Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾರ್ದಿಕ್ ಪಾಂಡ್ಯ ಬದಲು ಇನ್ನು ಶಾರ್ದೂಲ್ ಠಾಕೂರ್‌ಗೆ ಆದ್ಯತೆ?!

Shardul Thakur has proved he can be an all-rounder, says Bharat Arun

ನವದೆಹಲಿ: ಶಾರ್ದೂಲ್ ಠಾಕೂರ್ ತಾನು ವೇಗದ ಬೌಲಿಂಗ್ ಆಲ್ ರೌಂಡರ್ ಆಗಬಲ್ಲೆ ಅನ್ನೋದನ್ನು ಸಾಬೀತು ಮಾಡಿದ್ದಾರೆ ಎಂದು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ. ಠಾಕೂರ್ ಅವರಿಗೆ ಹೆಚ್ಚು ಸ್ಥಾನ ನೀಡಿ ಅವರನ್ನು ತಂಡದಲ್ಲಿ ಬಳಸಿಕೊಳ್ಳಬಹುದು ಎಂಬರ್ಥದಲ್ಲಿ ಅರುಣ್ ಮಾತನಾಡಿದ್ದಾರೆ.ಕ್ವಾರಂಟೈನ್ ದಿನಗಳ ಕಳೆಯಲು ಉಪಾಯ ಮಾಡಿದ ಪಂತ್: ವಿಡಿಯೋ

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಬೆನ್ನು ನೋವಿಗೆ ತುತ್ತಾದಾಗಿನಿಂದ ಅವರು ಆಲ್ ರೌಂಡರ್ ಬದಲು ಬ್ಯಾಟ್ಸ್‌ಮನ್‌ ಸ್ಥಾನದಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದಾರೆ. ಬೆನ್ನಿನ ಶಸ್ತ್ರ ಚಿಕಿತ್ಸೆ ನಡೆದ ಬಳಿಕ ಪಾಂಡ್ಯ ಬೌಲಿಂಗ್‌ ಮಾಡಿದ್ದೇ ಕಡಿಮೆ. ಹೀಗಾಗಿ ಪಾಂಡ್ಯ ಜಾಗದಲ್ಲಿ ಶಾರ್ದೂಲ್ ಠಾಕೂರ್ ಕೆಲಸಕ್ಕೆ ಬರುತ್ತಾರೆ ಎಂದು ಭರತ್ ಅಭಿಪ್ರಾಯಿಸಿದ್ದಾರೆ.

'ಒಳ್ಳೆಯ ಆಟಗಾರರನ್ನು ಆರಿಸಿ ತಂಡದಲ್ಲಿ ಸ್ಥಾನ ನೀಡೋದು ಆಯ್ಕೆದಾರರ ಕೆಲಸ. ನಾವು ಅಂಥ ಆಲ್ ರೌಂಡರ್‌ಗಳನ್ನು ಅಭಿವೃದ್ಧಿಪಡಿಸಬಹುದು. ಶಾರ್ದೂಲ್ ತಾನು ಆಲ್ ರೌಂಡರ್ ಆಗಬಲ್ಲೆ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅವರ ಆಟ ಅದ್ಭುತವಾಗಿತ್ತು,' ಎಂದು ಪಿಟಿಐ ಜೊತೆ ಮಾತನಾಡಿದ ಭರತ್ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಕಡೇಯ ಸಾರಿ ಟೆಸ್ಟ್‌ ಪಂದ್ಯ ಆಡಿದ್ದು 2018ರಲ್ಲಿ ಭಾರತ ತಂಡದ ಇಂಗ್ಲೆಂಡ್ ಪ್ರವಾಸದ ವೇಳೆ. ಆ ಬಳಿಕ ಬೆನ್ನು ನೋವಿಗೆ ತುತ್ತಾಗಿದ್ದ ಪಾಂಡ್ಯ ಅಲ್ಲಿಂದ ಬೌಲಿಂಗ್ ಮಾಡುವುದನ್ನೇ ನಿಲ್ಲಿಸಿದ್ದರು. ಆದರೆ ಆಸ್ಟ್ರೇಲಿಯಾ ಪ್ರವಾಸದ ವೇಳೆ 4ನೇ ಮತ್ತು ಕೊನೇಯ ಟೆಸ್ಟ್‌ನಲ್ಲಿ ಆಡಿದ್ದ ಠಾಕೂರ್ 69 ರನ್ ಮತ್ತು 7 ವಿಕೆಟ್‌ನೊಂದಿಗೆ ಗಮನ ಸೆಳೆದಿದ್ದರು.

Story first published: Wednesday, May 12, 2021, 17:53 [IST]
Other articles published on May 12, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+