ಏಕದಿನದಲ್ಲಿ ಟೈ ಫಲಿತಾಂಶದ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ರಾಸ್ ಟೇಯ್ಲರ್

ಏಕದಿನ ಮಾದರಿಯಲ್ಲಿ ಪಂದ್ಯ ಟೈ ಆದಲ್ಲಿ ಸೂಪರ್ ಓವರ್‌ನ ಅಗತ್ಯವಿಲ್ಲ ಎಂದು ನ್ಯೂಜಿಲೆಂಡ್‌ನ ಹಿರಿಯ ಆಟಗಾರ ರಾಸ್ ಟೇಯ್ಲರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಾ ಅಪರೂಪದ ಸಂದರ್ಭಗಳು ಬಂದಲ್ಲಿ ಟ್ರೋಫಿಯನ್ನು ಹಂಚಿಕೊಳ್ಳುವುದು ಉತ್ತಮ ಎಂದು ರಾಸ್ ಟೇಯ್ಲರ್ ಹೇಳಿದ್ದಾರೆ.
ಕಳೆದ ವಿಶ್ವಕಪ್‌ನಲ್ಲಿ ಪೈನಲ್ ಪಂದ್ಯ ಟೈ ಆದ ಬಳಿಕ ನಡೆದ ಸೂಪರ್ ಓವರ್ ಕೂಡ ಟೈ ಆದಾಗ ಅತಿ ಹೆಚ್ಚು ಬೌಂಡರಿಗಳ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಗಿತ್ತು. ಐಸಿಸಿಯ ಈ ನಿಯಮ ಬಳಿಕ ದೊಡ್ಡ ಮಟ್ಟದ ಟೀಕೆಗೆ ಕಾರಣವಾಗಿತ್ತು. ಆ ಟೀಕೆಯ ಬಳಿಕ ಬೌಂಡರಿ ನಿಯಮವನ್ನುತೆಗೆದು ಹಾಕಿದ ಐಸಿಸಿ ಇಂತಾ ಸಂದರ್ಭದಲ್ಲಿ ಮತ್ತೊಂದು ಸೂಪರ್ ಓವರ್‌ಗೆ ಅವಕಾಶವನ್ನು ನೀಡುವ ನಿಯಮವನ್ನು ತಂದಿತ್ತು.

ಟೈ ಪಂದ್ಯದ ಫಲಿತಾಂಶ ಟೈಯೇ ಆಗಿರಲಿ
ಸೂಪರ್ ಓವರ್ ನಿಯಮದ ಬಗ್ಗೆ ರಾಸ್ ಟೇಯ್ಲರ್ ಉತ್ತಮ ಅಭಿಪ್ರಾಯವನ್ನು ಹೊಂದಿಲ್ಲ. ಸೂಪರ್ ಓವರ್‌ಗಿಂತ ಎರಡೂ ತಂಡಗಳು ಟ್ರೋಫಿ ವಿಜಯಿ ಎಂದು ಘೋಷಿಸುವುದು ಉತ್ತಮ ಎಂದಿದ್ದಾರೆ ಟೇಯ್ಲರ್. ಏಕದಿನ ಪಂದ್ಯ ಸುದೀರ್ಘವಾಗಿ ನಡೆಯುವುದರಿಂದ ಟೈ ಆದ ಪಂದ್ಯದ ಫಳಿತಾಂಶವನ್ನು ಟೈ ಎಂದೇ ನಿರ್ಧರಿಸುವುದು ಉತ್ತಮ ಎಂದಿದ್ದಾರೆ.

ಸೂಪರ್ ಓವರ್ ಬಗ್ಗೆ ತಿಳಿದಿರಲಿಲ್ಲ
ವಿಶ್ವಕಪ್ ಫೈನಲ್ ಪಂದ್ಯದ ಬಗ್ಗೆ ಮಾತನಾಡಿದ ರಾಸ್ ಟೇಯ್ಲರ್ ಅಂದು ಸೂಪರ್ ಓವರ್ ಇರಲಿದೆ ಎಂದು ನನಗೆ ತಿಳಿದಿರಲಿಲ್ಲ. ಪಂದ್ಯ ಅಂತ್ಯವಾಗಿ ಅಂಪೈರ್‌ಗಳಿಗೆ ಉತ್ತಮ ಆಟ ಎಂದು ಹೇಳಲು ಹೋಗಿದ್ದೆ ಎಂದು ಟೇಯ್ಲರ್ ಹೇಳಿದ್ದಾರೆ. ಟೈ ಪಂದ್ಯವೆಂದರೆ ಅದು ಟೈ. ನೀವು ಎರಡೂ ರೀತಿಯ ವಾದವನ್ನು ಹೊಂದಿರಬಹುದು ಎಂದು ನಾನು ಭಾವಿಸುತ್ತೇನೆ ಎಂದು ರಾಸ್ ಟೇಯ್ಲರ್ ಹೇಳಿದ್ದಾರೆ.

ಟೈ ಕೆಟ್ಟ ಫಲಿತಾಂಶವಲ್ಲ
ಏಕದಿನ ಪಂದ್ಯದಲ್ಲಿ ನೂರು ಓವರ್‌ಗಳನ್ನು ಆಡಲಾಗುತ್ತದೆ. ಆದರೆ ಇದರಲ್ಲಿ ಅಂತಿಮವಾಗಿ ಟೈ ಫಲಿತಾಂಶ ಬಂದರೆ ಎರಡೂ ತಂಡಗಳನ್ನು ಸಮಾನರು ಎಂದೇ ಭಾವಿಸಬೇಕಾಗುತ್ತದೆ. ಟೈ ಪಂದ್ಯ ಕೆಟ್ಟ ಫಲಿತಾಂಶ ಎಂದು ನಾನು ಭಾವಿಸುವುದಿಲ್ಲ ಎಂದು ರಾಸ್ ಟೇಯ್ಕರ್ ಹೇಳಿದ್ದಾರೆ.

ಕಿವೀಸ್ ಪಡೆ ಸೂಪರ್ ಓವರ್‌ನಲ್ಲಿ ವೀಕ್
ಇನ್ನು ನ್ಯೂಜಿಲೆಂಡ್ ತಂಡ ಸೂಪರ್ ಓವರ್‌ನಲ್ಲಿ ಕೆಟ್ಟ ದಾಖಲೆಯನ್ನು ಹೊಂದಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಸೂಪರ್ ಓವರ್ ನಿಯಮ ಜಾರಿಗೆ ಬಂದ ಬಳಿಕ ಕಿವೀಸ್ ಪಡೆ ಈವರೆಗೆ 8 ಸೂಪರ್ ಓವರ್ ಪಂದ್ಯಗಳನ್ನು ಆಡಿದೆ. ಆದರೆ ಇದರಲ್ಲಿ ಬರೊಬ್ಬರಿ 7ರಲ್ಲಿ ಎದುರಾಳಿಗೆ ಗೆಲುವನ್ನು ಬಿಟ್ಟುಕೊಟ್ಟಿದೆ. ಒಂದರಲ್ಲಿ ಮಾತ್ರವೇ ಗೆಲುವನ್ನು ಕಾಣಲು ಯಶಸ್ವಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications