Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಂಡ ಶಾರ್ದೂಲ್ ಠಾಕೂರ್

Shardul Thakur has joined with Chennai Super Kings ahead of IPL 2021

ಮುಂಬೈ: ಟೀಮ್ ಇಂಡಿಯಾದ ಪ್ರಮುಖ ಬೌಲರ್ ಶಾರ್ದೂಲ್ ಠಾಕೂರ್ ಶನಿವಾರ (ಎಪ್ರಿಲ್ 3) ಚೆನ್ನೈ ಸೂಪರ್ ಕಿಂಗ್ಸ್‌ ಸೇರಿಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಠಾಕೂರ್ ಅದ್ಭುತ ಪ್ರದರ್ಶನ ನೀಡಿದ್ದರು. ಇದರಲ್ಲಿ ಭಾರತ 2-1ರಿಂದ ಗೆದ್ದಿತ್ತು.

14ನೇ ಆವೃತ್ತಿಯ ಐಪಿಎಲ್‌ಗೆ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ತಯಾರಿ ನಡೆಸುತ್ತಿದೆ. ಧೋನಿ, ಋತುರಾಜ್, ಸುರೇಶ್ ರೈನಾ, ಫಾ ಡು ಪ್ಲೆಸಿಸ್ ಈಗಾಗಲೇ ತಂಡದ ಜೊತೆಗಿದ್ದಾರೆ. ಮಾರ್ಚ್ 29ರಂದು ಸಿಎಸ್‌ಕೆ ಕ್ಯಾಂಪ್‌ ಆರಂಭಿಸಿತ್ತು.

ಸಿಎಸ್‌ಕೆ ತಂಡ ಸೇರಿಸಿಕೊಂಡಿರುವ ಶಾರ್ದೂಲ್ 7 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಲಿದ್ದಾರೆ. ಏಪ್ರಿಲ್ 10ರಂದು ನಡೆಯುವ ಚೆನ್ನೈ vs ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮೊದಲ ಪಂದ್ಯದಲ್ಲಿ ಠಾಕೂರ್ ಮೈದಾನಕ್ಕಿಳಿಯುವ ನಿರೀಕ್ಷೆಯಿದೆ.

ಕಳೆದ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ಕೆಟ್ಟ ಪ್ರದರ್ಶನ ನೀಡಿತ್ತು. ಈ ಬಾರಿ ಆರಂಭದಿಂದಲೇ ಗೆಲುವಿನ ಲಯ ಕಂಡುಕೊಳ್ಳುವತ್ತ ಧೋನಿ ಪಡೆ ಯೋಚಿಸುತ್ತಿದೆ. ಏಪ್ರಿಲ್ 9ರಂದು ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಾಡಲಿವೆ.

Story first published: Saturday, April 3, 2021, 13:24 [IST]
Other articles published on Apr 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+