Duleep Trophy: ದುಲೀಪ್ ಟ್ರೋಫಿಯಲ್ಲಿ ಯುವಕರ ಮೆರೆದಾಟ
ಅನಂತಪುರ: ಚೆನ್ನೈನಲ್ಲಿ ಭಾರತ ಹಾಗೂ ಬಾಂಗ್ಲಾ ನಡುವಣ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದರೆ, ಇತ್ತ ಅನಂತಪುರದಲ್ಲಿ ದೇಶೀಯ ದುಲೀಪ್ ಟ್ರೋಫಿಯ ಮೂರನೇ ಸುತ್ತಿನ ಪಂದ್ಯಗಳು ನಡೆದಿವೆ. ಗುರುವಾರದಿಂದ ಆರಂಭವಾದ ಪಂದ್ಯದಲ್ಲಿ ಯುವಕರ ಮೆರೆದಾಟ ಭರ್ಜರಿಯಾಗಿದೆ.
ಭಾರತ 'ಎ' ಹಾಗೂ ಭಾರತ 'ಸಿ' ನಡುವಣ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ 'ಸಿ' ತಂಡ ಬೌಲಿಂಗ್ ಮಾಡಲು ಮುಂದಾಯಿತು. ಭಾರತ 'ಡಿ' ತಂಡದ ಸ್ಟಾರ್ ಆಟಗಾರರು ಎಲ್ಲರು ಸಿಂಗಲ್ ಡಿಜಿಟ್‌ನಲ್ಲಿ ಆಟವನ್ನು ಮುಗಿಸಿದರು. 36 ರನ್ ಆಗುವಷ್ಟರಲ್ಲಿ ಟಾಪ್ ಆರ್ಡರ್ ಐವರು ಬ್ಯಾಟರ್‌ಗಳು ಪೆವಿಲಿಯನ್ ಹಾದಿ ಹಿಡಿದಿದ್ದರು. ಈ ವೇಳೆ ಆರನೇ ವಿಕೆಟ್‌ಗೆ ಯುವಕರು ಜೊತೆಯಾಟದ ಕಾಣಿಕೆ ನೀಡಿದರು.

ಆರನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ
ಶಾಶ್ವತ್ ರಾವತ್ ಹಾಗೂ ಶಾಮ್ಸ್ ಮುಲಾನಿ (44) ಭರ್ಜರಿ ಜೊತೆಯಾಟದ ಕಣಿಕೆ ನೀಡಿದರು. ಈ ಜೋಡಿ ಸುಮಾರು 28 ಓವರ್‌ಗಳ ವರೆಗೆ ವಿಕೆಟ್ ಬೀಳದಂತೆ ನೋಡಿಕೊಂಡು ಆಟವನ್ನು ಆಡಿತು. ಅಲ್ಲದೆ ತಂಡಕ್ಕೆ ಅಗತ್ಯವಿದ್ದ ಜೊತೆಯಾಟದ ಕಾಣಿಕೆ ಸಹ ನೀಡಿತು. ಈ ಜೋಡಿ ಆರನೇ ವಿಕೆಟ್‌ಗೆ 87 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು.
ಶಾಶ್ವತ್ ರಾವತ್ ಶತಕ
ಒತ್ತಡದಲ್ಲಿ ಬ್ಯಾಟಿಂಗ್ ಮಾಡಿದ ಶಾಶ್ವತ್ ರಾವತ್ ಎಲ್ಲರ ಗಮನ ಸೆಳೆದರು. ಇವರು 235 ಎಸೆತಗಳಲ್ಲಿ 15 ಬೌಂಡರಿ ನೆರವಿನಿಂದ ಅಜೇಯ 122 ರನ್ ಬಾರಿಸಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ಆವೀಶ್ ಖಾನ್ (ಅಜೇಯ 16) ಜೊಯಾಯಾಟ ನೀಡುವ ಭರವಸೆ ನೀಡಿದ್ದಾರೆ. ಅಂತಿಮವಾಗಿ ದಿನದಾಟದಂತ್ಯಕ್ಕೆ ಭಾರತ 'ಎ' 7 ವಿಕೆಟ್‌ಗೆ 224 ರನ್ ಸೇರಿಸಿತು. ಭಾರತ 'ಸಿ' ಪರ ಅಂಶುಲ್ ಕಾಂಬೋಜ್ 3 ಹಾಗೂ ಕನ್ನಡಿಗ ವಿಜಯ್‌ಕುಮಾರ್ ವೈಶಾಖ್ 2 ವಿಕೆಟ್ ಕಬಳಿಸಿದ್ದಾರೆ.
ಭರವಸೆಯ ಬ್ಯಾಟರ್‌ಗಳ ಅರ್ಧಶತಕ
ಇನ್ನೊಂದು ಪಂದ್ಯ ಭಾರತ 'ಡಿ' ಹಾಗೂ ಭಾರತ 'ಬಿ' ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ 'ಬಿ' ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಭಾರತ 'ಡಿ' ಪರ ದೇವದತ್ ಪಡಿಕ್ಕಲ್ ಹಾಗೂ ಶ್ರೀಕರ್ ಭರತ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 31.1 ಓವರ್‌ಗಳಲ್ಲಿ 105 ರನ್ ಸೇರಿಸಿತು. ದೇವದತ್ 95 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 50 ರನ್ ಬಾರಿಸಿದರೆ, ಶ್ರೀಕರ್ ಭರತ್ 9 ಬೌಂಡರಿ ಸೇರಿದಂತೆ 52 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ರಿಕು ಬುಯಿ ಸಹ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಇವರು 87 ಎಸೆತಗಳಲ್ಲಿ 56 ರನ್ ಕಲೆ ಹಾಕಿದರು.
ಶತಕದತ್ತ ಸಂಜು
ಇನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿರುವ ಸಂಜು ಸ್ಯಾಮ್ಸನ್ ಹಾಗೂ ಸರನ್ಶ್ ಜೈನ್ ತಂಡಕ್ಕೆ 90 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಸಂಜು ಅಜೇಯ 89 ರನ್, ಸರನ್ಶ್ ಜೈನ್ ಅಜೇಯ 26 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications