Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shocking Exit: ಫಿಫಾ ವಿಶ್ವಕಪ್‌ನಿಂದ ಹೊರ ಬಿದ್ದ ಇಟಲಿ

ಫುಟ್ಬಾಲ್‌ ಜಗತ್ತಿನಿಂದ ಶಾಕಿಂಗ್‌ ನ್ಯೂಸ್‌ ಒಂದು ಹೊರ ಬಿದ್ದಿದೆ. ನಾಲ್ಕು ಬಾರಿಯ ಫಿಫ್‌ ವಿಶ್ವ ಚಾಂಪಿಯನ್‌ ಇಟಲಿ ಈ ಬಾರಿ ಫುಟ್ಬಾಲ್ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಈ ಮೂಲಕ ಸತತ ಮೂರನೇ ಬಾರಿಗೆ ವಿಶ್ವಕಪ್‌ನಿಂದ ಇಟಲಿ ಹೊರ ಬಿದ್ದಿದೆ. 2026ರ ವಿಶ್ವಕಪ್ ಯುರೋಪಿಯನ್ ಪ್ಲೇಆಫ್‌ನಲ್ಲಿ ಬೋಸ್ನಿಯಾ ಮತ್ತು ಹರ್ಜೆಗೋವಿನಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ 4-1 ಅಂತರದಿಂದ ಆಘಾತ ಅನುಭವಿಸಿದೆ.

ಪಂದ್ಯ ಆರಂಭದಿಂದಲೂ ರೋಚಕತೆಯಿಂದ ಕೂಡಿತ್ತು. ನಿಗದಿತ ಸಮಯ ಮತ್ತು ಹೆಚ್ಚುವರಿ ಸಮಯದ ನಂತರ ಉಭಯ ತಂಡಗಳು ತಲಾ 1 ಗೋಲು ಬಾರಿಸಿದ್ದವು. ಆದರೆ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಈ ವೇಳೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾದ ಇಟಲಿ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾಯಿತು. ಈ ಹಂತದಲ್ಲಿ ಬೋಸ್ನಿಯಾ ಮತ್ತು ಹರ್ಜೆಗೋವಿನಾ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ಮೂಲಕ ಇಟಲಿ ಸತತ ಮೂರು ವಿಶ್ವಕಪ್‌ ಅರ್ಹತೆ ಪಡೆಯುವಲ್ಲಿ ವಿಫಲವಾಗಿ, ನಾಚಿಕೆಗೇಡಿನ ದಾಖಲೆಯನ್ನು ಬರೆಯಿತು.

Shocking Exit

ಈ ಗೆಲುವು ಬೋಸ್ನಿಯಾ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. 2014 ರ ನಂತರ ತಂಡವು ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದು, ಒಟ್ಟಾರೆಯಾಗಿ ಬೋಸ್ನಿಯಾ ಮತ್ತು ಹರ್ಜೆಗೋವಿನಾ ಎರಡನೇ ವಿಶ್ವಕಪ್ ಆಗಿದೆ. ತಮ್ಮ ತವರು ನೆಲವಾದ ಜೆನಿಕಾದಲ್ಲಿ ಅಮೋಘ ಪ್ರದರ್ಶನ ನೀಡಿದ ಬೋಸ್ನಿಯಾ ಮತ್ತು ಹರ್ಜೆಗೋವಿನಾ ತಂಡ ಭರ್ಜರಿ ಜಯ ಸಾಧಿಸಿದೆ. ಬೋಸ್ನಿಯಾ ಈಗ ಗ್ರೂಪ್ ಬಿ ನಲ್ಲಿ ಕೆನಡಾ, ಸ್ವಿಟ್ಜರ್ಲೆಂಡ್ ಮತ್ತು ಕತಾರ್‌ನಂತಹ ತಂಡಗಳನ್ನು ಎದುರಿಸಲಿದೆ.

ಜೆಕಿಯಾ ಡೆನ್ಮಾರ್ಕ್ ಅನ್ನು ಸೋಲಿಸಿ ಸ್ಥಾನ ಪಡೆದುಕೊಂಡಿತು

ಎರಡನೇ ಪ್ಲೇಆಫ್‌ನಲ್ಲಿ, ಪೆನಾಲ್ಟಿ ಶೂಟೌಟ್‌ನಲ್ಲಿ ಡೆನ್ಮಾರ್ಕ್ ಅನ್ನು ಸೋಲಿಸುವ ಮೂಲಕ ಜೆಕ್ ತಂಡ 2026 ರ ವಿಶ್ವಕಪ್‌ಗೆ ಅರ್ಹತೆ ಪಡೆಯಿತು. ಜೋಕಿಮ್ ಆಂಡರ್ಸನ್ 72 ನೇ ನಿಮಿಷದಲ್ಲಿ ಹೆಡರ್ ಮೂಲಕ ಸಮಬಲ ಸಾಧಿಸಿತು. ಹೆಚ್ಚುವರಿ ಸಮಯದಲ್ಲಿ ಲ್ಯಾಡಿಸ್ಲಾವ್ ಕ್ರೆಜಿಕ್ ಗಳಿಸಿದ ಗೋಲು ಜೆಕ್ ಗಣರಾಜ್ಯಕ್ಕೆ ಮತ್ತೊಮ್ಮೆ ಮುನ್ನಡೆ ನೀಡಿತು. ಡೆನ್ಮಾರ್ಕ್ ಬದಲಿ ಆಟಗಾರ ಕ್ಯಾಸ್ಪರ್ ಹಾಗ್ 111 ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಜೆಕ್ ಗಣರಾಜ್ಯ ಪೆನಾಲ್ಟಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಜಯ ಸಾಧಿಸಿತು.

ಫಿಫಾ ವಿಶ್ವಕಪ್‌ನಲ್ಲಿ ಇಟಲಿ ಸಾಧನೆ

ಫಿಫಾ ವಿಶ್ವಕಪ್‌ ಅತಿ ಹೆಚ್ಚು ಬಾರಿ ಗೆದ್ದ ತಂಡಗಳಲ್ಲಿ ಇಟಲಿ ತಂಡಕ್ಕೂ ಸ್ಥಾನ. ಇಟಲಿ 1934, 1938, 1982, 2006 ರಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಈ ಮೂಲಕ 4 ಬಾರಿಗೂ ಹೆಚ್ಚು ಫಿಫಾ ವಿಶ್ವಕಪ್‌ ಗೆದ್ದ ಮೂರನೇ ತಂಡ ಎಂಬ ಹಿರಿಮೆ ಇಟಲಿಯದ್ದಾಗಿದೆ. ಬ್ರೆಜಿಲ್‌ 5, ಜರ್ಮನಿ ತಂಡ 4 ಬಾರಿ ಫಿಫಾ ವಿಶ್ವಕಪ್ ಗೆದ್ದಿವೆ.

Story first published: Wednesday, April 1, 2026, 11:41 [IST]
Other articles published on Apr 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+