Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿಎಸ್‌ಎಲ್‌ನಲ್ಲಿ ಮುಂಬೈ ಗ್ಲೌಸ್ ಧರಿಸಿದ ರುದರ್ಫೋರ್ಡ್‌ ಟ್ರೋಲ್

Sherfane Rutherford trolled for wearing Mumbai Indians’ gloves in PSL 2020 playoffs

ಕರಾಚಿ: ಫೆಬ್ರವರಿ 20ಕ್ಕೆ ಆರಂಭಗೊಂಡಿದ್ದ ಪಾಕಿಸ್ತಾನ್ ಸೂಪರ್ ಲೀಗ್ 2020ರ ಆವೃತ್ತಿ ಕೊರೊನಾ ವೈರಸ್ ಕಾರಣ ನಿಲುಗಡೆಯಾಗಿತ್ತು. ಆಗ ಪ್ಲೇ ಆಫ್‌ ನಡೆಯುತ್ತಿದ್ದ ವೇಳೆ ಕೊರೊನಾ ಭೀತಿ ಶುರುವಾಗಿದ್ದರಿಂದ ಟೂರ್ನಿ ಅಲ್ಲಿಗೆ ನಿಂತಿತ್ತು. ಈಗ ಪಿಎಸ್‌ಎಲ್ ಪ್ಲೇ ಆಫ್ ಪಂದ್ಯಗಳು ನಡೆಯುತ್ತಿವೆ.

ಏನೇ ಇರಲಿ, ಪಾಕ್ ಸೂಪರ್ ಲೀಗ್‌ ಪಂದ್ಯಗಳು ಸುದ್ದಿಯಾಗಿದ್ದಕ್ಕಿಂತ ಹೆಚ್ಚಾಗಿ ಈ ಸಾರಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಶೆರ್ಫೇನ್ ರುದಫೋರ್ಡ್ ಸುದ್ದಿಯಾಗಿದ್ದಾರೆ. ಪಿಎಸ್‌ಎಲ್‌ನ ಪ್ಲೇ ಆಫ್‌ ಪಂದ್ಯದ ವೇಳೆ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಗ್ಲೌಸ್ ಧರಿಸಿ ಟ್ರೋಲರ್‌ಗಳಿಗೆ ಆಹಾರವಾಗಿದ್ದಾರೆ.

ನವೆಂಬರ್ 14ರ ಶನಿವಾರ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ಸ್ ಮತ್ತು ಕರಾಚಿ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಕರಾಚಿ ಕಿಂಗ್ಸ್‌ ಪರ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ರುದಫೋರ್ಡ್ ಮುಂಬೈ ಇಂಡಿಯನ್ಸ್ ಗ್ಲೌಸ್‌ನೊಂದಿಗೆ ಕಾಣಿಸಿಕೊಂಡಿದ್ದರು.

ಇತ್ತೀಚೆಗಷ್ಟೇ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ರುದಫೋರ್ಡ್, ಒಂದೂ ಪಂದ್ಯದಲ್ಲಿ ಆಡಿರಲಿಲ್ಲ. ಹೀಗಾಗಿ ಅಲ್ಲಿ ಸಿಕ್ಕ ಗ್ಲೌಸ್ ಅನ್ನು ರುದಫೋರ್ಡ್ ಪಾಕಿಸ್ತಾನ್ ಸೂಪರ್‌ ಲೀಗ್‌ನಲ್ಲಿ ಬಳಸಿಕೊಂಡಿದ್ದರು.

ಪಾಕಿಸ್ತಾನ್ ಸೂಪರ್‌ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಗ್ಲೌಸ್ ಬಳಸಿದ್ದಕ್ಕಾಗಿ ಟ್ರೋಲರ್‌ಗಳು ಕರಾಚಿ ಕಿಂಗ್ಸ್‌ ಫ್ರಾಂಚೈಸಿ ಮತ್ತು ರುದಫೋರ್ಡ್ ಇಬ್ಬರನ್ನೂ ಟ್ರೋಲ್ ಮಾಡಿದ್ದಾರೆ. ಅಷ್ಟೇ ಅಲ್ಲ, ಯುಎಇಯಿಂದ ಪಾಕ್‌ಗೆ ಬಂದಿಳಿದಾಗಲೂ ರುದಫೋರ್ಡ್ ಎಂಐ ಜೆರ್ಸಿ ಧರಿಸಿದ್ದರು. ಅಂದ್ಹಾಗೆ ಕ್ವಾಲಿಫೈಯರ್‌ನಲ್ಲಿ ಕರಾಚಿ ಕಿಂಗ್ಸ್‌ ಸೂಪರ್ ಓವರ್‌ನಲ್ಲಿ ಜಯ ಗಳಿಸಿತ್ತು.

Story first published: Monday, November 16, 2020, 20:16 [IST]
Other articles published on Nov 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+