Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shardul Thakur: ಲಕ್ನೋ-ಗುಜರಾತ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಹೊಸ ದಾಖಲೆ

ಐಪಿಎಲ್ 2025 ರ 26 ನೇ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಏಕಾನಾ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ದಾಖಲೆ ಸೃಷ್ಟಿಸಿದ್ದಾರೆ. ಟಾಸ್ ಗೆದ್ದ ಲಕ್ನೋ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯದಲ್ಲಿ ಲಕ್ನೋ ಪರ ಮಿಂಚಿದ ಶಾರ್ದೂಲ್ ಠಾಕೂರ್ ನಾಲ್ಕು ಓವರ್ ಬೌಲಿಂಗ್ ಮಾಡಿ 34 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು. ಈ ಮೂಲಕ ಗುಜರಾತ್ ತಂಡವನ್ನು 180 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಲಕ್ನೋ ತಂಡ ಇನ್ನಿಂಗ್ಸ್‌ನ ಪವರ್‌ಪ್ಲೇನಲ್ಲಿ ಶಾರ್ದೂಲ್ ಠಾಕೂರ್ ಎರಡು ಉತ್ತಮ ಓವರ್‌ಗಳನ್ನು ಬೌಲಿಂಗ್ ಮಾಡಿದರು. ಆದರೆ ವಿಕೆಟ್ ಪಡೆಯುವಲ್ಲಿ ವಿಫಲವಾದರು. ನಂತರ ಕೊನೆಯ ಮೂರು ಓವರ್‌ಗಳಲ್ಲಿ ಎರಡನ್ನು ಬೌಲಿಂಗ್ ಮಾಡಿದರು. ಅವರ ಎರಡೂ ವಿಕೆಟ್‌ಗಳು 20ನೇ ಓವರ್‌ನಲ್ಲಿ ಬಂದವು. ಶೆರ್ಫೇನ್ ರುದರ್‌ಫೋರ್ಡ್ ಮತ್ತು ರಾಹುಲ್ ಟೆವಾಟಿಯಾ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡ ಪಂದ್ಯ ಮಹತ್ವದ ತಿರುವು ಕೊಟ್ಟರು. ಶಾರ್ದೂಲ್ ಠಾಕೂರ್ ಎರಡನೇ ವಿಕೆಟ್ ಪಡೆಯುವ ಮೂಲಕ ಹೊಸನ ದಾಖಲೆ ಮಾಡಿದರು. ಇದರೊಂದಿಗೆ ಅವರು ಟಿ20 ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು.

Shardul Thakur new record in Lucknow-Gujarat IPL 2025 match

ವೇಗದ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಟಿ20 ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಐಪಿಎಲ್‌ನಲ್ಲಿ 100 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.

ಕೈ ಹಿಡಿದ ಅದೃಷ್ಟ

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಆದರೆ, ಈಗ ಲೀಗ್‌ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಶಾರ್ದೂಕ್ ಠಾಲೂರ್ ಅವರನ್ನು ಮೊಹ್ಸಿನ್ ಖಾನ್ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಸೇರಿಸಿಕೊಂಡಿತು. ಐಪಿಎಲ್ 2025 ರಲ್ಲಿ ಶಾರ್ದೂಲ್ ಎಲ್‌ಎಸ್‌ಜಿ ಪರ ಅತ್ಯುತ್ತಮ ಆಟಗಾರ ಎಂಬುದು ಸಾಬೀತುಪಡಿಸಿದ್ದಾರೆ.

ಶಾರ್ದೂಲ್ ಠಾಕೂರ್ 174 ಟಿ20 ಪಂದ್ಯಗಳಲ್ಲಿ 200 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಅವರ ಸರಾಸರಿ 27 ಆಗಿದೆ. ಅವರ 8.9 ಕ್ಕಿಂತ ಹೆಚ್ಚಿನ ಎಕಾನಮಿ ದರದಲ್ಲಿ ವಿಕೆಟ್ ಉರುಳಿಸಿದ್ದಾರೆ. ಇದೇ ವೇಳೆ ಶಾರ್ದೂಲ್ 101 ಐಪಿಎಲ್ ಪಂದ್ಯಗಳಲ್ಲಿ 29.86 ಸರಾಸರಿಯಲ್ಲಿ 103 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಸ್ತುತ ಐಪಿಎಲ್ 2025 ರಲ್ಲಿ ಅವರು 6 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Story first published: Saturday, April 12, 2025, 21:18 [IST]
Other articles published on Apr 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+