ಭಾರತದ ವೇಗದ ಬೌಲಿಂಗ್ ಬಗ್ಗೆ ದ. ಆಫ್ರಿಕಾ ಮಾಜಿ ವೇಗಿ ಶಾನ್ ಪೊಲಕ್ ಮಾತು

ಸದ್ಯ ಟೀಮ್ ಇಂಡಿಯಾ ವೇಗದ ಬೌಲಿಂಗ್ ವಿಭಾಗ ವಿಶ್ವ ಕ್ರಿಕೆಟ್‌ನಲ್ಲಿ ಸದ್ದು ಮಾಡುತ್ತಿದೆ. ಭಾರತ ಈ ಹಿಂದೆ ಪ್ರತೀ ಬಾರಿಯೂ ತನ್ನ ಶ್ರೇಷ್ಠ ಬ್ಯಾಟಿಂಗ್ ಲೈನ್ ಅಪ್ ಮತ್ತು ಅದ್ಭುತ ಸ್ಪಿನ್ ಬೌಲಿಂಗ್ ವಿಭಾಗಕ್ಕೆ ಖ್ಯಾತಿಯನ್ನು ಪಡೆದಿತ್ತು. ಆದರೆ ವೇಗದ ಬೌಲಿಂಗ್‌ನಲ್ಲಿ ಕೆಲವೇ ಆಟಗಾರರು ಸೈ ಎನಿಸಿಕೊಂಡಿದ್ದರು.
ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಭಾರತದ ವೇಗದ ಬೌಲಿಂಗ್ ವಿಭಾಗದ ಬಗ್ಗೆ ವಿಶ್ವ ಕ್ರಿಕೆಟ್‌ನ ದಿಗ್ಗಜರು ಮಾತನಾಡಿಕೊಳ್ಳುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ದಿಗ್ಗಜ ಬೌಲರ್ ಶಾನ್ ಪೊಲಕ್ ಟೀಮ್ ಇಂಡಿಯಾ ವೇಗದ ಬೌಲಿಂಗ್ ವಿಭಾಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಬಲ ಅತ್ಯುತ್ತಮ ಮಟ್ಟದಲ್ಲಿದೆ. ತಂಡದಲ್ಲಿ ಅವಕಾಶವನ್ನು ಪಡೆಯಲು ಪ್ರತಿಭಾನ್ವಿತ ಬೌಲರ್‌ಗಳ ದಂಡೇ ಕಾಯುತ್ತಿದೆ ಎಂದು ಶಾನ್ ಪೊಲಕ್ ಹೇಳಿದ್ದಾರೆ. ಇದು ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಹೇಳುತ್ತದೆ ಎಂದಿದ್ದಾರೆ.
ಭಾರತದ ಬೌಲಿಂಗ್ ವಿಭಾಗ ಸದ್ಯ ಅತ್ಯಂತ ಬಲಿಷ್ಠವಾಗಿದೆ. ಬೌಲಿಂಗ್‌ನಲ್ಲಿನ ತೀವ್ರತೆ, ವಿಭಿನ್ನತೆ, ಎತ್ತರದ ಬೌಲರ್‌ಗಳು ಕುಳ್ಳಗಿನ ಬೌಲರ್‌ಗಳು ತೀಕ್ಷ್ಣ ಮತ್ತು ಕೌಶಲ್ಯಪೂರ್ಣ ಬೌಲರ್‌ಗಳು ತಂಡದಲ್ಲಿ ತುಂಬಿದ್ದಾರೆ. ಹೀಗಾಗಿ ಸಮತೋಲಿತ ತಂಡವನ್ನು ಆಯ್ಕೆ ಮಾಡಲು ಸಾಕಷ್ಟು ಅವಕಾಶಗಳು ಇದೆ. ಹೀಗಾಗಿ ಬೇರೆ ಬೇರೆ ಮಾದರಿಯ ಕ್ರಿಕೆಟ್‌ಗೆ ವಿಭಿನ್ನ ಬೌಲರ್‌ಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಂದು ಕಾಲದಲ್ಲಿ ಭಾರತ ತಂಡದಲ್ಲಿ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಅವರಂತಾ ಬೌಲರ್‌ಗಳಿಗೆ ಮೂರನೇ ಬದಲಿ ವೇಗದ ಬೌಲರ್‌ನ ಬೆಂಬಲವೇ ಇರಲಿಲ್ಲ. ಆದರೆ ಈಗ ಸಮಾನ ಸಾಮರ್ಥ್ಯದ ಬದಲಿ ಆಟಗಾರರ ದಂಡೇ ಟೀಮ್ ಇಂಡಿಯಾದಲ್ಲಿದೆ. ಅವಕಾಶಕ್ಕಾಗಿ ಸಾಕಷ್ಟು ಸ್ಪರ್ಧೆಯಿದೆ ಎಂದು ಶಾನ್ ಪೊಲಕ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications