Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಶಾನ್ ಮಾರ್ಶ್ ಇನ್ನಿಂಗ್ಸ್ ಆರಂಭಿಸುವ ಬಗ್ಗೆ ಸುಳಿವು ನೀಡಿದ ಆಸಿಸ್ ಕೋಚ್

Shaun Marsh may open in first Test, hinted australian coach Justin Langer

ಆಸ್ಟ್ರೇಲಿಯಾ ಹಾಗೂ ಭಾರತದ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಟೀಮ್ ಇಮಡಿಯಾದಲ್ಲಿ ಗಾಯಾಳುಗಳ ಸಮಸ್ಯೆಯ ಬಳಿಕ ಈಗ ಆಸ್ಟ್ರೇಲಿಯಾ ಕೂಡ ಅದೇ ರೀತಿಯ ಸಮಸ್ಯೆ ಎದುರಿಸುತ್ತಿದೆ. ಆಸ್ಟ್ರೇಲಿಯಾದ ಇಬ್ಬರು ಆರಂಭಿಕರು ಗಾಯಾಳುಗಳಾಗಿದ್ದು ಅನುಭವಿ ಆಟಗಾರ ಶಾನ್ ಮಾರ್ಶ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.

ಆಸ್ಟ್ರೇಲಿಯಾ ಖಾಯಂ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಏಕದಿನ ಸರಣಿಯ ಎರಡನೇ ಪಂದ್ಯದ ಸಂದರ್ಭದಲ್ಲಿ ಸ್ಯಾಯು ಸೆಳೆತಕ್ಕೆ ತುತ್ತಾದರು. ಹೀಗಾಗಿ ಸೀಮಿತ ಓವರ್‌ಗಳ ಅಂತಿಮ ನಾಲ್ಕು ಪಂದ್ಯಗಳ ಬಳಿಕ ಮೊದಲ ಟೆಸ್ಟ್‌ನಿಂದಲೂ ವಾರ್ನರ್ ಹೊರಗುಳಿಯಲಿದ್ದಾರೆ. ಭಾರತ ಎ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾದ ಇನ್ನೋರ್ವ ಆರಂಭಿಕ ಆಟಗಾರ ವಿಲ್ ಪುಲ್ಕೋವ್ಸ್ಕಿ ಕೂಡ ಗಾಯಗೊಂಡಿದ್ದು ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿದೆ.

ಮಾರ್ಶ್ ಆಯ್ಕೆ ಸಾಧ್ಯತೆ

ಮಾರ್ಶ್ ಆಯ್ಕೆ ಸಾಧ್ಯತೆ

ಆಸ್ಟ್ರೇಲಿಯಾದ ಆರಂಭಿಕರ ವಿಚಾರವಾಗಿ ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯಿಸಿದ್ದು ಆಸ್ಟ್ರೇಲಿಯಾದ 37ರ ಹರೆಯದ ಶಾನ್ ಮಾರ್ಶ್ ಆಸ್ಟ್ರೇಲಿಯಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದು ಈ ಸ್ಥಾನಕ್ಕೆ ಅವರು ಸರಿಯಾದ ಆಯ್ಕೆಯಾಗಬಲ್ಲರು ಎಂದು ಹೇಳಿಕೊಂಡಿದ್ದಾರೆ.

ಪ್ರಥಮದರ್ಜೆಯಲ್ಲಿ ಶ್ರೇಷ್ಠ ಪ್ರದರ್ಶನ

ಪ್ರಥಮದರ್ಜೆಯಲ್ಲಿ ಶ್ರೇಷ್ಠ ಪ್ರದರ್ಶನ

ನೀವು ವಯಸ್ಸಿನ ಕಾರಣದಿಂದ ತಾರತಮ್ಯ ಮಾಡುವಂತಿಲ್ಲ. ಯಾಕೆಂದರೆ ಆತ ಎಲ್ಲವನ್ನೂ ಸಾಧ್ಯವಾಗುವಂತೆ ಮಾಡಿದ್ದಾರೆ. ಶೆಫಿಲ್ಡ್ ಶೀಲ್ಡ್ ಕ್ರಿಕೆಟ್‌ನಲ್ಲಿ ಆತನ ಅಂಕಿಅಂಶ ಈ ವರ್ಷ ಮಾತ್ರವಲ್ಲ ಕಳೆದ ಆವೃತ್ತಿಯಲ್ಲೂ ಶ್ರೇಷ್ಠವಾಗಿದೆ ಎಂದು ಆಸಿಸ್ ಕೋಚ್ ಶಾನ್ ಮಾರ್ಶ್ ಪ್ರದರ್ಶನದ ಬಗ್ಗೆ ಪ್ರಶಂಸಿಸಿದ್ದಾರೆ.

ಭಾರತದ ವಿರುದ್ಧವೇ ಅಂತಿಮ ಪಂದ್ಯ

ಭಾರತದ ವಿರುದ್ಧವೇ ಅಂತಿಮ ಪಂದ್ಯ

2019ರ ಜನವರಿಯಲ್ಲಿ ಶಾನ್ ಮಾರ್ಶ್ ಕೊನೆಯದಾಗಿ ಭಾರತದ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆಸ್ಟ್ರೇಲಿಯಾ ಪರವಾಗಿ ನಾಲ್ಕು ಪಂದ್ಯಗಳಲ್ಲಿ ಆರಂಬಿಕನಾಗಿ ಕಣಕ್ಕಿಳಿದಿರುವ ಮಾರ್ಶ್ 40ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅವರ ಗರಿಷ್ಠ ಸ್ಕೋರ್ 69 ಆಗಿದೆ.

Story first published: Saturday, December 12, 2020, 10:17 [IST]
Other articles published on Dec 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+