ಏಷ್ಯಾಕಪ್‌ಗೆ ಭಾರತ ತಂಡ ಆಯ್ಕೆಗೂ ಮುನ್ನ ಗುಡ್‌ನ್ಯೂಸ್: ಅಯ್ಯರ್, ರಾಹುಲ್ ಬ್ಯಾಟಿಂಗ್ ಅಭ್ಯಾಸ
ಏಷ್ಯಾಕಪ್ 2023ರ ಪಂದ್ಯಾವಳಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಮುನ್ನವೇ ಬಿಸಿಸಿಐಗೆ ಗುಡ್‌ನ್ಯೂಸ್ ಸಿಕ್ಕಿದೆ. ತಂಡದ ಪ್ರಮುಖ ಆಟಗಾರರಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಫಿಟ್‌ನೆಸ್‌ಗೆ ಹತ್ತಿರವಾಗಿದ್ದು ಅಭ್ಯಾಸ ಪಂದ್ಯದಲ್ಲಿ ಆಡುತ್ತಿದ್ದಾರೆ.
ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಪಂದ್ಯದ ಸಿಮ್ಯುಲೇಶನ್‌ಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಸೋಮವಾರ ಎನ್‌ಸಿಎ ಅಭ್ಯಾಸ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಫಿಟ್ನೆಸ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಈ ವಾರ ಏಷ್ಯಾಕಪ್ ತಂಡವನ್ನು ಪ್ರಕಟಿಸಲಾಗುತ್ತದೆ.

ರಿಷಬ್ ಪಂತ್ ಇವರಿಬ್ಬರೂ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅಭ್ಯಾಸ ಆಟದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಇಬ್ಬರೂ ಆಟಗಾರರು ನೆಟ್ಸ್‌ನಲ್ಲಿ ತರಬೇತಿಯನ್ನು ಪ್ರಾರಂಭಿಸಿದ್ದರೂ, ಸಂಪೂರ್ಣ ಫಿಟ್‌ನೆಸ್‌ಗೆ ಮರಳಲು ಅಭ್ಯಾಸ ಪಂದ್ಯಗಳನ್ನು ಆಡುವುದು ಮುಂದಿನ ಹಂತವಾಗಿದೆ. ರಾಹುಲ್ ಮತ್ತು ಶ್ರೇಯಸ್ ಏಷ್ಯಾ ಕಪ್ ಆಯ್ಕೆಯಿಂದ ಹೊರಗುಳಿಯುತ್ತಾರೆ ಎಂದು ಆರಂಭದಲ್ಲಿ ವರದಿ ಮಾಡಲಾಗಿತ್ತು, ಆದರೆ ಬ್ಯಾಟಿಂಗ್ ಆರಂಭಿಸಿರುವುದು ಅವರ ವಾಪಸಾತಿಗೆ ಬಲ ಕೊಟ್ಟಂತಾಗಿದೆ.
ಎಚ್ಚರಿಕೆಯ ಹೆಜ್ಜೆ ಇಡಲು ಬಿಸಿಸಿಐ ನಿರ್ಧಾರ
ಬಿಸಿಸಿಐ ಈಗಾಗಲೇ ಕೆಲವು ಆಟಗಾರರನ್ನು ಸಂಪೂರ್ಣ ಫಿಟ್ ಆಗುವ ಮುನ್ನವೇ ಕಣಕ್ಕಿಳಿಸಿ ಹೊಡೆತ ತಿಂದಿದೆ. ಈಗ ಏಕದಿನ ವಿಶ್ವಕಪ್ ಹತ್ತಿರ ಇರುವ ಕಾರಣ ಈ ಇಬ್ಬರೂ ಪ್ರಮುಖ ಆಟಗಾರರ ವಿಚಾರದಲ್ಲಿ ಯಾವ ನಿರ್ಧಾರ ಮಾಡುತ್ತದೆ ಎನ್ನುವ ಕುತೂಹಲ ಇದೆ.
ಇಬ್ಬರೂ ಶಸ್ತ್ರಚಿಕಿತ್ಸೆಗೆ ಒಳಗಾಗದ ನಂತರ ದೀರ್ಘಾವಧಿಯಲ್ಲಿ ಚೇತರಿಸಿಕೊಂಡಿದ್ದಾರೆ. ಏಷ್ಯಾಕಪ್ ಪಂದ್ಯಾವಳಿ ಏಕದಿನ ಮಾದರಿಯಲ್ಲಿ ನಡೆಯುವುದು ಒಂದು ಕಡೆಯಾದರೆ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಪಂದ್ಯಗಳು ನಡೆಯಲಿದೆ. ಇದು ಆಟಗಾರರ ಫಿಟ್‌ನೆಸ್ ಮೇಲೆ ಪರಿಣಾಮ ಬೀರಲಿದೆ. ಇದೇ ಕಾರಣಕ್ಕೆ ಏಷ್ಯಾಕಪ್‌ಗೆ ಇವರಿಬ್ಬರನ್ನು ಪರಿಗಣಿಸುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.
ಈ ವಾರ ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈ ವಾರ ಏಷ್ಯಾಕಪ್ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆಗಸ್ಟ್ ಅಂತ್ಯದಲ್ಲಿ ಶ್ರೀಲಂಕಾಕ್ಕೆ ತೆರಳುವ ಮೊದಲು ಆಟಗಾರರು ಶಿಬಿರಕ್ಕಾಗಿ ಆಗಸ್ಟ್ 23 ರಂದು ಎನ್‌ಸಿಎನಲ್ಲಿ ಒಂದುಗೂಡಲಿದ್ದಾರೆ. ಈ ಅವಧಿಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಇಬ್ಬರ ಫಿಟ್ನೆಸ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.
"ಯಾವುದೇ ಸಂದರ್ಭದಲ್ಲಿ ಗಾಯಗಳಿಂದ ಹಿಂತಿರುಗುವ ಕೆಲವು ಆಟಗಾರರನ್ನು ನಾವು ಹೊಂದಿದ್ದೇವೆ. ನಾವು ಅವರಿಗೆ ಏಷ್ಯಾ ಕಪ್‌ನಲ್ಲಿ ಆಡಲು ಅವಕಾಶಗಳನ್ನು ನೀಡಬೇಕಾಗಿದೆ. ಈ ಹಂತದಲ್ಲಿ ನಾನು ಏಷ್ಯಾಕಪ್ ಬಗ್ಗೆ ಯೋಚಿಸಿಲ್ಲ. ನಾವು ಬೆಂಗಳೂರಿನಲ್ಲಿ ಆಗಸ್ಟ್ 23 ರಿಂದ ಒಂದು ವಾರದ ಶಿಬಿರವನ್ನು ಹೊಂದಿದ್ದೇವೆ. ಅಲ್ಲಿ ಆಟಗಾರರನ್ನು ಆಯ್ಕೆ ಮಾಡುತ್ತೇವೆ" ಎಂದು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಒಂದು ವೇಳೆ ಇವರಿಬ್ಬರೂ ತಂಡಕ್ಕೆ ಆಯ್ಕೆಯಾಗದಿದ್ದರೆ ಯಾರು ಅವಕಾಶ ಪಡೆಯುತ್ತಾರೆ ಎನ್ನುವುದನ್ನು ನೋಡಬೇಕಿದೆ. ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಆಯ್ಕೆಯ ರೇಸ್‌ನಲ್ಲಿ ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications