IND vs AUS: ಶಾರ್ಟ್, ಜಂಪಾ ಗೆಲುವಿನ ಹೀರೋ: ಆಸೀಸ್‌ಗೆ 2-0 ಮುನ್ನಡೆ
ಭರವಸೆಯ ಬ್ಯಾಟರ್ ಮ್ಯಾಥ್ಯೂ ಶಾರ್ಟ್ (74 ರನ್) ಹಾಗೂ ಲೆಗ್ ಸ್ಪಿನ್ ಬೌಲರ್ ಆಡಂ ಜಂಪಾ (60ಕ್ಕೆ 4) ಇವರುಗಳ ಭರ್ಜರಿ ಅಟದ ನೆರವಿನಿಂದ ಆಸ್ಟ್ರೇಲಿಯಾ ಆಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 2 ವಿಕೆಟ್‌ಗಳಿಂದ ಟೀಮ್ ಇಂಡಿಯಾವನ್ನು ಮಣಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯ, ಮೂರನೇ ಪಂದ್ಯ ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ಸರಣಿಯನ್ನು 2-0ಯಿಂದ ಗೆದ್ದು ಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಶುಭಮನ್ ಗಿಲ್ (9), ವಿರಾಟ್ ಕೊಹ್ಲಿ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. 3ನೇ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಶತಕದ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ರೋಹಿತ್ ಶರ್ಮಾ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 73 ರನ್ ಬಾರಿಸಿ ಔಟ್ ಆದರು. ಇನ್ನು ಉಪನಾಯಕ ಶ್ರೇಯಸ್ ಅಯ್ಯರ್ 7 ಬೌಂಡರಿ ನೆರವಿವಿನಿಂದ 61 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಭಾರತದ ಪರ ಕೆಎಲ್ ರಾಹುಲ್ 11, ವಾಷಿಂಗ್ಟನ್ ಸುಂದರ್ 12, ನಿತೀಶ್ ಕುಮಾರ್ ರೆಡ್ಡಿ 8 ರನ್ ಬಾರಿಸಿದರು. ಆಲ್‌ರೌಂಡರ್ ಅಕ್ಷರ್ ಪಟೇಲ್ 5 ಬೌಂಡರಿ ನೆರವಿನಿಂದ 44 ರನ್ ಸಿಡಿಸಿ ಆಧಾರವಾದರು. ಕೆಳ ಕ್ರಮಾಂಕದಲ್ಲಿ ಹರ್ಷಿತ್ ರಾಣಾ ಅಜೇಯ 24, ಅರ್ಷದೀಪ್ ಸಿಂಗ್ 13 ರನ್ ಕಲೆ ಹಾಕಿತು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 264 ರನ್ ಸೇರಿಸಿತು. ಆಸೀಸ್ ಪರ ಲೆಗ್ ಸ್ಪಿನ್ ಬೌಲರ್ ಆಡಂ ಜಂಪಾ 4 ವಿಕೆಟ್ ಕಬಳಿಸಿ ಮಿಂಚಿದರು.
ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಆರಂಭ ಕಳಪೆಯಾಗಿತ್ತು. ಮಿಚೆಲ್ ಮಾರ್ಷ್ (11), ಟ್ರಾವಿಸ್ ಹೆಡ್ (28) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ಮ್ಯಾಟ್ ರೆನ್ಶಾ ಹಾಗೂ ಮ್ಯಾಥ್ಯೂ ಶಾರ್ಟ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 56 ಎಸೆತಗಳಲ್ಲಿ 55 ರನ್ ಕಲೆ ಹಾಕಿ ಮಿಂಚಿದರು. ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ (9) ರನ್ ಬರ ಅನುಭವಿಸಿದರು.
ಶಾರ್ಟ್ ಅರ್ಧಶತಕದ ಆಟ
5ನೇ ವಿಕೆಟ್‌ಗೆ ಕೂಪರ್ ಕಾನೋಲಿ ಹಾಗೂ ಶಾರ್ಟ್ ಜೋಡಿ ಅರ್ಧಶತಕ ಬಾರಿಸಿ ಮಿಂಚಿದರು. ಮ್ತಾಥ್ಯೂ ಶಾರ್ಟ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 74 ರನ್ ಸಿಡಿಸಿದರು. ಕೂಪರ್ ಕಾನೋಲಿ 5 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 61 ರನ್ ಬಾರಿಸಿದರು. ಮಿಚೆಲ್ ಓವನ್ 2 ಬೌಂಡರಿ, 3 ಸಿಕ್ಸರ್ ನೆರವಿನಿಂದ 36 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಆಸೀಸ್ 46.2 ಓವರ್‌ಗಳಲ್ಲಿ 8 ವಿಕೆಟ್‌ಗೆ 265 ರನ್ ಸೇರಿಸಿ ಜಯ ಸಾಧಿಸಿತು. ಭಾರತದ ಪರ ಅರ್ಷದೀಪ್ ಸಿಂಗ್, ಹರ್ಷೀತ್ ರಾಣಾ, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications