Successful surgery: ಶಸ್ತ್ರಚಿಕಿತ್ಸೆ ಬಳಿಕ ಫೋಟೋ ಹಂಚಿಕೊಂಡ ಶಾರ್ದೂಲ್ ಠಾಕೂರ್; ಗಾಯಗೊಂಡಿರುವ ಬಗ್ಗೆ ತಿಳಿಯಿರಿ!
ಜೂನ್ 12 ಬುಧವಾರ, ಇತ್ತೀಚೆಗೆ ಭಾರತದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಪಾದದ ನೋವಿನಿಂದ ಬಳಲುತ್ತಿದ್ದರು. ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕೀಳಿದಿದ್ದ ಶಾರ್ದೂಲ್ ಠಾಕೂರ್ ಅವರಿಗೆ ಕ್ರಿಕೆಟ್ ಆಡಲು ಕಷ್ಟಕರವಾಗಿತ್ತು.
ಇದಾದ ಬಳಿಕ ಶಾರ್ದೂಲ್ ಠಾಕೂರ್ ಅವರು ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗಾಗಿ ಒಳಗಾಗಿದ್ದರು. ಇದೀಗಾ ಪಾದದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಈ ಮಾಹಿತಿಯನ್ನು ಸ್ವತಃ ಶಾರ್ದೂಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಕೂಡ ಶಾರ್ದೂಲ್ ಐಪಿಎಲ್ 2019ರಲ್ಲಿ ಗಾಯಗೊಂಡಿದಾಗ ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಚಿತ್ರವನ್ನು ಶಾರ್ದೂಲ್ ಠಾಕೂರ್ ಪೋಸ್ಟ್ ಮಾಡಿ
ಹಂಚಿಕೊಂಡಿದ್ದಾರೆ . 'ಆಪರೇಷನ್ ಯಶಸ್ವಿ' ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಕೇಂದ್ರೀಯ ಗುತ್ತಿಗೆಯಲ್ಲಿ ಶಾರ್ದೂಲ್ 'ಡಿ' ಗ್ರೇಡ್ ನಲ್ಲಿರುವ ಕಾರಣ ಅವರ ಸಂಪೂರ್ಣ ಶಸ್ತ್ರಚಿಕಿತ್ಸೆ ವೆಚ್ಚವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭರಿಸಲಿದೆ.

ಗಾಯದ ಸರಮಾಲೆಯಲ್ಲಿ ಶಾರ್ದೂಲ್
ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ವೇಳೆ ಶಾರ್ದೂಲ್ ಠಾಕೂರ್ ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಲಾರ್ಡ್ಸ್ ಟೆಸ್ಟ್‌ನಲ್ಲಿ ಮಂಡಿರಜ್ಜು ಸಮಸ್ಯೆಯಿಂದ ಹೊರಗುಳಿದಿದ್ದರು.
ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಪಾದದ ಗಾಯದಿಂದಾಗಿ ಹೊರಗುಳಿಯುವ ಮೂಲಕ ಕೇರಳ ವಿರುದ್ಧದ ನಿರ್ಣಾಯಕ ರಣಜಿ ಟ್ರೋಫಿ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು.
ಈ ಹಿನ್ನಡೆಗಳ ನಡುವೆಯೂ ಶಾರ್ದೂಲ್ ಠಾಕೂರ್ ಭಾರತದ ಪ್ರಧಾನ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಾದ ರಣಜಿ ಟ್ರೋಫಿಯಲ್ಲಿ ಪ್ರಬಲ ಪುನರಾಗಮನ ಮಾಡಿದ್ದರು.
ಠಾಕೂರ್ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಡಿಸೆಂಬರ್ 2023ರಲ್ಲಿ ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದರಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆಯಲು ಶಕ್ತರಾಗಿದ್ದರು.
ಇದರ ನಂತರ, ಶಾರ್ದೂಲ್ ಠಾಕೂರ್ ರಣಜಿ ಟ್ರೋಫಿಯಲ್ಲಿ ಮಿಂಚಿದ್ದರು. ಅಲ್ಲಿ ಶಾರ್ದೂಲ್ ಮುಂಬೈ ಗೆಲುವಿನ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆಡಿದ ಐದು ಪಂದ್ಯಗಳಲ್ಲಿ 255 ರನ್ ಗಳಿಸಿದ್ದರು. ತಮಿಳುನಾಡು ವಿರುದ್ಧದ ಸೆಮಿಫೈನಲ್‌ನಲ್ಲಿ ಅದ್ಭುತ ಶತಕ ಮತ್ತು 4 ವಿಕೆಟ್‌ಗಳನ್ನು ಗಳಿಸುವ ಮೂಲಕ ಪಂದ್ಯದ ಆಟಗಾರ ಪ್ರಶಸ್ತಿ ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications