Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Duleep Trophy: ಟೆಸ್ಟ್‌ ತಂಡಕ್ಕೆ ನಮ್ಮನ್ನು ಪರಿಗಣಿಸಿ ಎಂದ ಶ್ರೇಯಸ್‌, ದೇವದತ್

ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡವನ್ನು ಇನ್ನು ಪ್ರಕಟಿಸಬೇಕಿದೆ. ಈ ವೇಳೆ ಬಿಸಿಸಿಐ ಆಯ್ಕೆ ಸಮಿತಿ ಇನ್ನು ಅಳೆದು ತೂಗಿ ಆಟಗಾರರಿಗೆ ಮಣೆ ಹಾಕುತ್ತಿದೆ. ದುಲೀಪ್‌ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರಿಗೆ, ಆಯ್ಕೆ ಸಮಿತಿ ಮಣೆ ಹಾಕುವ ಸಾಧ್ಯತೆ ಇದೆ.

ದುಲೀಪ್‌ ಟ್ರೋಫಿಯಲ್ಲಿ ಭಾರತ ಡಿ ತಂಡದ ಪರ ಬ್ಯಾಟ್ ಮಾಡಿದ್ದ ಶ್ರೇಯಸ್‌ ಅಯ್ಯರ್‌, ದೇವದತ್‌ ಪಡಿಕ್ಕಲ್‌ ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ, ಎರಡನೇ ಇನಿಂಗ್ಸ್‌ನಲ್ಲಿ ಶ್ರೇಯಸ್‌, ದೇವದತ್‌ ಅಮೋಘ ಇನಿಂಗ್ಸ್‌ ಕಟ್ಟಿ ತಂಡಕ್ಕೆ ನೆರವಾದರು.

Shreyas Iyer and Devdutt Padikkal Impress in Duleep Trophy Eye Spot in India s Test Squad Against Bangladesh

ದುಲೀಪ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಭಾರತ ಡಿ ಹಾಗೂ ಭಾರತ ಸಿ ತಂಡಗಳು ಅನಂತರಪುರದಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಡಿ 164 ರನ್‌ಗಳಿಗೆ ಕುಸಿತ ಕಂಡಿತು. ಭಾರತ ಸಿ ಮೊದಲ ಇನಿಂಗ್ಸ್‌ ಆರಂಭಿಸಿ 168 ರನ್‌ಗಳಿಗೆ ಸರ್ವಪತನ ಹೊಂದಿತು. ಇನಿಂಗ್ಸ್‌ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ ಡಿ 236 ರನ್‌ಗೆ ಆಲ್‌ಔಟ್‌ ಆಯಿತು. ಗುರಿಯನ್ನು ಬೆನ್ನಟ್ಟಿದ ಭಾರತ ಸಿ ತಂಡ 6 ವಿಕೆಟ್‌ಗೆ 233 ರನ್‌ಗಳಿಸಿ ಜಯ ದಾಖಲಿಸಿತು.

ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಆಟ

ಎರಡನೇ ಇನಿಂಗ್ಸ್‌ನಲ್ಲಿ ಭಾರತ ಸಿ ಪರ ಶ್ರೇಯಸ್‌ ಅಯ್ಯರ್‌ ಹಾಗೂ ದೇವದತ್‌ ಪಡಿಕ್ಕಲ್‌ ಸ್ಥಿರ ಆಟದ ಪ್ರದರ್ಶನ ನೀಡಿದರು. ಶ್ರೇಯಸ್ ಅಯ್ಯರ್‌ ಎರಡನೇ ಇನಿಂಗ್ಸ್‌ನಲ್ಲಿ 44 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 54 ರನ್‌ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್‌ 70 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 56 ರನ್‌ ಬಾರಿಸಿದರು.

Shreyas Iyer and Devdutt Padikkal Impress in Duleep Trophy Eye Spot in India s Test Squad Against Bangladesh

ಮೊದಲ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದ, ಶ್ರೇಯಸ್, ದೇವದತ್ ಟೀಕೆಗೆ ಗುರಿಯಾಗಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ತಮ್ಮನ್ನು ಸಹ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಪರಿಗಣಿಸಿ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟಿದ್ದಾರೆ.

ಪ್ರಕಟವಾಗಿಲ್ಲ ಟೀಮ್ ಇಂಡಿಯಾ?

ಬಾಂಗ್ಲಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಇನ್ನು ಪ್ರಕಟಿಸಬೇಕಿದೆ. ಬಿಸಿಸಿಐ ಆಯ್ಕೆ ಸಮಿತಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಟೆಸ್ಟ್‌ ತಂಡದ ಟಾಪ್‌ ಆರ್ಡರ್ ಬ್ಯಾಟರ್‌ಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ಹಾಗೂ ವಿರಾಟ್ ಕೊಹ್ಲಿ ಅವರು ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಆಟಗಾರರ ಹುಡುಕಾಟ ನಡೆಸಿದೆ. ಈ ಬೆನ್ನಲ್ಲೆ ಶ್ರೇಯಸ್ ಅಯ್ಯರ್‌ ಹಾಗೂ ದೇವದತ್ ಪಡಿಕ್ಕಲ್‌ ಸಹ ತಮ್ಮನ್ನು ಪರಿಗಣಿಸಿ ಎಂದು ಆಯ್ಕೆ ಸಮಿತಿಗೆ ಸಂದೇಶವನ್ನು ರವಾನಿಸಿದ್ದಾರೆ.

Story first published: Saturday, September 7, 2024, 16:24 [IST]
Other articles published on Sep 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+