For Quick Alerts
ALLOW NOTIFICATIONS  
For Daily Alerts
 

ಧೋನಿ, ರೋಹಿತ್ ಇಬ್ಬರಲ್ಲಿ ಬೆಸ್ಟ್‌ ಕ್ಯಾಪ್ಟನ್ ಯಾರು? ಶಿವಂ ದುಬೆ ಹೇಳಿದ್ದೇನು?

ಟೀಮ್ ಇಂಡಿಯಾದ ಆಟಗಾರರು ದಿ ಗ್ರೇಟ್‌ ಕಪಿಲ್‌ ಶರ್ಮಾ ಶೋದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಟಗಾರರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಸತಾಯಿಸಲಾಯಿತು. ಈ ವೇಳೆ ರೋಹಿತ್‌ ಶರ್ಮಾ ಅವರು ಟಿ20 ವಿಶ್ವಕಪ್‌ ಗೆಲುವಿನ ಪ್ರಮುಖ ಕಾರಣ ಯಾರು ಎಂಬುದನ್ನು ತಿಳಿಸಿದ್ದಾರೆ.

ಅಂದಹಾಗೆ ರೋಹಿತ್ ಶರ್ಮಾ ಹೇಳಿರುವಂತೆ ಟೀಮ್ ಇಂಡಿಯಾ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಪಂದ್ಯದ ಗತಿಯನ್ನು ಬುಡಮೇಲು ಮಾಡಿದ ಕೀರ್ತಿ ರಿಷಭ್‌ ಪಂತ್‌ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.

Shivam Dube Praises Dhoni Rohit Credits Father for Cricket Success on Kapil Sharma Show

ಇದೇ ಶೋದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಶಿವಂ ದುಬೆ ಸಹ ಭಾಗವಹಿಸಿದ್ದರು. ಇದೇ ವೇಳೆ ಇವರಿಗೆ ಕಪಿಲ್‌ ಶರ್ಮಾ ಕೇಳಿದ ಪ್ರಶ್ನೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಕಪಿಲ್‌ ಶರ್ಮಾ ಶಿವಂ ದುಬೆಗೆ, 'ನೀವು ಚೆನ್ನೈ ತಂಡದಲ್ಲಿ ಧೋನಿ ಕ್ಯಾಪ್ಟನ್ಸಿ ಅಡಿ ಆಡುತ್ತಿರೀ. ಹಾಗೂ ಟೀಮ್ ಇಂಡಿಯಾದಲ್ಲಿ ರೋಹಿತ್‌ ಶರ್ಮಾದಲ್ಲಿ ನೀವು ಇಬ್ಬರ ಅಡಿಯಲ್ಲಿ ಆಡಿದ್ದೀರಿ. ನಿಮ್ಮ ಪ್ರಕಾರ ಉತ್ತಮ ನಾಯಕ ಎಂದು ಕೇಳಲಾಯಿತು.

ಇದಕ್ಕೆ ಉತ್ತರಿಸಿದ ಶಿವಂ ದಿಬೆ ತಾವು ಕ್ರಿಕೆಟ್‌ಗೆ ಬಂದ ಕ್ರೆಡಿಟ್ ಅನ್ನು ನನ್ನ ತಂದೆಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ನಾನು ಚೆನ್ನೈನಲ್ಲಿ ಆಡುತ್ತಿರಲಿ ಅಥವಾ ಭಾರತ ತಂಡದಲ್ಲಿ ಆಡುತ್ತಿರಲಿ, ಆ ಸಮಯದಲ್ಲಿ ಅವರೇ ನನ್ನ ಬೆಸ್ಟ್ ನಾಯಕ ಎಂದು ನಾನು ಭಾವಿಸುತ್ತೇನೆ. ಅವರ ಉತ್ತರ ಕೇಳಿ ರೋಹಿತ್ ಸೇರಿದಂತೆ ಎಲ್ಲರೂ ಖುಷಿಯಾದರು.

ಈ ಉತ್ತರವನ್ನು ಕೇಳಿದ ಬಳಿಕ ರೋಹಿತ್ ಶರ್ಮಾ ಈ ಪ್ರಶ್ನೆಗೆ ಉತ್ತರಿಸಲು ನೀನು ಎರಡು ದಿನ ಪ್ರ್ಯಾಕ್ಟಿಸ್‌ ಮಾಡಿದಿಯಾ ಎಂದು ಕೇಳಿದರು.

Shivam Dube Praises Dhoni Rohit Credits Father for Cricket Success on Kapil Sharma Show

ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ

ಶಿವಂ ದುಬೆ 2022 ರಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಅಬ್ಬರದ ಆಟವನ್ನು ಆಡುತ್ತಿದ್ದಾರೆ. ಇವರು ಈಗಾಗಲೇ ಐಪಿಎಲ್‌ನಲ್ಲಿ ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಸಿಎಸ್‌ಕೆ ತಂಡ ಸೇರಿದ ಮೇಲೆ ಶಿವಂ ದುಬೆ ಅವರ ಆಟದ ಶೈಲಿ ಭಿನ್ನವಾಯಿತು. ಇವರು ಐಪಿಎಲ್ 2022ರಲ್ಲಿ 289 ರನ್ ಮತ್ತು ಐಪಿಎಲ್ 2023ರಲ್ಲಿ 418 ರನ್, ಐಪಿಎಲ್ 2024ರಲ್ಲಿ 396 ರನ್ ಗಳಿಸಿ ತಮ್ಮನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡುವಂತೆ ಬಿಸಿಸಿಐ ಆಯ್ಕೆ ಸಮಿತಿಗೆ ಒತ್ತಾಯಿಸಿದರು. ಇವರು ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ.

ದುಬೆ 2019 ರಲ್ಲಿ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಪದಾರ್ಪಣೆ ಮಾಡಿದರು. ಅಂದಿನಿಂದ ಅವರು 33 ಟಿ20 ಪಂದ್ಯಗಳಲ್ಲಿ ಒಟ್ಟು 448 ರನ್ ಗಳಿಸಿದ್ದಾರೆ. ಅಲ್ಲದೆ ಇವರು ಭಾರತದ ಪರ 4 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ.

Story first published: Monday, October 7, 2024, 14:04 [IST]
Other articles published on Oct 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+