Shardul Thakur: ಸನ್‌ರೈಸರ್ಸ್ ತಂಡವನ್ನು ಪವರ್‌ಪ್ಲೇನಲ್ಲಿ ಕಟ್ಟಿ ಹಾಕಿದ ವೇಗಿ
ಲಕ್ನೋ ಸೂಪರ್ ಜೈಂಟ್ಸ್ ತಂಡ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ರಿಷಭ್ ಪಂತ್ ಮುಂದಾಳತ್ವದ ತಂಡ ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಆರ್ಭಟಿಸಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಎಲ್‌ಎಸ್‌ಜಿ ಮೊದಲ ಜಯದ ನಗು ಬೀರಿದೆ. ಈ ಗೆಲುವಿನಲ್ಲಿ ಲಕ್ನೋ ತಂಡದ ಅನುಭವಿ ವೇಗಿ ಶಾರ್ದೂಲ್ ಠಾಕೂರ್ ಮಿಂಚಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶಾರ್ದೂಲ್ ಠಾಕೂರ್, ಕೊನೆಯ ಕ್ಷಣದಲ್ಲಿ ಲಕ್ನೋ ತಂಡವನ್ನು ಸೇರಿದ್ರು. ಇವರು ತಂಡಕ್ಕೆ ಸೇರುತ್ತಿದ್ದಂತೆ ಲಕ್ನೋ ತಂಡಕ್ಕೆ ಬಲ ಬಂದಂತೆ ಆಗಿದೆ. ಈ ತಂಡದ ಪ್ರಮುಖ ಬೌಲರ್‌ಗಳು ಗಾಯಕ್ಕೆ ತುತ್ತಾಗಿದ್ದರಿಂದ, ಶಾರ್ದೂಲ್ ಠಾಕೂರ್ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ತವರಿನಲ್ಲಿ ಕಟ್ಟಿ ಹಾಕಿದ ಲಕ್ನೋ ತಂಡದ ವೇಗಿ ಶಾರ್ದೂಲ್ ಪಂದ್ಯದ ಗತಿಯನ್ನು ಬದಲಿಸಿದರು.

ಶಾರ್ದೂಲ್ ಠಾಕೂರ್ ಪವರ್ ಪ್ಲೇನಲ್ಲಿ ಹೈದರಾಬಾದ್ ತಂಡದ ಪರ ಬಿಗುವಿನ ದಾಳಿ ನಡೆಸಿದರು. ಇವರು ಅಮೋಘ ದಾಳಿಯನ್ನು ಎದುರಿಸುವಲ್ಲಿ ಎಸ್‌ಆರ್‌ಎಚ್ ತಂಡ ವಿಫಲವಾಗಿತು. ಹೈದರಾಬಾದ್ ತಂಡದ ಪ್ರಮುಖ ಬ್ಯಾಟರ್ ಅಭಿಷೇಕ್ ಶರ್ಮಾ ಇವರ ಎಸೆತದಲ್ಲಿ ಡಿಪ್ ಸ್ಕ್ವೇರ್ ಲೆಗ್ ಮೇಲೆ ದೊಡ್ಡ ಹೊಡೆತಕ್ಕೆ ಮುಂದಾಗಿ, ನಿಕೋಲಸ್ ಪೂರನ್ ಅವರು ಹಿಡಿದ ಕ್ಯಾಚ್‌ಗೆ ಬಲಿಯಾದರು.
ಇಶಾನ್ ಸೊನ್ನೆ
ಅಭಿಷೇಕ್ ಶರ್ಮಾ ಔಟ್ ಆದ ಬಳಿಕ ಕ್ರೀಸ್‌ಗೆ ಬಂದ ಇಶಾನ್ ಕಿಶನ್ ಅವರಿಗೆ ಶಾರ್ದೂಲ್ ಠಾಕೂರ್ ಅಬ್ಬರಿಸಿದರು. ಇಶಾನ್ ತಾವೇದುರಿಸಿದ ಮೊದಲ ಎಸೆತದಲ್ಲಿ ಶಾರ್ದೂಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಶಾರ್ದೂಲ್ ಠಾಕೂರ್ ಪವರ್ ಪ್ಲೇನಲ್ಲಿ 2 ಓವರ್ ಬೌಲಿಂಗ್ ನಡೆಸಿ 18 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಶಾರ್ದೂಲ್ ಠಾಕೂರ್ ತಮ್ಮ ಎರಡನೇ ಸ್ಪೆಲ್‌ನ್ನು 17ನೇ ಓವರ್‌ನಲ್ಲಿ ಮಾಡಿದ್ರು. ಈ ಓವರ್‌ನ ಎರಡನೇ ಎಸೆತದಲ್ಲಿ ಶಾರ್ದೂಲ್ ಭರವಸೆಯ ಆಟಗಾರ ಅಭಿನವ್ ಮನೋಹರ್‌ಗೆ ಖೆಡ್ಡ ತೋಡಿದರು. ಇನ್ನು ತಮ್ಮ ನಾಲ್ಕನೇ ಓವರ್ ಹಾಗೂ ಇನಿಂಗ್ಸ್ 19ನೇ ಓವರ್‌ನಲ್ಲೂ ಶರ್ದೂಲ್ ಆರ್ಭಟ ನಡೆಸಿದರು. ಇವರು ಈ ಓವರ್‌ನ ಮೂರನೇ ಎಸೆತದಲ್ಲಿ ಶಮಿ ಕವರ್ ಮೇಲಿಂದ ಬಾರಿಸಲು ಹೋಗಿ ಔಟ್ ಆದರು.
ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲ್‌ಎಸ್‌ಜಿ ತಂಡದ ಶಾರ್ದೂಲ್ ಠಾಕೂರ್ ಅಮೋಘ ಬೌಲಿಂಗ್ ನಡೆಸಿದರು. ಇವರು ಒಟ್ಟ 4 ಓವರ್ ಬೌಲಿಂಗ್ ನಡೆಸಿ 34 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಪಡೆದರು. ಅದರಲ್ಲಿ ಪವರ್ ಪ್ಲೇನಲ್ಲಿ ಬ್ಯಾಕ್ ಟು ಬ್ಯಾಕ್ 2 ವಿಕೆಟ್‌ಗಳನ್ನು ಪಡೆದಿದ್ದು, ಎಸ್‌ಆರ್‌ಎಚ್ ದೊಡ್ಡ ಮೊತ್ತದ ಕನಸಿಗೆ ಆರಂಭದಲ್ಲಿ ಪೆಟ್ಟು ನೀಡಿತು. ಇವರ ಅಮೋಘ ದಾಳಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications