Shardul Thakur Marriage : ಮದುವೆ ಸಂಭ್ರಮದಲ್ಲಿ ಶಾರ್ದೂಲ್ ಠಾಕೂರ್: ಸ್ನೇಹಿತರು, ಕುಟುಂಬದವರ ಜೊತೆ ಭರ್ಜರಿ ಡ್ಯಾನ್ಸ್!

ಭಾರತ ತಂಡದ ಕ್ರಿಕೆಟಿಗರಿಗೆ ಈ ವರ್ಷ ಮದುವೆಯ ಯೋಗ ಚೆನ್ನಾಗಿ ಕೂಡಿ ಬಂದಂತಿದೆ. 2023ರಲ್ಲಿ ಎರಡು ತಿಂಗಳು ಪೂರ್ತಿಯಾಗುವ ಮುನ್ನವೇ ಹಲವು ಕ್ರಿಕೆಟಿಗರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಕೂಡ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧವಾಗಿದ್ದಾರೆ. ಫೆಬ್ರವರಿ 27ರಂದು ಶಾರ್ದೂಲ್ ಠಾಕೂರ್ ಮಿತಾಲಿ ಪರುಲ್ಕರ್ ಅವರನ್ನು ವರಿಸಲಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಮಿತಾಲಿ ಪಾರುಲ್ಕರ್ ಮದುವೆಯಾಗುವ ವಿಚಾರವನ್ನು ಬಹಿರಂಗಪಡಿಸಿದ್ದರು.
WPL 2023: ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ತಂಡದ ಜೆರ್ಸಿಯನ್ನು ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್
ಮದುವೆಗೆ ಮುನ್ನ ನಡೆಯುವ ಅರಿಶಿಣ ಶಾಸ್ತ್ರದಲ್ಲಿ ಶಾರ್ದೂಲ್ ಠಾಕೂರ್ ಭರ್ಜರಿಯಾಗಿ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಮನೆಯಲ್ಲಿ ನಡೆದ ಶಾಸ್ತ್ರದಲ್ಲಿ ಜಿಂಗಾಟ್ ಹಾಡಿಗೆ ಶಾರ್ದೂಲ್ ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆಗೂಡಿ ಕುಣಿದಿದ್ದಾರೆ.
ಅರಿಶಿಣ ಶಾಸ್ತ್ರದ ವಿಡಿಯೋವನ್ನು ಸ್ವತಃ ಶಾರ್ದೂಲ್ ಠಾಕೂರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕುರ್ತಾ ಧರಿಸಿರುವ ಶಾರ್ದೂಲ್ ಠಾಕೂರ್ ಮತ್ತು ಮೆಹಂದಿ ಹಾಕಿಕೊಂಡಿರುವ ಮಿತಾಲಿ ಪಾರುಲ್ಕರ್ ಸುಂದರವಾಗಿ ಕಾಣಿಸುತ್ತಾರೆ. ಮುಂಬೈನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದು, ಕೆಲವೇ ಆಪ್ತರು ಮಾತ್ರ ಮದುವೆಯಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿದೆ.
2021ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ
ಶಾರ್ದೂಲ್ ಠಾಕೂರ್ ಮತ್ತು ಮಿತಾಲಿ ಪಾರುಲ್ಕರ್ ಮೊದಲಿನಿಂದಲೂ ಸ್ನೇಹಿತರಾಗಿದ್ದರು. 2021ರ ನವೆಂಬರ್ ತಿಂಗಳಿನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಮಿತಾಲಿ ಪಾರುಲ್ಕರ್ ಉದ್ಯಮಿಯಾಗಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಶಾರ್ದೂಲ್ ಠಾಕೂರ್ ಮಿತಾಲಿ ಜೊತೆ ನೃತ್ಯ ಮಾಡಿದ್ದ ವಿಡಿಯೋವನ್ನು ಮದುವೆ ಸಮಯದಲ್ಲಿ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
2022ರ ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ಮುಗಿದ ಬಳಿಕ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಕಾರಣಾಂತರಗಳಿಂದ ಮದುವೆ ದಿನಾಂಕವನ್ನು ಮುಂದೂಡಲಾಗಿತ್ತು. ಈಗ ಫೆಬ್ರವರಿ 27ರಂದು ಮದುವೆಯಾಗಲಿದ್ದಾರೆ.

ಸಾಲು ಸಾಲು ಕ್ರಿಕೆಟಿಗರ ಮದುವೆ
2023ರಲ್ಲಿ ಸಾಲು ಸಾಲು ಕ್ರಿಕೆಟಿಗರು ಮದುವೆಯಾಗುತ್ತಿದ್ದಾರೆ. ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಜನವರಿಯಲ್ಲಿ ಮದುವೆಯಾಗಿದ್ದರು. ನಂತರ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ತಮ್ಮ ಬಹುಕಾಲದ ಗೆಳತಿ ಮೇಹಾ ಪಟೇಲ್‌ರನ್ನು ಮದುವೆಯಾಗಿದ್ದರು.
ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ರಾಜಸ್ಥಾನದ ಉದಯ್‌ಪುರದಲ್ಲಿ ತಮ್ಮ ಹೆಂಡತಿ ನತಾಶ ಜೊತೆ ಅದ್ದೂರಿಯಾಗಿ ಮರುಮದುವೆಯಾಗುವ ಮೂಲಕ ಗಮನ ಸೆಳೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications