Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ 2ನೇ ಹಂತಕ್ಕೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ ಶ್ರೇಯಸ್ ಐಯ್ಯರ್

Shreyas Iyer confirms that he will be available in the IPL 2021 phase 2

ನವದೆಹಲಿ: ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್‌ ಶ್ರೇಯಸ್ ಐಯ್ಯರ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಎರಡನೇ ದಂತದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಗಾಯಕ್ಕೀಡಾಗಿದ್ದ ಶ್ರೇಯಸ್ ಐಯ್ಯರ್, ಭಾರತದಲ್ಲಿ ನಡೆದಿದ್ದ ಮೊದಲ ಹಂತದ ಐಪಿಎಲ್‌ನಲ್ಲಿ ಆಡಿರಲಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್‌ ನಾಯಕರಾಗಿದ್ದ ಶ್ರೇಯಸ್ ಐಯ್ಯರ್ ಗಾಯಗೊಂಡು 2021ರ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಹೊರಗುಳಿದಿದ್ದರಿಂದ ಡೆಲ್ಲಿ ನಾಯಕತ್ವ ರಿಷಭ್ ಪಂತ್ ವಹಿಸಿಕೊಂಡಿದ್ದರು. ಈಗ ಮತ್ತೆ ಐಯ್ಯರ್ ತಂಡ ಸೇರಿಕೊಳ್ಳಲಿದ್ದಾರೆ. ಆದರೆ ತಂಡದ ನಾಯಕತ್ವದ ಬಗ್ಗೆ ಗ್ಯಾರಂಟಿಯಿಲ್ಲ ಎಂದು ಐಯ್ಯರ್ ಹೇಳಿದ್ದಾರೆ.

ಐಪಿಎಲ್ ಈ ಸೀಸನ್ ಆರಂಭಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಶ್ರೇಯಸ್ ಐಯ್ಯರ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಆ ಬಳಿಕ ಐಪಿಎಲ್ ಸೇರಿ ಯಾವುದೇ ಪಂದ್ಯಗಳಲ್ಲಿ ಶ್ರೇಯಸ್‌ಗೆ ಆಡಲಾಗಿರಲಿಲ್ಲ. ಈಗ ಶ್ರೇಯಸ್ ಚೇತರಿಸಿಕೊಂಡಿದ್ದು, ಮತ್ತೆ ಐಪಿಎಲ್ ಆಡುವುದಾಗಿ ಖಾತರಿಪಡಿಸಿದ್ದಾರೆ.

"ನನ್ನ ಭುಜದ ಗಾಯ ಗುಣವಾಗಿದೆ. ಚೇತರಿಕೆಗಾಗಿ ಅಭ್ಯಾಸ ನಡೆಯುತ್ತದೆ. ಹೆಚ್ಚೆಂದರೆ ಸಂಪೂರ್ಣ ಸುಧಾರಿಸಲು ಒಂದು ತಿಂಗಳು ಬೇಕಾಗಬಹುದು. ಐಪಿಎಲ್‌ನಲ್ಲಿ ನಾನು ಆಡುತ್ತೇನೆ, ಆದರೆ ನಾಯಕತ್ವದ ಬಗ್ಗೆ ನನಗೆ ಖಾತರಿಯಿಲ್ಲ," ಎಂದು 26ರ ಹರೆಯದ ಶ್ರೇಯಸ್ ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ಐಪಿಎಲ್ ಎರಡನೇ ಹಂತ ಆರಂಭಗೊಳ್ಳಲಿದೆ.

Story first published: Monday, July 5, 2021, 16:15 [IST]
Other articles published on Jul 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+