Maharaja Trophy T20: ಮಂಗಳೂರು ವಿರುದ್ಧ ಘರ್ಜಿಸಿದ ಲಯನ್ಸ್
ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ 22ನೇ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ ವಿರುದ್ಧ ಶಿವಮೊಗ್ಗ ಲಯನ್ಸ್ 3 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಡ್ರಾಗನ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್‌ಗಳನ್ನು ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಶಿವಮೊಗ್ಗ ಲಯನ್ಸ್ 18.4 ಓವರ್‌ಗಳಲ್ಲೇ 7 ವಿಕೆಟ್‌ಗಳನ್ನು ಕಳೆದುಕೊಂಡು ಜಯ ಕಂಡಿತು.

ಈವರಗೆ ಆಡಿರುವ 8 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆಲುವು ಸಾಧಿಸಿರುವ ಶಿವಮೊಗ್ಗ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಮಂಗಳೂರು 7 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲೇ ಉಳಿದಿದೆ.
ಮಂಗಳೂರು ಇನ್ನಿಂಗ್ಸ್
ಮಂಗಳೂರು ಪರ ಇನ್ನಿಂಗ್ಸ್ ಆರಂಭಿಸಿದ ರೋಹನ್ ಪಾಟೀಲ್ (6) ಮತ್ತು ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ (9) ಉತ್ತಮ ರನ್ ಕಲೆ ಹಾಕವಲ್ಲಿ ಎಡುವಿದರು. ಮೂರನೇ ಕ್ರಮಾಂಕದಲ್ಲಿ ಆಗಮಿಸಿದ ನಿಕಿನ್ ಜೋಸ್ ಅರ್ಧಶತಕ ಹೊಡೆದು ಮಿಂಚಿದರು. ಕೇವಲ 37 ಎಸೆತಗಳಲ್ಲಿ 7 ಬೌಂಡರಿ ಹಾಗು 1 ಸಿಕ್ಸರ್ 57 ರನ್‌ಗಳಿಸಿ ಔಟಾದರು.
ಬಳಿಕ ಬಂದ ಯಾವುದೇ ಬ್ಯಾಟರ್‌ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೃಷ್ಣಮೂರ್ತಿ ಸಿದ್ಧಾರ್ಥ್ (9), ನಾಯಕ ಶ್ರೇಯಸ್ ಗೋಪಾಲ್ (19), ಲೋಚನ್ ಗೌಡ (19) ಮತ್ತು ಎಂಬಿ ದರ್ಶನ್ (18) ತಂಡದ ಮೊತ್ತವನ್ನು ಹೆಚ್ಚಿಸಲು ನೆರವಾದರು.
ಶಿವಮೊಗ್ಗ ಪರ ಹಾರ್ದಿಕ್ ರಾಜ್, ಧೀರಜ್ ಮೋಹನ್, ಅವಿನಾಶ್ ಡಿ, ವಾಸುಕಿ ಕೌಶಿಕ್, ಎಚ್ ಎಸ್ ಶರತ್, ಆನಂದ್ ದೊಡ್ಡಮನಿ ತಲಾ ಒಂದೊಂದು ವಿಕೆಟ್ ಪಡೆದರು.
ಮಂಗಳೂರು ನೀಡಿದ ಟಾರ್ಗೆಟ್ ಅನ್ನು ಚೇಸಿಂಗ್ ಮಾಡಿದ ಶಿವಮೊಗ್ಗ ತಂಡ ಪರ ರೋಹನ್ ನವೀನ್ (37) ಮತ್ತು (43) ಅಮೋಘ ಪ್ರದರ್ಶನ ನೀಡಿದರು. ಉಳಿದಂತೆ ಧೀರಜ್ ಮೋಹನ್ (5), ನಿಹಾಲ್ ಉಳ್ಳಾಲ್ (13), ಹಾರ್ದಿಕ್ ರಾಜ್ (4), ಭರತ್ ಧುರಿ (5), ಡಿ ಅಶೋಕ್ (3) ತಂಡಕ್ಕೆ ಆಸರೆಯಾಗಲಿಲ್ಲ.
ಕೊನೆಯಲ್ಲಿ ಕ್ರೀಸ್‌ಗೆ ಕಚ್ಚಿ ನಿಂತ ಎಸ್ ಶಿವರಾಜ್ ಮತ್ತು ಅವಿನಾಶ್ ಡಿ ಶಿವಮೊಗ್ಗಕ್ಕೆ ಗೆಲುವು ತಂದುಕೊಟ್ಟರು. ಎಸ್ ಶಿವರಾಜ್ 9 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 24 ರನ್ ಗಳಿಸಿದರೆ, ಅವಿನಾಶ್ ಡಿ ಒಂದು ಎಸೆತದಲ್ಲಿ ಬೌಂಡರಿ ಸಿಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications