Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Prithvi Shaw: ಪೃಥ್ವಿ ಶಾ ಕಮ್‌ಬ್ಯಾಕ್ ಮಾಡಲು ಸಹಾ ಆಟಗಾರ ಸಲಹೆ

ಪೃಥ್ವಿ ಶಾ ಒಂದು ಕಾಲದಲ್ಲಿ ಭಾರತ ತಂಡದ ತಾರೆಯಾಗಿದ್ದರು. ಅವರನ್ನು ಮುಂದಿನ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಎಂದೂ ವರ್ಣಿಸಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿಗಳು ಬದಲಾಗಿವೆ. ಪೃಥ್ವಿ ಟೀಮ್ ಇಂಡಿಯಾ ಹಾಗೂ ಐಪಿಎಲ್ ನಿಂದ ಹೊರಗುಳಿದಿದ್ದಾರೆ. ಪೃಥ್ವಿ ಇದುವರೆಗೆ ಭಾರತ ಪರ 5 ಟೆಸ್ಟ್, 6 ಏಕದಿನ ಮತ್ತು ಒಂದು ಟಿ20 ಪಂದ್ಯವನ್ನು ಮಾತ್ರ ಆಡಿದ್ದಾರೆ. ಈಗ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಮುಂಬೈನ ಯಾವುದೇ ದೇಶೀಯ ತಂಡದಲ್ಲಿ ಅವರಿಗೆ ಅವಕಾಶ ಸಿಗುತ್ತಿಲ್ಲ. ಅವರನ್ನು ವಿಜಯ್ ಹಜಾರೆ ಮತ್ತು ರಣಜಿ ಟ್ರೋಫಿ ಪಂದ್ಯಗಳಿಂದ ಕೈಬಿಡಲಾಗಿದೆ.

ಐಪಿಎಲ್ ಮಾರ್ಚ್ 22 ರಿಂದ ಶುರುವಾಗಲಿದೆ. ಇಂತಹ ಸಂದರ್ಭದಲ್ಲಿ ಪೃಥ್ವಿ ಶಾ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಸ್ಟಾರ್ ಆಟಗಾರ ಶಶಾಂಕ್ ಸಿಂಗ್ ಕೂಡ ತಮ್ಮ ಸ್ನೇಹಿತ ಪೃಥ್ವಿ ಶಾ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Shashank Singh advises Team India to come back Prithvi Shaw

ಸಂದರ್ಶನವೊಂದರಲ್ಲಿ ಪೃಥ್ವಿ ಶಾ ಅವರ ಹೋರಾಟದ ಬಗ್ಗೆ ಶಶಾಂಕ್ ಸಿಂಗ್ ಅವರನ್ನು ಕೇಳಲಾಯಿತು. ಈ ವೇಳೆ ಮಾತನಾಡಿದ ಶಶಾಂಕ್, "ಪೃಥ್ವಿ ಶಾ ಅವರನ್ನು ಕಡಿಮೆ ಅಂದಾಜು ಮಾಡಲಾಗಿದೆ. ಅವನು ತನ್ನ ಮೊದಲ ಸ್ಥಿತಿಗೆ ಮರಳಿದರೆ, ಏನು ಬೇಕಾದರೂ ಸಾಧಿಸಬಹುದು. ಅವನಿಗೆ 13 ವರ್ಷ ವಯಸ್ಸಾಗಿದ್ದಾಗಿನಿಂದ ನಾನು ಅವನನ್ನು ನೋಡಿದ್ದೇನೆ. ಮುಂಬೈನಲ್ಲಿ ಅವನೊಂದಿಗೆ ಕ್ಲಬ್ ಕ್ರಿಕೆಟ್ ಆಡಿದಾಗಿನಿಂದ ನನಗೆ ಅವನ ಬಗ್ಗೆ ಗೊತ್ತು. ಅವನಿಗೆ ಏನು ತಪ್ಪಾಗಿದೆ ಎಂದು ನೀವು ನನ್ನನ್ನು ಕೇಳಿದರೆ, ಕೆಲವು ವಿಷಯಗಳ ಬಗ್ಗೆ ಅವನಿಗೆ ಬೇರೆ ದೃಷ್ಟಿಕೋನವಿದೆ ಎಂದು ಹೇಳಿದ್ದಾರೆ.

ಪೃಥ್ವಿ ಶಾ ಅವರು ತಮ್ಮ ಕೆಲಸದ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ರಾತ್ರಿ 11 ಗಂಟೆಗೆ ಬದಲಾಗಿ 10 ಗಂಟೆಗೆ ಮಲಗಬೇಕು. ಅವರ ಆಹಾರಕ್ರಮವನ್ನು ಸುಧಾರಿಸಬೇಕು. ಈ ಕೆಲವು ವಿಷಯಗಳನ್ನು ಅವರು ಸ್ವೀಕರಿಸಿ ಬದಲಾಯಿಸಲು ಸಾಧ್ಯವಾದರೆ, ಅದು ಭಾರತೀಯ ಕ್ರಿಕೆಟ್‌ಗೆ ಉತ್ತಮವಾಗಿರುತ್ತದೆ. ಆದಾಗ್ಯೂ, ಪೃಥ್ವಿ ಶಾ ಅವರ ಸುತ್ತಲೂ ಈಗಾಗಲೇ ತನಗಿಂತ ಉತ್ತಮ ಸ್ಥಾನದಲ್ಲಿರುವ ಆಟಗಾರರಿದ್ದಾರೆ ಎಂದು ಶಶಾಂಕ್ ತಿಳಿಸಿದ್ದಾರೆ.

ಕಮ್‌ಬ್ಯಾಕ್ ಮಾಡಲು ಪೃಥ್ವಿ ಶಾ ಈಗಾಗಲೇ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿರಬಹುದು. ಅವನಿಗೆ ನನ್ನ ಸಲಹೆಯ ಅಗತ್ಯವಿಲ್ಲ. ಬಹುಶಃ ಅವನಿಗೆ ಈಗಾಗಲೇ 10 ಉತ್ತಮ ಜನರು ಸಲಹೆ ನೀಡುತ್ತಿರಬಹುದು ಎಂದು ಶಶಾಂಕ್ ಹೇಳಿದ್ದಾರೆ.

ಪೃಥ್ವಿ ಶಾ ಇತ್ತೀಚೆಗೆ ಡಿವೈ ಪಾಟೀಲ್ ಟಿ20 2025 ಟೂರ್ನಮೆಂಟ್‌ನಲ್ಲಿ 'ರೂಟ್ ಮೊಬೈಲ್' ತಂಡವನ್ನು ಮುನ್ನಡೆಸಿದ್ದರು. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಪೃಥ್ವಿ ಶಾ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಆದರೆ, ಯಾವುದೇ ತಂಡವು ಅವರನ್ನು ಬಿಡ್ ಮಾಡಲಿಲ್ಲ.

Story first published: Tuesday, March 18, 2025, 23:54 [IST]
Other articles published on Mar 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+