5ನೇ ಕ್ರಮಾಂಕದಲ್ಲಿ ಜಡೇಜಾ ಕಣಕ್ಕಿಳಿಯಲು ಕಾರಣ ತಿಳಿಸಿದ ಶಾರ್ದೂಲ್ ಠಾಕೂರ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ನಾಯಕನ ನಿರ್ಧಾರವೊಂದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಮೂಲಕ ಅಚ್ಚರಿ ಮೂಡಿಸಿದರು. ಅಜಿಂಕ್ಯಾ ರಹಾನೆ ಹಾಗೂ ರಿಷಬ್ ಪಂತ್ ಕ್ರೀಸ್‌ಗೆ ಇಳಿಯುವ ಮುನ್ನವೇ ಜಡೇಜಾ ಬ್ಯಾಟಿಂಗ್‌ಗೆ ಇಳಿದಿದ್ದರು. ಮೊದಲ ದಿನದಾಟದಲ್ಲಿ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರ ವಲಯದಲ್ಲಿ ನಡೆದಿದೆ.
ಈ ವಿಚಾರವಾಗಿ ಟೀಮ್ ಇಂಡಿಯಾದ ಆಟಗಾರ ಶಾರ್ದೂಲ್ ಠಾಕೂರ್ ಪ್ರತಿಕ್ರಿಯೆ ನೀಡಿದರು. ಮೊದಲ ದಿನದಾಟದ ನಂತರ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಠಾಕೂರ್ ರವೀಂದ್ರ ಜಡೇಜಾಗೆ ಬ್ಯಾಟಿಂಗ್‌ನಲ್ಲಿ ಬಡ್ತಿ ನೀಡಲು ಕಾರಣವೇನೆಂಬ ಬಗ್ಗೆ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಶಾರ್ದೂಲ್ ಠಾಕೂರ್ ಉತ್ತರವನ್ನು ನೀಡಿದ್ದಾರೆ. ಇದೊಂದು ಪೂರ್ವ ನಿರ್ಧರಿತ ರಣತಂತ್ರ ಎಂದಿದ್ದಾರೆ ಠಾಕೂರ್.
"ಎಡಗೈ ಬಲಗೈ ಸಂಯೋಜನೆಯಲ್ಲಿ ಆಡುವ ಹಾಗೂ ರವೀಂದ್ರ ಜಡೇಜಾಗೆ ಬಡ್ತಿ ನೀಡುವ ಬಗ್ಗೆ ಸುದೀರ್ಘ ಕಾಲದಿಂದ ಚಿಂತನೆ ನಡೆಯುತ್ತಿತ್ತು. ಎಡಗೈ ಆಟಗಾರರಾಗಿ ಕೆಳ ಕ್ರಮಾಂಕದಲ್ಲಿ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಇದ್ದರು. ಇಬ್ಬರು ಮ್ಯಾಚ್ ವಿನ್ನಿಂಗ್ ಆಟಗಾರರಾಗಿದ್ದಾರೆ. ಇದರಲ್ಲಿ ಫಾರ್ಮ್‌ನಲ್ಲಿರುವ ರವೀಂದ್ರ ಜಡೇಜಾಗೆ ಬಡ್ತಿ ನೀಡಲು ನಿರ್ಧರಿಸಲಾಯಿತು. ಹೀಗಾಗಿ ಓವಲ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದಾರೆ" ಎಂದು ಶಾರ್ದೂಲ್ ವಿವರಿಸಿದರು.
"ಈ ನಿರ್ಧಾರವನ್ನು ತುಂಬಾ ಹಿಂದೆಯೇ ಮಾಡಲಾಗಿತ್ತು. ಆದರೆ ಈಗ ರಿಷಭ್ ಪಂತ್ ಅಥವಾ ರವೀಂದ್ರ ಜಡೇಜಾ ಆಡುವ ಕ್ರಮಾಂಕದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಯಾರು ಬ್ಯಾಟಿಂಗ್‌ಗೆ ಇಳಿಯುತ್ತಾರೆ ಎಂಬುದು ಒಂದು ವಿಚಾರವೇ ಅಲ್ಲ. ಯಾಕೆಂದರೆ ಇಬ್ಬರು ಕೂಡ ತಂಡದ ಮ್ಯಾಚ್ ವಿನ್ನರ್‌ಗಳು. ರವೀಂದ್ರ ಜಡೇಜಾ ನಿರ್ಣಾಯಕ ಸಂದರ್ಭದಲ್ಲಿ ರನ್‌ಗಳಿಸುಯವ ಮೂಲಕ ತಂಡಕ್ಕೆ ನೆರವಾಗಿದ್ದನ್ನು ನಾವು ಸಾಕಷ್ಟು ಸಂದರ್ಭಗಳಲ್ಲಿ ಗಮನಿಸಿದ್ದೇವೆ. ಇಂಗ್ಲೆಂಡ್ ಪ್ರವಾಸದಲ್ಲಿಯೂ ಜಡೇಜಾ ಬ್ಯಾಟಿಂಗ್‌ನಲ್ಲಿ ಉಪಯುಕ್ತಕೊಡುಗೆ ನೀಡಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಹಾಗೂ ಲಾರ್ಡ್ಸ್ ಟೆಸ್ಟ್‌ನಲ್ಲಿ ಅವರು ಕ್ರೀಸ್‌ನಲ್ಲಿ ಹೆಚ್ಚು ಕಾಲ ಕಳೆದಿರುವುದನ್ನು ಗಮನಿಸಿದ್ದೀರಿ. ಆತ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಘಿ ಎಡಗೈ ಬಲಗೈ ಸಂಯೋಜನೆ ಕಾಪಾಡಿಕೊಳ್ಳಲು ಜಡೇಜಾಗೆ ವಿಶ್ರಾಂತಿಯನ್ನು ನೀಡಲಾಯಿತು" ಎಂದಿದ್ದಾರೆ ಶಾರ್ದೂಲ್ ಠಾಕೂರ್.
ಟೀಮ್ ಇಂಡಿಯಾದ ಈ ನಡೆಗೆ ಸಂಜಯ್ ಮಂಜ್ರೇಕರ್ ಟೀಕೆಯನ್ನು ವ್ಯಕ್ತಪಡಿಸಿದರು. ಇದನ್ನು ಮಂಜ್ರೇಕರ್ ಊಹಿಸಲು ಸಾಧ್ಯವಿಲ್ಲದ ಯೋಚನೆಯಿದು ಎಂದಿದ್ದಾರೆ. ಆದರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಈ ನಿರ್ಧಾರವನ್ನು ರಣತಂತ್ರದ ನಡೆ ಎಂದು ಬಣ್ಣಿಸಿದರು. "ಭಾರತ ತಂಡ ಎಡಗೈ ಬಲಗೈ ಸಂಯೋಜನೆಯನ್ನು ಹೊಂದಲು ಬಯಸಿದೆಯಾ? ಅದು ಸಾಧ್ಯವಿಲ್ಲ ಯಾಕೆಂದರೆ ರಿಷಭ್ ಪಂತ್ ಇನ್ನೂ ಬ್ಯಾಟಿಂಗ್‌ಗೆ ಇಳಿಯಬೇಕಾಗಿತ್ತು. ಆದರೆ ಜಡೇಜಾ ಯಾವ ಕಾರಣಕ್ಕೆ. ಜಡೇಜಾ ಸಿದ್ಧರಾಗಿಲ್ಲದಿದ್ದರೆ ಪಂತ್ ಕೂಡ ಸಿದ್ಧವಾಗಿರಲಿಲ್ಲವೇ? ಜಡೇಜಾ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಎಂದರೆ ಯೋಚಿಸುವುದು ಕೂಡ ಅಸಾಧ್ಯ" ಎಂದು ಸಂಜಯ್ ಮಂಜ್ರೇಕರ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಆದರೆ ಟೀಮ್ ಇಂಡಿಯಾದ ಈ ನಡೆ ಮೊದಲ ಇನ್ನಿಂಗ್ಸ್‌ನಲ್ಲಿ ವಿಫಲವಾಗಿದೆ. ರವೀಂದ್ರ ಜಡೇಜಾ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ತಂಡಕ್ಕೆ ಹೆಚ್ಚಿನ ಲಾಭವೇನೂ ಆಗಲಿಲ್ಲ. 34ನ ಎಸೆತಗಳನ್ನು ಎದುರಿಸಿದ ಜಡ್ಡು 10 ರನ್‌ಗಳನ್ನು ಬಾರಿಸಿ ವಿಕೆಟ್ ಕಳೆದುಕೊಂಡರು. ನಂತರ ಬ್ಯಾಟಿಂಗ್‌ಗೆ ಬಂದ ಅಜಿಂಕ್ಯಾ ರಹಾನೆ ಹಾಗೂ ರಿಷಭ್ ಪಂತ್ ಕೂಡ ಕ್ರಮವಾಗಿ 14 ಹಾಗೂ 9 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.
ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ರವೀಂದ್ರ ಜಡೇಜಾ, ರಿಷಭ್ ಪಂತ್ (ವಿಕೆಟ್ ಕೀಪರ್), ಅಜಿಂಕ್ಯ ರಹಾನೆ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬೂಮ್ರಾ.
ಇಂಗ್ಲೆಂಡ್ ಆಡುವ ಬಳಗ: ಹಸೀಬ್ ಹಮೀದ್, ರೋರಿ ಬರ್ನ್ಸ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಒಲ್ಲಿ ಪೋಪ್, ಕ್ರೇಗ್ ಓವರ್‌ಟನ್, ಜಾನಿ ಬೈರ್‌ಸ್ಟೊವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್,ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಒಲ್ಲಿ ರಾಬಿನ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications