For Quick Alerts
ALLOW NOTIFICATIONS  
For Daily Alerts
 

Rohit Sharma: ಈ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ರೋಹಿತ್ ಶರ್ಮಾ

By ನಾಗೇಶ್

ಟೀಂ ಇಂಡಿಯಾ 2023ರ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಇದರ ಹಿಂದೆ ನಾಯಕ ರೋಹಿತ್ ಶರ್ಮಾ ಅವರ ಆಕ್ರಮಣಕಾರಿ ಆಟ ಅಡಗಿದೆ. ಅವರು ಈ ವರ್ಷ ವೇಗವಾಗಿ ರನ್ ಗಳಿಸುತ್ತಿರುವ ಬ್ಯಾಟರ್. ವಿಶ್ವಕಪ್‌ಗೂ ಮುನ್ನ ಕಂಡುಕೊಂಡಿದ್ದ ಫಾರ್ಮ್‌ಅನ್ನು ರೋಹಿತ್, ಏಕದಿನ ವಿಶ್ವಕಪ್‌ನಲ್ಲೂ ಮುಂದುವರೆಸಿದ್ದಾರೆ.

2023 ರಲ್ಲಿ ರೋಹಿತ್ ಶರ್ಮಾ ಅವರ ಏಕದಿನ ಪ್ರದರ್ಶನವನ್ನು ನಾವು ನೋಡಿದರೆ, ಅವರು 21 ಇನ್ನಿಂಗ್ಸ್‌ಗಳಲ್ಲಿ 56 ಸರಾಸರಿಯಲ್ಲಿ 1056 ರನ್ ಗಳಿಸಿದ್ದಾರೆ. ಅಲ್ಲದೆ 56 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. 2 ಶತಕ ಹಾಗೂ 8 ಅರ್ಧ ಶತಕ ಬಾರಿಸಿದ್ದು, ಈ ವೇಳೆ ಅವರ ಸ್ಟ್ರೈಕ್ ರೇಟ್ 113 ಆಗಿದೆ. ರೋಹಿತ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸ್ಫೋಟಕ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ರೋಹಿತ್ ಭಾರತಕ್ಕಾಗಿ 12 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಗೆಲ್ಲಲು ಸಜ್ಜಾಗಿದ್ದಾರೆ.

Sharma Surpass Virat Kohli In Strike Rate in ODI

ಒಂದು ವರ್ಷದಲ್ಲಿ ಕನಿಷ್ಠ 500 ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ದಾಖಲೆಗಳನ್ನು ನಾವು ನೋಡಿದರೆ, ರೋಹಿತ್ ಶರ್ಮಾ ಸ್ಟ್ರೈಕ್ ರೇಟ್‌ನಲ್ಲಿ ವೀರೇಂದ್ರ ಸೆಹ್ವಾಗ್‌ಗಿಂತ ಹಿಂದಿದ್ದಾರೆ. ಸೆಹ್ವಾಗ್ 2008ರಲ್ಲಿ 120 ಸ್ಟ್ರೈಕ್ ರೇಟ್‌ನಲ್ಲಿ 824 ರನ್ ಗಳಿಸಿದ್ದರು.

ಸ್ಟ್ರೈಕ್‌ರೇಟ್ ವಿಚಾರದಲ್ಲಿ ಕೊಹ್ಲಿಯನ್ನು ಹಿಂದಿಕ್ಕಿದ ಹಿಟ್‌ಮ್ಯಾನ್

ಸ್ಟ್ರೈಕ್ ರೇಟ್‌ನಲ್ಲಿ ರೋಹಿತ್ ಮೊದಲ ಬಾರಿಗೆ ಏಕದಿನದಲ್ಲಿ 48 ಶತಕಗಳನ್ನು ಗಳಿಸಿದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ 5 ಬಾರಿ 100 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಕೊಹ್ಲಿ 2014ರಲ್ಲಿ 104 ಸ್ಟ್ರೈಕ್ ರೇಟ್‌ನಲ್ಲಿ 685 ರನ್ ಗಳಿಸಿದ್ದರು. 2023 ರಲ್ಲಿ, ಕೊಹ್ಲಿ ಇದುವರೆಗೆ 18 ಇನ್ನಿಂಗ್ಸ್‌ಗಳಲ್ಲಿ 962 ರನ್ ಗಳಿಸಿದ್ದಾರೆ. ಈ ವೇಳೆ ಅವರ ಸ್ಟ್ರೈಕ್ ರೇಟ್ 103 ಆಗಿದೆ.

ವಿರಾಟ್ ಕೊಹ್ಲಿ 2018 ರಲ್ಲಿ 103 ಸ್ಟ್ರೈಕ್ ರೇಟ್‌ನಲ್ಲಿ 1202 ರನ್, 2013 ರಲ್ಲಿ 101 ಸ್ಟ್ರೈಕ್ ರೇಟ್‌ನಲ್ಲಿ 1126 ರನ್ ಮತ್ತು 2016 ರಲ್ಲಿ 100 ಸ್ಟ್ರೈಕ್ ರೇಟ್‌ನಲ್ಲಿ 739 ರನ್ ಗಳಿಸಿದ್ದರು. ರೋಹಿತ್ ಶರ್ಮಾ ತಮ್ಮ ಏಕದಿನ ಕ್ರಿಕೆಟ್‌ನ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ 100 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ರೋಹಿತ್ ಶರ್ಮಾ 2018 ರಲ್ಲಿ 19 ಇನ್ನಿಂಗ್ಸ್‌ಗಳಲ್ಲಿ 74 ಸರಾಸರಿಯಲ್ಲಿ 1030 ರನ್ ಗಳಿಸಿದ್ದರು. ಈ ವೇಳೆ ಅವರ ಸ್ಟ್ರೈಕ್ ರೇಟ್ 100 ಆಗಿತ್ತು. ಇದಲ್ಲದೆ, ರೋಹಿತ್ 2017 ರಲ್ಲಿ 99 ಸ್ಟ್ರೈಕ್ ರೇಟ್‌ನಲ್ಲಿ 1293 ರನ್, 2015 ರಲ್ಲಿ 95 ಸ್ಟ್ರೈಕ್ ರೇಟ್‌ನಲ್ಲಿ 815 ರನ್ ಮತ್ತು 2016 ರಲ್ಲಿ 95 ಸ್ಟ್ರೈಕ್ ರೇಟ್‌ನಲ್ಲಿ 564 ರನ್ ಗಳಿಸಿದ್ದರು. ಬ್ಯಾಟರ್ ಒಬ್ಬ ಒಂದು ವರ್ಷದಲ್ಲಿ ಕನಿಷ್ಠ 500 ರನ್‌ಗಳನ್ನು ಏಕದಿನ ಪಂದ್ಯಗಳಲ್ಲಿ ಗಳಿಸಿದಾಗ ಆ ಅಂಕಿಅಂಶಗಳನ್ನು ಮಾತ್ರ ಇದರಲ್ಲಿ ಸೇರಿಸಲಾಗಿದೆ.

ಭಾರತದ ಪರ ಪ್ರಸಕ್ತ ವರ್ಷ ಕೇವಲ 4 ಬ್ಯಾಟ್ಸ್‌ಮನ್‌ಗಳು ಮಾತ್ರ ಏಕದಿನದಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಲು ಸಿಡಿಸಿದ್ದಾರೆ. ಸ್ಟ್ರೈಕ್ ರೇಟ್‌ನಲ್ಲಿ ರೋಹಿತ್ ಶರ್ಮಾ ನಂಬರ್ 1 ಸ್ಥಾನದಲ್ಲಿದ್ದಾರೆ. ಅವರು ಇಲ್ಲಿಯವರೆಗೆ 113 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಶುಭಮನ್ ಗಿಲ್ 104, ವಿರಾಟ್ ಕೊಹ್ಲಿ 103 ಮತ್ತು ಕೆಎಲ್ ರಾಹುಲ್ 85 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ.

Story first published: Wednesday, November 1, 2023, 17:04 [IST]
Other articles published on Nov 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+