Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಾರಾಷ್ಟ್ರ ಮಾಜಿ ರಣಜಿ ಕ್ರಿಕೆಟಿಗ ಶೇಖರ್ ಗೌಳಿ ದುರ್ಮರಣ

Shekhar Gawli, Former Maharashtra Ranji Cricketer, Dies

ಮುಂಬೈ: ಮಹಾರಾಷ್ಟ್ರ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಶೇಖರ್ ಗೌಳಿ ನಿಧನರಾಗಿದ್ದಾರೆ. ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ಚಾರಣಕ್ಕೆ ಹೋಗಿದ್ದ ಶೇಖರ್ ಸುಮಾರು 250 ಅಡಿಯ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.

45ರ ಹರೆಯದ ಗೌಳಿ, ಮಂಗಳವಾರ (ಸೆಪ್ಟೆಂಬರ್ 1) ತನ್ನ ಸ್ನೇಹಿತರ ಜೊತೆಗೆ ಪಶ್ಚಿಮ ಘಾಟ್‌ನ ಬೆಟ್ಟವೊಂದಕ್ಕೆ ಚಾರಣ ಹೊರಟಿದ್ದರು. ಆಗ ಆಯತಪ್ಪಿ ಪ್ರಪಾತಕ್ಕೆ ಬಿದ್ದಿದ್ದಾರೆ ಎಂದು ಸ್ನೇಹಿತರು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

'ಬುಧವಾರ ಬೆಳಗ್ಗೆ 10 am ಹೊತ್ತಿಗೆ ಶೇಖರ್ ಗೌಳಿ ದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಅವರ ಕುಟುಂಬಸ್ಥರಿಗೆ ನೀಡಿದ್ದೇವೆ,' ಎಂದು ಇಗಾತ್‌ಪುರಿ ಪೊಲೀಸ್ ಸ್ಟೇಶನ್‌ನ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಲೆಗ್ ಸ್ಪಿನ್ನರ್ ಆಗಿದ್ದ ಗೌಳಿ, ಮಹಾರಾಷ್ಟ್ರ ಪರ 2 ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 3 ವಿಕೆಟ್ ಪಡೆದಿದ್ದಾರೆ. ಮೊದಲು ಮಹಾರಾಷ್ಟ್ರ ಕ್ರಿಕೆಟ್ ತಂಡಕ್ಕೆ ಸಹ ಕೋಚ್ ಆಗಿದ್ದ ಗೌಳಿ, ಸದ್ಯ ಅಂಡರ್ 23 ತಂಡಕ್ಕೆ ಫಿಟ್ನೆಸ್ ಟ್ರೇನರ್ ಆಗಿದ್ದರು.

Story first published: Wednesday, September 2, 2020, 21:29 [IST]
Other articles published on Sep 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+