Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ಕ್ರಿಕೆಟ್ ತಂಡಕ್ಕೆ ಶಿವ್ ಸುಂದರ್ ದಾಸ್ ಬ್ಯಾಟಿಂಗ್ ಕೋಚ್

Shiv Sunder Das named Indian womens team batting coach

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್‌ ಕೋಚ್ ಆಗಿ ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಶಿವ್ ಸುಂದರ್ ದಾಸ್ ಹೆಸರಿಸಲ್ಪಟ್ಟಿದ್ದಾರೆ. ಮಹಿಳಾ ತಂಡದ ಇಂಗ್ಲೆಂಡ್ ಪ್ರವಾಸದ ವೇಳೆ ದಾಸ್ ಮಾರ್ಗದರ್ಶನ ನೀಡಲಿದ್ದಾರೆ.

ಶಿವ್ ಸುಂದರ್ ದಾಸ್ ಭಾರತ ತಂಡದ ಪರ 2000-02ರ ವರೆಗೆ 23 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 23 ಟೆಸ್ಟ್‌ ಪಂದ್ಯಗಳಲ್ಲಿ 34.89ರ ಸರಾಸರಿಯಂತೆ 1326 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಮತ್ತು 9 ಅರ್ಧ ಶತಕಗಳು ಸೇರಿವೆ.

'ಇದೊಂದು ಒಳ್ಳೆಯ ಅನುಭವವಾಗಲಿದೆ. ನಾನು ಇದಕ್ಕಾಗಿ ಎದುರು ನೋಡುತ್ತಿದ್ದೇನೆ,' ಎಂದು 43ರ ಹರೆಯದ, ಒಡಿಶಾ ತಂಡದ ಮಾಜಿ ನಾಯಕ ಶಿವ್ ಸುಂದರ್ ಪಿಟಿಐ ಜೊತೆಗೆ ಖುಷಿ ಹಂಚಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ದಾಸ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಬ್ಯಾಟಿಂಗ್‌ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

'ನಾನು ಕಳೆದ 4-5 ವರ್ಷಗಳಿಂದ ಎನ್‌ಸಿಎಯಲ್ಲಿ ಬ್ಯಾಟಿಂಗ್‌ ಕೋಚ್ ಆಗಿದ್ದೇನೆ. ಈ ಅವಕಾಶ ನೀಡಿದ್ದಕ್ಕಾಗಿ ನಾನು ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ,' ಎಂದು ದಾಸ್ ಹೇಳಿದ್ದಾರೆ.

Story first published: Tuesday, May 18, 2021, 9:14 [IST]
Other articles published on May 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+