For Quick Alerts
ALLOW NOTIFICATIONS  
For Daily Alerts
 

ಪ್ರತಿಕಾ ರಾವಲ್‌ ವಿಶ್ವಕಪ್‌ನಿಂದ ಔಟ್‌: ಶೆಫಾಲಿಗೆ ಸ್ಥಾನ

ಭಾರತ ತಂಡವನ್ನು ಭರವಸೆಯ ಬ್ಯಾಟರ್‌ ಶೆಫಾಲಿ ವರ್ಮಾ ಸೇರಿಕೊಂಡಿದ್ದಾರೆ. ಇವರನ್ನು ಮಹಿಳಾ ಏಕದಿನ ವಿಶ್ವಕಪ್‌ ತಂಡದ ಕಾಯ್ದಿರಿಸಿದಾ ಆಟಗಾರ್ತಿಯರ ಪಟ್ಟಿಯಲ್ಲಿ ಇರಿಸಲಾಗಿತ್ತು. ಆರಂಭಿಕ ಯುವ ಆಟಗಾರ್ತಿ ಪ್ರತಿಕಾ ರಾವಲ್ ಅವರು ಗಾಯಕ್ಕೆ ತುತ್ತಾಗಿದ್ದರಿಂದ ಇವರ ಸ್ಥಾನವನ್ನು ಶೆಫಾಲಿ ವರ್ಮಾ ತುಂಬಲಿದ್ದಾರೆ. ಪ್ರತಿಕಾ ಪ್ರಸಕ್ತ ವಿಶ್ವಕಪ್‌ನಿಂದ ಪಾದದ ಗಾಯದಿಂದ ಬಳಲುತ್ತಿದ್ದು ಹೊರ ನಡೆದಿದ್ದಾರೆ. ಶೆಫಾಲಿ ವರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಪರ ಕಣಕ್ಕೆ ಇಳಿಯಲಿದ್ದಾರೆ. ಈ ಪಂದ್ಯ ಅಕ್ಟೋಬರ್ 30 ರಂದು ನಡೆಯಲಿದೆ.

ಶೆಫಾಲಿ ವರ್ಮಾ ಅವರು ಮುಂದಿನ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ. ಆಯ್ಕೆದಾರರ ತೆಜಲ್ ತಸಬ್ನಿಸ್‌ ಅವರು ಸಹ ತಂಡದಲ್ಲಿದ್ದಾಗಲೂ ಶೆಫಾಲಿ ಅವರನ್ನು ಆಯ್ಕೆ ಮಾಡಿದ್ದಾರೆ.

Shefali Verma Replaces Injured Pratika Rawal in India s Women s World Cup Squad

ಆಗಸ್ಟ್‌ನಲ್ಲಿ ಮಹಿಳಾ ಏಕದಿನ ವಿಶ್ವಕಪ್‌ ತಂಡಕ್ಕಾಗಿ ಭಾರತ ತಂಡವನ್ನು ಘೋಷಣೆ ಮಾಡಿದಾಗ, ಅಯ್ಕೆ ಸಮಿತಿ ಶೆಫಾಲಿ ವರ್ಮಾ ಅವರನ್ನು ಕೈ ಬಿಟ್ಟಿತ್ತು. ಇವರ ಬದಲಿಗೆ ಪ್ರತಿಕಾ ರಾವಲ್‌ ಅವರ ಮೇಲೆ ಭರವಸೆಯನ್ನು ಇಟ್ಟು ಅವರಿಗೆ ತಂಡದಲ್ಲಿ ಸ್ಥಾನವನ್ನು ನೀಡಿತು. ಪ್ರತಿಕಾ ರಾವಲ್ ಹಾಗೂ ಸ್ಮೃತಿ ಮಂಧಾನ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಅವಕಾಶವನ್ನು ಪಡೆದರು. ಈ ವೇಳೆ ಪ್ರತಿಕಾ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದರು. ಶೆಫಾಲಿ ವರ್ಮಾ ಅಕ್ಟೋಬರ್‌ 2024ರಲ್ಲಿ ಕೊನೆಯ ಬಾರಿಗೆ ಭಾರತ "ಎ" ಪರ ಆಡಿ ಗಮನ ಸೆಳೆದಿದ್ದರು.

2024ರಲ್ಲಿ ಶೆಫಾಲಿ ವರ್ಮಾ ಅವರು ದೇಶೀಯ ಏಕದಿನ ಟೂರ್ನಿಯಲ್ಲಿ ಹರಿಯಾಣ ಪರ ಅಮೋಘ ಪ್ರದರ್ಶನ ನೀಡಿದ್ದರು. ಈ ವೇಳೆ ಇವರು 527 ರನ್‌ಗಳನ್ನು ಸಹ ಕಲೆ ಹಾಕಿದ್ದರು. ಆಗ 75ರ ಸರಾಸರಿ ಹಾಗೂ 152.31ರ ಸ್ಟ್ರೈಕ್‌ ರೇಟ್‌ ಹೊಂದಿದ್ದರು. ಇದೇ ಟೂರ್ನಿಯಲ್ಲಿ ಇವರು ಬಂಗಾಳ ವಿರುದ್ಧದ ಪಂದ್ಯದಲ್ಲಿ 115 ಎಸೆತಗಳಲ್ಲಿ 197 ರನ್‌ ಬಾರಿಸಿ ಮಿಂಚಿದ್ದರು. ಇನ್ನು ಇದೇ ಪ್ರದರ್ಶನವನ್ನು ಇವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲೂ ಮುಂದುವರೆಸಿದರು. ಇವರು ಡೆಲ್ಲಿ ಕ್ಯಾಪಿಟಲ್ಸ್‌ ಪರ ಬ್ಯಾಟ್ ಮಾಡಿ ಟೂರ್ನಿಯಲ್ಲಿ ಗರಿಷ್ಠ ರನ್‌ ಸಾಧಕರ ಪಟ್ಟಿ ನಾಲ್ಕನೇ ಸ್ಥಾನದಲ್ಲಿ ನಿಂತಿದ್ದರು.

ಪ್ರತಿಕಾ ಆರ್ಭಟ

ಪ್ರತಿಕಾ ರಾವಲ್‌ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಶೆಫಾಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬಹುದಾಗಿದೆ. ಇನ್ನು ಟೂರ್ನಿಯಲ್ಲಿ ಪ್ರತಿಕಾ ಅಮೋಘ ಪ್ರದರ್ಶನ ನೀಡಿ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು 6 ಇನಿಂಗ್ಸ್‌ಗಳಲ್ಲಿ 51ರ ಸರಾಸರಿಯಲ್ಲಿ 308 ರನ್‌ ಕಲೆ ಹಾಕಿದ್ದಾರೆ. ಇವರು ಸ್ಮೃತಿ ಮಂಧಾನ ಅವರೊಂದಿಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ದಾಖಲೆಯ ಜೊತೆಯಾಟದ ಕಾಣಿಕೆ ನೀಡಿ ತಂಡದ ಜಯದಲ್ಲಿ ಮಿಂಚಿದ್ದರು. ಆದರೆ ಇವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಪಾದಕ್ಕೆ ಗಾಯ ಮಾಡಿಕೊಂಡರು. ಪರಿಣಾಮ ಮೈದಾನದಿಂದ ಹೊರ ನಡೆದರು.

Story first published: Tuesday, October 28, 2025, 8:04 [IST]
Other articles published on Oct 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+