IPL Upsets: ಗೆಲ್ಲುವ ನೆಚ್ಚಿನ ತಂಡಕ್ಕೆ ಸೋಲಿನ ಶಾಕ್ ನೀಡಿದ ಪಂದ್ಯಗಳು
ಐಪಿಎಲ್ ಆರಂಭವಾಗುತ್ತಿದೆ. ಈ ಲೀಗ್ ಅದೆಷ್ಟೋ ಅವಿಸ್ಮರಣೀಯ ಇನಿಂಗ್ಸ್‌ಗಳನ್ನು ಕಂಡಿದೆ. ಶ್ರೀಮಂತ ಲೀಗ್‌ನ ಶ್ರೀಮಂತಿಕೆಯನ್ನು ಪಂದ್ಯಗಳ ಫಲಿತಾಂಶಗಳು ಹೆಚ್ಚಿಸಿವೆ. ಈ ಲೀಗ್‌ನಲ್ಲಿ ಅದೆಷ್ಟೋ ಪಂದ್ಯಗಳ ಚಿತ್ರಣವೇ ಬುಡಮೇಲು ಆಗಿದೆ. ಸೋಲುವ ಪಂದ್ಯದಲ್ಲಿ ಗೆಲುವಿನ ಹೊಳಪು ಬಂದ್ರೆ, ಗೆಲ್ಲುವ ಪಂದ್ಯದಲ್ಲಿ ನಿರಾಸೆ ಕಹಿ ಬಹುವಾಗಿ ಆಟಗಾರರನ್ನು ಕಾಡಿದೆ. ಐಪಿಎಲ್ ಇಂತಹ ಅದೆಷ್ಟೋ ಪಂದ್ಯಗಳನ್ನು ತನ್ನ ಆಳದಲ್ಲಿ ಇಟ್ಟುಕೊಂಡಿದೆ. ಆದ್ರೆ ಅಭಿಮಾನಿಗಳಿಗೆ ಹತ್ತಿರವಾಗಿರುವ ಕೆಲವು ಪಂದ್ಯಗಳ ಪರಿಚಯ ಇಲ್ಲಿದೆ.
ಐಪಿಎಲ್‌ನಲ್ಲಿ ಅದೆಷ್ಟೋ ಪಂದ್ಯಗಳಲ್ಲಿ ತಂಡಗಳು ಲೋ ಸ್ಕೋರ್ ಡಿಫೆಂಡ್ ಮಾಡಿಕೊಂಡಿವೆ. ಅಸಾಧ್ಯ ಎನ್ನುವ ಟೋಟಲ್ ಚೇಸ್ ಮಾಡಿ ಗೆದ್ದಿವೆ. ಇಂದು ನಾವು ಇಂತಹದ್ದೇ ಐದು ಪಂದ್ಯಗಳ ಇತಿಹಾಸದ ಪುಟದಿಂದ ಮತ್ತೆ ತಿರುವುವ ಪ್ರಯತ್ನ ಮಾಡುತ್ತಿದ್ದೇವೆ.

ರಾತ್ರೋರಾತ್ರಿ ಸ್ಟಾರ್ ಆದ ರಿಂಕು
ನಿಜಕ್ಕೂ ಈ ಒಂದು ಪಂದ್ಯ ರಿಂಕು ಸಿಂಗ್ ಅವರ ಬದುಕನ್ನೇ ಬದಲಿಸಿತು ಎಂದ್ರೂ ತಪ್ಪಾಗದು. ಅಬ್ಬಾ ಇವರ ಬ್ಯಾಟಿಂಗ್ ಕಂಡು ಅಭಿಮಾನಿಗಳು ಮತ್ತೊಬ್ಬ ಸೂಪರ್ ಸ್ಟಾರ್ ಜನ್ಮ ತಾಳಿದ ಎಂದೇ ಹೇಳಿದ್ರು. ಕ್ರಿಕೆಟ್ ಅಭಿಮಾನಿಗಳು ಹಾಗೂ ಇಡೀ ವಿಶ್ವ ಏಪ್ರಿಲ್ 9, 2023 ರ ದಿನಾಂಕವನ್ನು ಮರೆತರೂ, ರಿಂಕು ಸಿಂಗ್ ಮರೆಯಲು ಅಸಾಧ್ಯ. ಈ ಪಂದ್ಯವನ್ನು ರಿಂಕು ತನ್ನ ಜೀವಿತಾವಧಿಯಲ್ಲಿ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತಹ ಪಂದ್ಯ.
ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 204 ರನ್ ಸೇರಿಸಿತು. ಟೈಟನ್ಸ್ ತಂಡದ ಪರ ಸಾಯಿ ಸುದರ್ಶನ್ (53), ವಿಜಯ್ ಶಂಕರ್ (63) ಅಮೋಘ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದ್ರು.
ಗುರಿಯನ್ನು ಹಿಂಬಾಲಿಸಿದ ಕೆಕೆಆರ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ವೈಪಲ್ಯ ಅನುಭವಿಸಿದ್ರೂ, ವೆಂಕಟರ್ ಅಯ್ಯರ್ (83), ನಿತೀಶ್ ರಾಣಾ (45) ತಂಡಕ್ಕೆ ಅಧಾರವಾಗಿದ್ದರು. ಆದ್ರೆ ತಂಡ ಕೊನೆಯ ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತು. ಕೊನೆಯ ಓವರ್‌ನಲ್ಲಿ ಕೆಕೆಆರ್ ಗೆಲುವಿಗೆ 29 ರನ್ ಅವಶ್ಯಕತೆ ಇತ್ತು. ಗುಜರಾತ್ ಪರ ಯಶ್ ದಯಾಳ್ ಬೌಲಿಂಗ್ ನಡೆಸಿದ್ರು. ಮೊದಲ ಎಸೆತದಲ್ಲಿ ಉಮೇಶ್ ಯಾದವ್ ಸಿಂಗಲ್ ಪಡೆದ್ರು. ಮುಂದಿನ ಐದು ಎಸೆತಗಳಲ್ಲಿ 28 ರನ್ ಅವಶ್ಯಕತೆ ಇತ್ತು. ರಿಂಕು ಸಿಂಗ್ ರೌದ್ರಾವತಾರ ತಾಳಿ 5 ಸಿಕ್ಸರ್ ಬಾರಿಸಿ ಅಬ್ಬರಿಸಿದ್ರು. ಇಲ್ಲಿಂದ ರಿಂಕು ಮನೆ ಮನೆಗೆ ಪರಿಚಯವಾದ್ರು.

ಆರ್‌ಸಿಬಿಗೆ ಸಿಕ್ಕ ಭರವಸೆಯ ಬೆಳಕು
ಮೇ 6, 2012 ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆದಲ್ಲಿ ನೂತನ ಫಿನಿಷರ್ ಉದಯವಾಯಿತು. ಈ ಫಿನಿಷರ್ ಆಟ ಕಂಡು ಬೆಂಗಳೂರು ಫ್ಯಾನ್ಸ್ ಹಬ್ಬದೂಟವನ್ನು ಮಾಡಿದ್ರು. ಆಗಿದ್ದು ಇಷ್ಟೇ.. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಡೆಕ್ಕನ್ ಚಾಜರ್ಸ್ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 181 ರನ್ ಸೇರಿಸಿತ್ತು. ಈ ಪಂದ್ಯದಲ್ಲಿ ಶಿಖರ್ ಧವನ್ 73 ರನ್‌ಗಳ ಅಮೋಘ ಇನಿಂಗ್ಸ್ ಕಟ್ಟಿದ್ದರು.
ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಸಂಕಷ್ಟದಲ್ಲಿತ್ತು. ಬೆಂಗಳೂರು ತಂಡದ ಗೆಲುವಿಗೆ ಕೊನೆಯ 3 ಓವರ್‌ಗಳಲ್ಲಿ 39 ರನ್ ಅವಶ್ಯಕತೆ ಇತ್ತು. ಡೆಕ್ಕನ್ ಚಾಜರ್ಸ್ ತಂಡದ ಪರ ಡೇಲ್ ಸ್ಟೇಯ್ನ್ 18ನೇ ಓವರ್ ಬೌಮ್ ಮಾಡಲು ಬಂದ್ರು. ಆಗ ಬ್ಯಾಟಿಂಗ್ ಮಾಡುತ್ತಿದ್ದ ಎಬಿಡಿ ಅಕ್ಷರಶಃ ರನ್ ಸುರಿಮಳೆ ಸುರಿಸಿದ್ರು. ಡೇಲ್ ಅವರ ಬಿಗುವಿನ ದಾಳಿಗೂ ಲೆಕ್ಕಿಸದ ಎಬಿಡಿ 25 ರನ್ ಬಾರಿಸಿ ಪಂದ್ಯದ ಚಿತ್ರಣವನ್ನೇ ಬುಡಮೇಲು ಮಾಡಿದ್ರು. ಈ ಪಂದ್ಯದ ಬಳಿಕ ಆರ್‌ಸಿಬಿ ಅಭಿಮಾನಿಗಳು ಎಬಿಡಿ ಆಟಕ್ಕೆ ಮನಸೋತರು. ಅಲ್ಲದೆ ತಮ್ಮ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ನೀಡಿದ್ರು. ಈ ಪಂದ್ಯದಲ್ಲಿ ಎಬಿಡಿ ಜಸ್ಟ್ 17 ಎಸೆತಗಳಲ್ಲಿ 47 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

5 ವಿಕೆಟ್ ಬೇಗನೆ ಪಡೆದ್ರೂ ಆರ್‌ಸಿಬಿಗೆ ಸೋಲು
ನಿಜಕ್ಕೂ ಈ ಒಂದು ಪಂದ್ಯ ಮಾತ್ರ ಆರ್‌ಸಿಬಿ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಅದಕ್ಕೆ ಕಾರಣ ಆ ಸೋಲು. ಏ.14, 2017ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 142 ರನ್ ಸೇರಿಸಿತು. ಈ ವೆಳೆ ತಂಡದ ನಾಯಕ ವಿರಾಟ್ ಕೊಹ್ಲಿ 5 ಬೌಂಡರಿ, 2 ಸಿಕ್ಸರ್ ಸೇರಿದಂತೆ 62 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಸಾಧಾರಣ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಮುಂಬೈ ತಂಡದ ಮೊತ್ತ 7 ರನ್ ಆಗಿದ್ದಾಗ ಪ್ರಮುಖ 4 ವಿಕೆಟ್ ಬಿದ್ದಿದ್ದವು. 33 ರನ್ ಆಗುವಷ್ಟರಲ್ಲಿ ನಿತೀಶ್ ರಾಣಾ ಸಹ ಪೆವಿಲಿಯನ್ ಹಾದಿ ಹಿಡಿದರು. 5 ವಿಕೆಟ್ ಪಡೆದು ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂಬ ಆರ್‌ಸಿಬಿ ಆಸೆಗೆ ಕಿರನ್ ಪೋಲಾರ್ಡ್ ಹಾಗೂ ಕೃನಾಲ್ ಪಾಂಡ್ಯ ಪೆಟ್ಟು ನೀಡಿದರು. ಈ ಜೋಡಿ ಅಮೋಘ ಜೊತೆಯಾಟವನ್ನು ನೀಡಿ, ಸೋಲಿನ ದವಡೆಯಿಂದ ಪಂದ್ಯವನ್ನು ಪಾರು ಮಾಡಿತು.
ಗೆಲ್ಲಬಹುದಾದ ಪಂದ್ಯ ಕೈ ಚೆಲ್ಲಿದ ಚೆನ್ನೈ
ಐಪಿಎಲ್ 2019ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಯಾವೊಬ್ಬ ಬ್ಯಾಟರ್ ಆಧಾರವಾಗಲಿಲ್ಲ. ಮಧ್ಯಮ ಕ್ರಮಾಮಕದಲ್ಲಿ ಇಶಾನ್ ಕಿಶನ್ 23, ಅನುಭವಿ ಕಿರನ್ ಪೋಲರ್ಡ್ 41 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಉಳಿದ ಬ್ಯಾಟರ್‌ಗಳು ನಿರಾಸೆ ಅನುಭವಿಸಿದರು. ಈ ಪಂದ್ಯದಲ್ಲಿ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 149 ರನ್ ಸೇರಿಸಿತು.
ಸಾಧಾರಣ ಮೊತ್ತ ಗೆದ್ದು ಬೀಗಿ ಬಿಡಬಹುದು ಎಂಬ ಆಲೋಚನೆಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಶಾಕ್ ಕಾದಿತ್ತು. ಸಿಎಸ್‌ಕೆ ತಂಡದ ಫಾಫ್ ಡುಪ್ಲೇಸಿಸ್ (26) ಕೃನಾಲ್‌ಗೆ ವಿಕೆಟ್ ಒಪ್ಪಿಸಿದರು. ಸುರೇಶ್ ರೈನಾ, ಅಂಬಟಿ ರಾಯುಡು, ನಾಯಕ ಮಹೇಂದ್ರ ಸಿಂಗ್ ಧೋನಿ ಅಕ್ಷರಶಃ ಜವಾಬ್ದಾರಿಯನ್ನು ಮರೆತರು. ವಿಂಡೀಸ್ ತಂಡದ ಸ್ಟಾರ್ ಬ್ರಾವೋ ಸಹ ಈ ಪಂದ್ಯದಲ್ಲಿ ಸಿಎಸ್‌ಕೆ ಆಧಾರವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಗೆಲುವಿಗೆ 9 ರನ್ ಅವಶ್ಯಕತೆ ಇತ್ತು. ಮಲಿಂಗಾ ಬಿಗುವಿನ ದಾಳಿ ನಡೆಸಿ ಎರಡು ವಿಕೆಟ್ ಪಡೆದರು. ಗೆಲ್ಲಬಹುದಾದ ಪಂದ್ಯವನ್ನು ಚೆನ್ನೈ ಸೋತಿತು.
ಲೋ ಸ್ಕೋರ್ ಡಿಫೆಂಡ್ ಮಾಡಿಕೊಂಡ ಮುಂಬೈ
2017ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಗಳು ಹೈದರಾಬಾದ್‌ನಲ್ಲಿ ಕಾದಾಟ ನಡೆಸಿದವು. ಈ ಪಂದ್ಯದ ವೇಳೆ ಮುಂಬೈ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 129 ರನ್ ಸೇರಿಸಿತು. ಈ ವೇಳೆ ನಾಯಕ ರೋಹಿತ್ ಶರ್ಮಾ (24) ಹಾಗೂ ಆಲ್‌ರೌಂಡರ್ ಕೃನಾಲ್ ಪಾಂಡ್ಯ (47) ಬಾರಿಸಿದ್ದು ಬಿಟ್ಟರೆ ಬೇರ್ಯಾರೂ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.
ಸಾಧಾರಣ ಗುರಿಯನ್ನು ಹಿಂಬಾಲಿಸಿದ ಪುಣೆ ಸೂಪರ್ ಜೈಂಟ್ಸ್ ಆರಂಭ ಕಳಪೆಯಾಗಿತ್ತು. ರಾಹುಲ್ ತ್ರಿಪಾಠಿ (3) ಬೇಗನೆ ಪೆವಿಲಿಯನ್ ಸೇರಿದ್ರು. ಅಜಿಂಕ್ಯ ರಹಾನೆ (44), ಸ್ಟೀವನ್ ಸ್ಮಿತ್ (51) ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ರು. ಈ ವೇಳೆ ಪುಣೆ 11.5 ಓವರ್‌ಗಳಲ್ಲಿ 2 ವಿಕೆಟ್‌ಗೆ 71 ರನ್ ಕಲೆ ಹಾಕಿ ಸುಸ್ಥಿತಿಯಲ್ಲಿತ್ತು. ಆದರೆ ಬಳಿಕ ಮುಂಬೈ ಬೌಲರ್‌ಗಳ ಮ್ಯಾಜಿಕ್ ಮಾಡಿದ ಪರಿಣಾಮ ಒಂದು ರನ್ ಗೆಲುವು ದಾಖಲಿಸಲು ಸಾಧ್ಯವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications