Shashank Singh: ಕೊನೆಯ ಓವರ್‌ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿದ ಶಶಾಂಕ್
ಪಂಜಾಬ್ ಕಿಂಗ್ಸ್ ತಾನು ಆಡಿದ ಪ್ರಸಕ್ತ ಸಾಲಿನ ಮೊದಲ ಐಪಿಎಲ್ ಪಂದ್ಯವನ್ನು ಗೆದ್ದಿದೆ. ಈ ವೇಳೆ ತಂಡದ ಸಂಘಟಿತ ಆಟ ಎದ್ದು ಕಂಡಿತು. ಆದರೆ ಈ ಪಂದ್ಯದಲ್ಲಿ ಆ ಒಬ್ಬ ಬ್ಯಾಟರ್ ಮಾಡಿದ ಮೋಡಿಯ ಬ್ಯಾಟಿಂಗ್‌ನಿಂದ ಪಂಜಾಬ್ ಗೆಲುವಿನ ನಗೆ ಬೀರಿತು. ಈ ಪಂದ್ಯದಲ್ಲಿ ಡೆತ್ ಓವರ್‌ಗಳಲ್ಲಿ ಬ್ಯಾಟ್ ಮಾಡಲು ಬಂದ ಪಂಜಾಬ್‌ನ ಬ್ಯಾಟರ್ ಶಶಾಂಕ್ ಸಿಂಗ್ ಪಂದ್ಯದ ಗತಿಯನ್ನೇ ಬದಲಿಸಿದರು. ಪಂಜಾಬ್ ಕಿಂಗ್ಸ್ ಇವರನ್ನು ರಿಟೇನ್ ಮಾಡಿಕೊಂಡಿದ್ದು ಏಕೆ ಎಂಬುದನ್ನು ಸಾರಿ ತಿಳಿಸಿದರು.
ಶಶಾಂಕ್ ಸಿಂಗ್ ಬ್ಯಾಟ್ ಮಾಡಲು ಬಂದಾಗ ಡೆತ್ ಓವರ್ ಇನ್ನು ಆರಂಭವಾಗಲು ಇನ್ನು 4 ಎಸೆತಗಳು ಬಾಕಿ ಇದ್ದವು. ಆಗಲೇ ನೋಡಿ ಶಶಾಂಕ್ ತನ್ನ ರೌದ್ರರೂಪ ತೋರಿಸಿ ರನ್‌ಗಳನ್ನು ಗುಡ್ಡೆ ಹಾಕಿದರು. ವೇಗದ ಬೌಲರ್‌ಗಳ ಲೈನ್ ಹಾಗೂ ಲೆಂತ್‌ನ್ನು ಹಾಳು ಮಾಡಿದ ಶಶಾಂಕ್, ರನ್ ಸುರಿಮಳೆ ಸುರಿಸಿದರು. ಇವರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಅನುಭವಿ ಬೌಲರ್‌ಗಳು ವಿಫಲರಾದರು. ಇವರ ಅಬ್ಬರದ ಬ್ಯಾಟಿಂಗ್ ಪರಿಣಾಮವಾಗಿಯೇ ಪಂಜಾಬ್ ಸವಾಲಿನ ಮೊತ್ತ ಕಲೆ ಹಾಕಲು ನೆರವಾಯಿತು.

ಶಶಾಂಕ್ ಸಿಂಗ್ ನಿಜಕ್ಕೂ ಒಬ್ಬ ನುರಿತ ಡೆತ್ ಓವರ್ ಬ್ಯಾಟರ್. ಇವರು ಈ ಪಂದ್ಯದಲ್ಲಿ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಒಂದು ಬದಿಯಲ್ಲಿ ಅನುಭವಿ ನಾಯಕ ಶ್ರೇಯಸ್ ಅಯ್ಯರ್ ಇದ್ರೂ ಸಹ ಶಶಾಂಕ್ ಅಳುಕದೆ ಅಂಜದೇ ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದರು. ಈ ಮೂಲಕ ಫಿಯರ್ ಲೆಸ್ ಕ್ರಿಕೆಟ್ ಅನ್ನು ತೋರಿಸಿದರು. ಶಶಾಂಕ್ ಸಿಂಗ್ 18ನೇ ಓವರ್‌ನಲ್ಲಿ ರಶೀದ್ ಖಾನ್‌ಗೆ 18 ಚಚ್ಚಿದರು.
ಕೊನೆಯ ಓವರ್‌ನಲ್ಲಿ 23 ರನ್
ಕೊನೆಯ ಓವರ್‌ನಲ್ಲಿ ಶಶಾಂಕ್ ಸಿಂಗ್ ಅವರ ಅಪ್‌ಡೇಟ್ ವರ್ಷನ್ ರಿವೀಲ್ ಆಯ್ತು. ಮೊಹಮ್ಮದ್ ಸಿರಾಜ್ ಓವರ್‌ನಲ್ಲಿ ತಮ್ಮ ವೀರಾವೇಶದ ಬ್ಯಾಟಿಂಗ್ ಪ್ರಸ್ತುತ ಪಡಿಸಿದರು. ಕೊನೆಯ ಓವರ್‌ನಲ್ಲಿ 23 ರನ್ ಬಾರಿಸಿದ ಶಶಾಂಕ್ ಅಬ್ಬರಿಸಿದರು. ಇದು ಪಂದ್ಯದ ಗತಿಯನ್ನೇ ಬದಲಿಸಿತು. ಸಿರಾಜ್ ಅವರ ಕೊನೆಯ ಓವರ್‌ನಲ್ಲಿ 5 ಸಿಕ್ಸರ್ ಬಾರಿಸಿದ ಶಶಾಂಕ್ ಬ್ಯಾಟಿಂಗ್ ಕಂಡು, ಶ್ರೇಯಸ್ ಸಹ ಖುಷ್ ಆದ್ರು. ಅಸಲಿಗೆ ಶ್ರೇಯಸ್ ಅಯ್ಯರ್ ಸಹ ಶತಕದ ಅಂಚಿನಲ್ಲಿದ್ದರು. ಆದರೆ ಅದಕ್ಕೂ ತಲೆ ಕೆಡಿಸಿಕೊಳ್ಳದೆ ಶಶಾಂಕ್ ಬ್ಯಾಟಿಂಗ್ ಎಂಜಾಯ್ ಮಾಡಿದರು. ಶ್ರೇಯಸ್ ಜಸ್ಟ್ 3 ರನ್‌ಗಳಿಂದ ಶತಕವಂಚಿತರದಾದರು.
ಶಶಾಂಕ್ ಸಿಂಗ್ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ 16 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 44 ರನ್ ಬಾರಿಸಿ ಅಬ್ಬರಿಸಿದರು. ಇವರು ಕೊನೆಯ ಓವರ್‌ನಲ್ಲಿ ಬಾರಿಸಿದ 23 ರನ್‌ಗಳ ಪರಿಣಾಮವೇ ಪಂದ್ಯದ ಚಿತ್ರಣವೇ ಬದಲಾಯಿತು. ಇದುವೇ ಪಂದ್ಯದ ಗತಿಯನ್ನು ಬದಲಿಸಿತು. ಈ ಮೂಲಕ ಶಶಾಂಕ್ ತಮ್ಮನ್ನು ಉಳಿಸಿಕೊಂಡಿದ್ದು ಸರಿಯಾದ ನಿರ್ಧಾರ ಎಂದು ಸಾಬೀತು ಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications