Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶಿವಂ ದುಬೆ ವೃತ್ತಿಜೀವನ ಬದಲಿಸಿದ ಧೋನಿ ನೀಡಿದ ಸಲಹೆ

ಟಿ20 ವಿಶ್ವಕಪ್‌ನ ಸೂಪರ್‌ 8 ಹಂತದ ಪಂದ್ಯಗಳು ಇನ್ನು ನಡೆಯಬೇಕಿದೆ. ಲೀಗ್ ಹಂತದ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದೆ. ತಂಡದ ಪ್ರತಿಯೊಬ್ಬ ಆಟಗಾರ ತನ್ನ ಕ್ಷಮತೆಗೆ ತಕ್ಕ ಆಟವನ್ನು ಆಡಿದ್ದಾರೆ. ಅಲ್ಲದೆ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ. ಇನ್ನು ಮಾಡು ಇಲ್ಲವೇ ಮಡಿ ಪಂದ್ಯಗಳು ನಡೆಯಲಿವೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿ ತವರಿನಲ್ಲಿ ಕಪ್ ಎತ್ತುವ ಕನಸು ಕಾಣುತ್ತಿದೆ.

ಬುಧವಾರ ಟೀಮ್ ಇಂಡಿಯಾ ನೆದರ್‌ಲ್ಯಾಂಡ್ ವಿರುದ್ಧ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಲ್‌ರೌಂಡರ್‌ ಶಿವಂ ದುಬೆ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದರು. ತಂಡದ ಟಾಪ್‌ ಆರ್ಡರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದಾಗ ದುಬೆ ಕ್ರೀಸ್‌ನಲ್ಲಿ ನಿಂತು ಬಿಗ್ ಇನಿಂಗ್ಸ್‌ ಕಟ್ಟಿ ಮಿಂಚಿದರು. ಶಿವಂ ದುಬೆ ನೆದರ್‌ಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ 66 ರನ್‌ಗಳ ಇನಿಂಗ್ಸ್‌ ಕಟ್ಟಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು.

Shivam Dube

ಶಿವಂ ದುಬೆ ಕಳೆದ ಕೆಲವು ವರ್ಷಗಳಿಂದ ಟೀಮ್ ಇಂಡಿಯಾ ಟಿ20 ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೆ ಇವರು 2022ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಮೈ ಮೇಲೆ ಹಳದಿ ಜೆರ್ಸಿ ಬೀಳುತ್ತಲೇ ದುಬೆ ಬ್ಯಾಟಿಂಗ್ ಖದರ್ ಚೇಂಜ್ ಆಗಿದೆ. ಇವರು ಫಿನಿಷರ್ ರೂಪದಲ್ಲೂ ಈಗ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಪಿನ್ ಬೌಲರ್‌ಗಳು ಇವರು ಬ್ಯಾಟ್ ಮಾಡುವಾಗ ಬೌಲ್ ಮಾಡಿದರೆ ಇವರು ಬಿಗ್ ಹಿಟ್ ಬಾರಿಸಿ ದಂಡಿಸುತ್ತಾರೆ.

ದುಬೆಗೆ ಧೋನಿ ನೀಡಿದ ಸಲಹೆ ಏನು?

ಶಿವಂ ದುಬೆ ಅವರ ಬ್ಯಾಟಿಂಗ್ ಬದಲಾವಣೆಗೆ ಟೀಮ್ ಇಂಡಿಯಾದ ಮಾಜಿ ನಾಯಕ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಆ ಒಂದು ಸಲಹೆ ಕಾರಣ ಎಂದು ಬುಧವಾರದ ಪಂದ್ಯದ ಬಳಿಕ ಜಿಯೋಹಾಟ್‌ಸ್ಟಾರ್‌ ಜೊತೆಗೆ ಮಾತನಾಡುತ್ತಾ ದುಬೆ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡಬೇಕೆಂದರೆ ಶ್ರಮವೂ ಅಷ್ಟೇ ಬೇಕು ಎಂಬುದು ನನಗೆ ಅರಿವಿತ್ತು. ಹೀಗಾಗಿ ಪಂದ್ಯಗಳು ನಡೆಯದೇ ಇದ್ದಾಗ ನಾನು ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಚೆಂಡನ್ನು ಯಾವಗಲೂ ಪ್ರೇಕ್ಷಕರ ಗ್ಯಾಲರಿಗೆ ಅಟ್ಟುವ ಅಗತ್ಯವಿಲ್ಲ ಎಂದು ಒಮ್ಮೆ ಮಾಹಿ ಭಾಯ್ ತಿಳಿಸಿದ್ದರು. ಅಲ್ಲದೆ ಸಿಕ್ಸರ್ ಬಾರಿಸುವಷ್ಟೇ ಬೌಂಡರಿ ಬಾರಿಸುವುದು ಹಾಗೂ ಸ್ಟ್ರೈಕ್ ರೋಟೆಟ್ ಮಾಡುವುದು ಮುಖ್ಯ ಎಂದು ಹೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

Shivam Dube

ಧೋನಿ ಹೇಳದ ಮಾತು ನನಗೆ ಸಹಾಯಕವಾಗಿದೆ. ನನಗೆ ಉತ್ತಮ ಚೆಂಡು ಸಿಕ್ಕರೆ, ನಾನು ಬೌಂಡರಿಗಳನ್ನು ಬಾರಿಸುತ್ತೇನೆ. ಅಲ್ಲದೆ ಸ್ಟ್ರೈಕ್ ಅನ್ನು ಬದಲಿಸುವತ್ತವೂ ಚಿತ್ತ ನೆಟ್ಟಿರುವೆ. ಆದರೆ ಕೊನೆಯ ಓವರ್‌ಗಳಲ್ಲಿ ಮಾತ್ರ ವೇಗವಾಗಿ ಆಡುತ್ತೇನೆ ಎಂದು ದುಬೆ ತಿಳಿಸಿದ್ದಾರೆ.

ಶಿವಂ ದುಬೆ ಸಾಧನೆ

32 ವರ್ಷದ ದುಬೆ ಟೀಮ್ ಇಂಡಿಯಾ ಭರವಸೆಯ ಆಟಗಾರ. ಇವರು 2019ರಿಂದಲೂ ಭಾರತ ತಂಡದ ಪರ ಆಡುತ್ತಿದ್ದಾರೆ. ಈ ವರೆಗೆ ದುಬೆ ಅವರು 4 ಏಕದಿನ ಪಂದ್ಯಗಳನ್ನು ಆಡಿದ್ದು, 43 ರನ್‌ ಕಲೆ ಹಾಕಿದ್ದು 1 ವಿಕೆಟ್‌ ಕಬಳಿಸಿದ್ದಾರೆ. ಇನ್ನು 59 ಟಿ20 ಪಂದ್ಯಗಳನ್ನು ಭಾರತದ ಪರ ಆಡಿದ್ದು 872 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸಹ ಸೇರಿವೆ. ಅಲ್ಲದೆ ಇವರು 29 ವಿಕೆಟ್‌ ಪಡೆದು ಬೀಗಿದ್ದಾರೆ. ಶಿವಂ ದುಬೆ ಅವರ ಭರ್ಜರಿ ಪ್ರದರ್ಶನ ಸೂಪರ್ 8 ಹಂತದಲ್ಲೂ ಹೀಗೆ ಮುಂದವರೆಯಲಿ ಎಂಬುದೇ ಅಭಿಮಾನಿಗಳ ಆಶಯ.

1
2-2026

Story first published: Friday, February 20, 2026, 10:14 [IST]
Other articles published on Feb 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+