ಕನ್ನಡತಿ ಶ್ರೇಯಾಂಕಾ ಪಾಟೀಲ್ ಮಾರಕ ದಾಳಿ: ಭಾರತಕ್ಕೆ ಗೆಲುವಿನ ಅಭ್ಯಾಸ
ಮಹಿಳಾ ಟಿ20 ವಿಶ್ವಕಪ್ ಇನ್ನೇನು ಕೆಲವೇ ದಿನಗಳಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಈ ಮೆಗಾ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಜೂನ್ 12 ರಿಂದ ಆರಂಭವಾಗುವ ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯುತ್ತಿವೆ. ವೆಸ್ಟ್ ಇಂಡೀಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಪರ ಕನ್ನಡತಿ ಅಮೋಘ ಸ್ಪಿನ್ ದಾಳಿ ನಡೆಸಿ ಗೆಲುವಿನಲ್ಲಿ ಮಿಂಚಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಜೋಡಿ ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 59 ರನ್ ಸೇರಿಸಿತು. ಈ ವೇಳೆ ಸ್ಮೃತಿ ಮಂಧನಾ 23 ಎಸೆತಗಳಲ್ಲಿ 39 ರನ್ ಸಿಡಿಸಿದರೆ, ಆರಂಭಿಕ ಆಟಗಾರ್ತಿ ಶಫಾಲಿ 13 ಎಸೆತಗಳಲ್ಲಿ 29 ರನ್ ಬಾರಿಸಿ ಮಿಂಚಿದರು.

4ನೇ ವಿಕೆಟ್‌ಗೆ ಯಾಸ್ತಿಕಾ ಭಾಟಿಯಾ ಹಾಗೂ ಭಾರ್ತಿ ಫುಲ್ಮಾಲಿ ಜೋಡಿ ಸೊಗಸಾದ ಜೊತೆಯಾಟ ನೀಡಿತು. ಈ ಜೋಡಿ 7 ಓವರ್‌ಗಳ ಕಾಲ ವಿಕೆಟ್ ಬೀಳದಂತೆ ನೋಡಿಕೊಂಡು 60 ರನ್ ಸೇರಿಸಿತು. ಈ ಹಂತದಲ್ಲಿ ಯಾಸ್ತಿಕಾ ಭಾಟಿಯಾ 6 ಬೌಂಡರಿ ಸಹಾಯದಿಂದ 36 ರನ್ ಬಾರಿಸಿದ್ದಾಗ ರಿಟೈರ್ಡ್ ಹರ್ಟ್ ಆದರು. ಭಾರ್ತಿ ಫುಲ್ಮಾಲಿ 40 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 56 ರನ್ ಬಾರಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 179 ರನ್ ಸಿಡಿಸಿತು.
ಶ್ರೇಯಾಂಕಾ ಮಾರಕ ದಾಳಿ
180 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡದ ಡಿಯಾಂಡ್ರಾ ಡಾಟಿನ್ ಮತ್ತು ಶೆಮೈನ್ ಕ್ಯಾಂಪ್‌ಬೆಲ್ (25) ಜೋಡಿ 63 ರನ್ ಸೇರಿಸಿತು. ಆರಂಭಿಕ ಆಟಗಾರ್ತಿ ಡಿಯಾಂಡ್ರಾ ಡಾಟಿನ್ 8 ಬೌಂಡರಿ ಸೇರಿದಂತೆ 49 ರನ್ ಬಾರಿಸಿ ಮಿಂಚಿದರು. ಉಳಿದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 153 ರನ್ ಸೇರಿಸಿ ಸೋಲು ಕಂಡಿತು.
ಭಾರತದ ಪರ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸ್ಪಿನ್ ಮೋಡಿಗೆ ವೆಸ್ಟ್ ಇಂಡೀಸ್ ತಂಡದ ಬ್ಯಾಟರ್‌ಗಳು ಉತ್ತರ ನೀಡಲು ವಿಫಲರಾದರು. ಇವರು 4 ಓವರ್ ಬೌಲಿಂಗ್ ಮಾಡಿ 36 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದರು. ಉಳಿದಂತೆ ರಾಧಾ ಯಾದವ್ 25 ರನ್ ನೀಡಿ 3 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications