಂಕಾ ವಿರುದ್ಧ ಬಾಂಗ್ಲಾಕ್ಕೆ ದಿನದ ಗೌರವ: ನಜ್ಮುಲ್, ಮುಷ್ಫೀಕರ್ ಶತಕ

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ 2025-27ನೇ ಸೈಕಲ್‌ನಲ್ಲಿ ಟೆಸ್ಟ್‌ ಸರಣಿಗಳು ಆರಂಭವಾಗಿವೆ. ಈ ಚಕ್ರದಲ್ಲಿ ನಡೆಯುತ್ತಿರುವ ಮೊದಲ ಸರಣಿಯಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಿದವು. ಶ್ರೀಲಂಕಾ ಪ್ರವಾಸದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆಯಿತು. ಈ ವೇಳೆ ಬಾಂಗ್ಲಾ ದಿನದಾಟದಂತ್ಯಕ್ಕೆ 3 ವಿಕೆಟ್‌ಗೆ 292 ರನ್‌ ಕಲೆ ಹಾಕಿದ್ದು ಸುಸ್ಥಿತಿಯಲ್ಲಿದೆ.

ಮಂಗಳವಾರದಿಂದ ಆರಂಭವಾದ ಮೊದಲ ಟೆಸ್ಟ್‌ ಪಂದ್ಯಕ್ಕೆ ಶ್ರೀಲಂಕಾದ ಗಾಲೆ ಮೈದಾನ ಸಾಕ್ಷಿಯಾಗಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡದ ಆರಂಭ ಕಳಪೆಯಾಗಿತ್ತು. ಶಾದ್ಮನ್ ಇಸ್ಲಾಂ (14), ಅನಾಮುಲ್ ಹಕ್ (0), ಮೊಮಿನುಲ್ ಹಕ್ (29) ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಪ್ರವಾಸಿ ತಂಡ 45 ರನ್ ಆಗುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.

Shanto Rahim Centuries Put Bangladesh in Strong Position on Day 1 of WTC 2025-27 Opener vs SL

ನಾಲ್ಕನೇ ವಿಕೆಟ್‌ಗೆ ನಾಯಕ ನಜ್ಮುಲ್ ಹೊಸೇನ್ ಶಾಂತೊ ಹಾಗೂ ಮುಷ್ಫೀಕರ್ ರಹೀಮ್‌ ತಂಡವನ್ನು ಒತ್ತಡದ ಸನ್ನಿವೇಶದಲ್ಲಿ ಪಾರು ಮಾಡುವ ಹೊಣೆಗಾರಿಕೆಯನ್ನು ಹೊತ್ತುಕೊಂಡರು. ಈ ಇಬ್ಬರೂ ಆಟಗಾರರು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಿದರು. ಅಲ್ಲದೆ ಶ್ರೀಲಂಕಾ ತಂಡದ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದರು. ಈ ಇಬ್ಬರೂ ಆಟಗಾರರು ತಮ್ಮ ಅನುಭವದ ಲಾಭ ಪಡೆದು ಇನಿಂಗ್ಸ್‌ ಬೆಳೆಸಿದರು. ಈ ಜೋಡಿ ಬಾಂಗ್ಲಾ ತಂಡ ಮತ್ತೆ ವಿಕೆಟ್‌ ನೀಡದಂತೆ ತಡೆಯುವಲ್ಲಿ ಸಫಲವಾಯಿತು.

ಭರ್ಜರಿ ಜೊತೆಯಾಟ

ಒತ್ತಡದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದ ನಜ್ಮುಲ್ ಹೊಸೇನ್ ಶಾಂತೊ ಹಾಗೂ ಮುಷ್ಫೀಕರ್ ರಹೀಮ್‌ ಕ್ಲಾಸ್‌ ಇನಿಂಗ್ಸ್ ಕಟ್ಟಿದರು. ಈ ಜೋಡಿಯ ಆಟದ ಪರಿಣಾಮ ಬಾಂಗ್ಲಾ ಮೊದಲದಿನದಾಟದ ಅಂತ್ಯಕ್ಕೆ ಸುಸ್ಥಿತಿಯಲ್ಲಿದೆ. ಈ ಜೋಡಿ 443 ಎಸೆತಗಳಲ್ಲಿ ಅಜೇಯ 247 ರನ್‌ ಸೇರಿಸಿ ಮಿಂಚಿತು. ಪರಿಣಾಮ ಪ್ರವಾಸಿ ತಂಡ ಮೊದಲ ಇನಿಂಗ್ಸ್‌ನಲ್ಲಿ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವತ್ತ ಚಿತ್ತ ನೆಟ್ಟಿದೆ.

Shanto Rahim Centuries Put Bangladesh in Strong Position on Day 1 of WTC 2025-27 Opener vs SL

ಹೊಸ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ ಮೊದಲ ದಿನವೇ ಇಬ್ಬರು ಬ್ಯಾಟರ್‌ಗಳು ಶತಕ ಬಾರಿಸಿ ಇತಿಹಾಸ ನಿರ್ಮಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ನಜ್ಮುಲ್ ಹೊಸೇನ್ ಶಾಂತೊ 260 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 136 ರನ್‌ ಸಿಡಿಸಿದರು. ಇನ್ನೋಬ್ಬ ಅನುಭವಿ ಬ್ಯಾಟರ್‌ ಮುಷ್ಫೀಕರ್ ರಹೀಮ್‌ ಸಹ ಶತಕ ಬಾರಿಸಿ ಮಿಂಚಿದರು. ಇವರು ತಾಳ್ಮೆಯ ಬ್ಯಾಟಿಂಗ್ ನಡೆಸಿ ಅಜೇಯ ಶತಕ ಬಾರಿಸಿದರು. ಈ ವೇಳೆ 5 ಬೌಂಡರಿಗಳು ಸೇರಿವೆ. ಇನ್ನು ಈ ಇಬ್ಬರೂ ಆಟಗಾರರು ಬುಧವಾರ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಜೋಡಿ ಎರಡನೇ ದಿನದಾಟದಲ್ಲೂ ಆಟವನ್ನು ಮುಂದುವರೆಸಿ ತಂಡವನ್ನು ಸುಸ್ಥಿತಿಯಲ್ಲಿ ಇಡುವ ಕನಸು ಕಾಣುತ್ತಿದೆ.

Story first published: Tuesday, June 17, 2025, 19:32 [IST]
Other articles published on Jun 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+