Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಅವಿರೋಧ ಆಯ್ಕೆ

Shashank Manohar re-elected unopposed as independent ICC chairman

ನವದೆಹಲಿ, ಮೇ 16: ಮೊದಲ ಬಾರಿಗೆ 2016ರಲ್ಲಿ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶಂಕರ್ ಮನೋಹರ್ ಈಬಾರಿಯೂ ಮರು ಆಯ್ಕೆಯಾಗಿದ್ದಾರೆ. ಮತ್ತೆ ಎರಡು ವರ್ಷಗಳ ಕಾಲ ಮನೋಹರ್ ಐಸಿಸಿ ಸ್ವತಂತ್ರ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

ಕಳೆದೆರಡು ವರ್ಷಗಳಲ್ಲಿ ಮನೋಹರ್ ಕ್ರೀಡಾರಂಗದಲ್ಲಿ ಗಮನಾರ್ಹ ಬೆಳವಣಿಗೆ ಕಾರಣರಾಗಿದ್ದರು. ಹಿಂದಿನ ವರ್ಷಕ್ಕೆ ಅಂದರೆ 2014 ಅವಧಿಯಲ್ಲಿನ ಬೆಳವಣಿಗೆಗ ಹೋಲಿಸಿದರೆ ಮನೋಹರ್ ಅವಧಿಯಲ್ಲಿನ ಸಾಧನೆ ಹೆಚ್ಚು ಗಮನಾರ್ಹವೆನಿಸಿತ್ತು.

ಅಧ್ಯಕ್ಷರಾಗಿ ಮನೋಹರ್ ಆಯ್ಕೆಯಾಗಿದ್ದ ಸಂದರ್ಭ ಸರ್ಕಾರದ ಸ್ವರೂಪ ಬದಲಾವಣೆ, ಐಸಿಸಿ ಮೊದಲ ಸ್ವತಂತ್ರ ಮಹಿಳಾ ನಿರ್ದೇಶಕಿಯ ಆಯ್ಕೆ, ಅಂತಾರಾಷ್ಟ್ರೀಯ ಕ್ರಿಕೆಟ್ ಸ್ವರೂಪದಲ್ಲೂ ಬದಲಾವಣೆ ತಂದು ಕ್ರೀಡಾರಂಗದ ಬೆಳವಣಿಗೆಗ ದಾರಿ ಮಾಡಿದ್ದರು.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಮನೋಹರ್, 'ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಗೆ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಕಳೆದೆರಡು ಬಾರಿಯಂತೆ ಈ ಸಾರಿಯೂ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ಸಮಿತಿಯಲ್ಲಿರುವ ಎಲ್ಲರೂ ಜೊತೆಯಾಗಿ ಕಾರ್ಯ ನಿರ್ವಹಿಸೋಣ' ಎಂದರು.

Story first published: Wednesday, May 16, 2018, 14:13 [IST]
Other articles published on May 16, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+