For Quick Alerts
ALLOW NOTIFICATIONS  
For Daily Alerts
 

Shivam Dube hairstyle: ಶಿವಂ ದುಬೆ ಹೇರ್‌ಸ್ಟೈಲ್‌ ಅಮ್ಮನ ನೆನಪು ತಂದಿತು

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಸೂರ್ಯ ಪಡೆ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿದೆ. ಈಗ ಉಭಯ ತಂಡಗಳು ಶುಕ್ರವಾರ ಎರಡನೇ ಟಿ20 ಪಂದ್ಯದಲ್ಲಿ ಕಾದಾಟವನ್ನು ನಡೆಸಲಿವೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ ಶಿವಂ ದುಬೆ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಅದಕ್ಕೆ ಕಾರಣ ಅವರ ಕೇಶವಿನ್ಯಾಸ.

ಮೊದಲ ಟಿ20 ಪಂದ್ಯದಲ್ಲಿ ಶಿವಂ ದುಬೆ ಅವರ ಕೇಶವಿನ್ಯಾಸವು 90ರ ದಶಕದ ನೆನಪನ್ನು ಅಭಿಮಾನಿಗಳಿಗೆ ತೆರಿಸಿದೆ. ಶಿವಂ ದುಬೆ ಸಾಮಾನ್ಯವಾಗಿ ತಮ್ಮ ಗುಂಗುರು ಕೂದಲುಗಳಿಂದ ಮೈದಾನಕ್ಕೆ ಇಳಿಯುತ್ತಿದ್ದರು. ಆದರೆ ಇತ್ತೀಚಿಗೆ ನಡೆದ ವಿಜಯ್ ಹಜಾರೆ ಟ್ರೋಫಿ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇವರು ಬೌಲಿಂಗ್ ಮಾಡುವಾಗ ಎಲ್ಲರ ಕಣ್ಣುಗಳು ಇವರ ಕೇಶವಿನ್ಯಾಸದ ಮೇಲೆ ನೆಟ್ಟಿದ್ದವು.

Shivam Dube hairstyle

ಶಿವಂ ದುಬೆ ಅವರ ಕೇಶವಿನ್ಯಾಸವನ್ನು ಕಂಡು ಸಾಮಾಜಿಕ ತಾಣದಲ್ಲಿ ತರಹೇವಾರಿ ಪ್ರತಿಕ್ರಿಯೆಗಳನ್ನು ಗಳಿಸಿತು. ದುಬೆಯ ನೋಟವನ್ನು ನೋಡಿದ ನಂತರ ಪ್ರತಿಯೊಬ್ಬರೂ ತಮ್ಮ ಬಾಲ್ಯ ಮತ್ತು ತಾಯಂದಿರನ್ನು ನೆನಪಿಸಿಕೊಂಡಿದ್ದಾರೆ. ಇವರ ಈ ಕೇಶವಿನ್ಯಾವನ್ನು ಒಬ್ಬರು "ತಾರಕ್ ಮೆಹ್ತಾ ಕಾ ಊಲ್ತಾ ಚಾಶ್ಮಾ" ಟಿವಿ ಕಾರ್ಯಕ್ರಮದ ಬಾಗಾ ಪಾತ್ರಕ್ಕೆ ಹೋಲಿಸಿದ್ದಾರೆ.

ಶಿವಂ ದುಬೆ ಕೇಶವಿನ್ಯಾಸ ವೈರಲ್

ಶಿವಂ ದುಬೆ ಅವರ ಹಳೆಯ ಫೋಟೋ ಹಾಗೂ ಹೊಸ ಫೋಟೊಗಳನ್ನು ಬಳಸಿದ ಬಳಕೆದಾರ ಹೋಲಿಕೆ ಮಾಡಿದ್ದಾರೆ. ಹಳೆಯ ಫೋಟೋಕ್ಕೆ ಬಳಕೆದಾರ ನಾನು ರೆಡಿಯಾಗಿ ಶಾಲೆಗೆ ಹೋದಾಗ ಎಂದು ಬರೆದಿದ್ದು, ಇನ್ನೊಂದು ಫೋಟೋದಲ್ಲಿ ತಾಯಿ ರೆಡಿ ಮಾಡಿ ಶಾಲೆಗೆ ಕಳುಹಿಸಿದಾಗ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರ ಸಹ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ.

ರಾಜಸ್ಥಾನ ರಾಯಲ್ಸ್‌ ಸಹ ಶಿವಂ ದುಬೆ ಅವರ ವಿಡಿಯೋವನ್ನು ಹಂಚಿಕೊಂಡಿದ್ದು ಎಲ್ಲ ತಾಯಂದಿರ ನೆಚ್ಚಿನ ಕೇಶವಿನ್ಯಾಸ ಎಂದು ಶೀರ್ಷಿಕೆ ನೀಡಿದೆ.

ಶಿವಂ ದುಬೆ ಟೀಮ್ ಇಂಡಿಯಾ ಪರ ಟಿ20 ವಿಶ್ವಕಪ್‌ ನಲ್ಲಿ ಸ್ಥಾನ ಪಡೆದ ಆಟಗಾರ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ರತಿಭೆ. ಆದರೆ ಮೊದಲ ಟಿ20 ಪಂದ್ಯದಲ್ಲಿ ಇವರು ಕೇವಲ 9 ರನ್‌ ಬಾರಿಸುವಲ್ಲಿ ಮಾತ್ರ ಸಫಲರಾಗಿದ್ದರು. ಇವರು ಮೊದಲ ಟಿ20 ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು.

Story first published: Friday, January 23, 2026, 16:05 [IST]
Other articles published on Jan 23, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+