ಏಷ್ಯಾ ಕಪ್ ಟಿ20 ಪಂದ್ಯಕ್ಕೆ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಪ್ರಕಟಿತ ತಂಡದಲ್ಲಿ ಹಲವು ಸ್ಟಾರ್ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದ, ಸ್ಟಾರ್ ಆಟಗಾರನನ್ನು ಬಿಸಿಸಿಐ ಕಡೆಗಣಿಸಿದೆ. ಈಗ ಈ ಪ್ಲೇಯರ್ ಅಭಿಮಾನಿಗಳು ಈ ಪ್ಲೇಯರ್ ಇನ್ನು ಎಷ್ಟು ಪರೀಕ್ಷೆಗೆ ಒಳಪಡಬೇಕಿದೆ ಎಂಬ ಪ್ರಶ್ನೆ ಎತ್ತಿದ್ದಾರೆ. ಹಾಗಿದ್ದರೆ ಆ ಪ್ಲೇಯರ್ ಯಾರು?
ಟೀಮ್ ಇಂಡಿಯಾವನ್ನು ಪ್ರಕಟಿಸಿದಾಗ ಎಲ್ಲರೂ ಆ ಸ್ಟಾರ್ ಪ್ಲೇಯರ್‌ಗೆ ಅವಕಾಶ ಸಿಗುತ್ತದಾ ಎಂದು ನೋಡುತ್ತಾ ಇದ್ದರು. ಆದರೆ ಬಿಸಿಸಿಐ ಆಯ್ಕೆ ಸಮಿತಿ ಐಪಿಎಲ್‌ನಲ್ಲಿ ತಮ್ಮ ತಂಡವನ್ನು ಫೈನಲ್ ವರೆಗೆ ಕೊಂಡೊಯ್ದ ಸ್ಟಾರ್ ಪ್ಲೇಯರ್ ಮಿಸ್ ಆಗಿದ್ದಾರೆ. ಈ ಮೂಲಕ ಏಷ್ಯಾ ಕಪ್ ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಶ್ರೇಯಸ್ ಅಯ್ಯರ್ ಎಂಬ ಪ್ರತಿಭಾನ್ವಿತ ಆಟಗಾರ ವಿಫಲವಾಗಿದ್ದಾನೆ. ಇವರ ಹೆಸರು ಟಿ20 ಏಷ್ಯಾ ಕಪ್ ಸಂಭಾವ್ಯ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ತಂಡ ಪ್ರಕಟವಾದಾಗ ಇವರ ಹೆಸರು ಮಿಸ್ ಆಗಿದೆ.

ಶ್ರೇಯಸ್ ಅಯ್ಯರ್ ಅವಕಾಶ ಸಿಕ್ಕಾಗಲೆಲ್ಲಾ ಮಿಂಚಿ ತಂಡಕ್ಕೆ ನೆರವಾಗಿರುವ ಆಟಗಾರ. ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಶ್ರೇಯಸ್ ತಂಡದಲ್ಲಿ ಇಲ್ಲದಿರುವ ಕಾರಣದ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲೂ ಈ ಪ್ರಶ್ನೆ ಅಜಿತ್ ಅಗರ್ಕರ್ ಮುಂದೆ ಬಂದಾಗ, ಅವರು ಯಾರ ಬದಲಿಗೆ ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡಬೇಕು ಎಂದರು. ಅಲ್ಲದೆ ಇದರಲ್ಲಿ ಶ್ರೇಯಸ್ ಅಯ್ಯರ್‌ದಾಗಲಿ ಅಥವಾ ನಮ್ಮದಾಗಲಿ ಏನು ತಪ್ಪಿಲ್ಲ. ಶ್ರೇಯಸ್ ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದು ಅಜಿತ್ ಹೇಳಿದರು.
ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಈಗ ತಯಾರಿ ನಡೆಸುತ್ತಿದೆ. ಇದಕ್ಕಾಗಿ ಆಯ್ಕೆ ಸಮಿತಿ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ನಿರತವಾಗಿದೆ. ಈ ಎಲ್ಲ ಅಂಶಗಳನ್ನು ನೋಡಿದಾಗ ಆಯ್ಕೆ ಸಮಿತಿಯ ದೃಷ್ಠಿಯಲ್ಲಿ ಶ್ರೇಯಸ್ ಅಯ್ಯರ್ ಸ್ಥಾನ ಇಲ್ಲ ಎಂದಂತೆ ಕಾಣುತ್ತಿದೆ. ಇವರು ಈಗಾಗಲೇ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನವನ್ನು ನೀಡಿದ್ದಾರೆ. ಅಲ್ಲದೆ ತಾವು ಮುನ್ನಡೆಸಿದ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. 18ನೇ ಆವೃತ್ತಿಯ ಐಪಿಎಲ್‌ನಲ್ಲೂ ಇವರ ಮುಂದಾಳತ್ವದ ಪಂಜಾಬ್ ಕಿಂಗ್ಸ್ ಫೈನಲ್ ವರೆಗೂ ತಲುಪಿ ಸಾಧನೆ ಮಾಡಿತ್ತು. ಈ ಸ್ಟಾರ್ ಪ್ಲೇಯರ್‌ಗೆ ಬಿಸಿಸಿಐ ಆಯ್ಕೆ ಸಮಿತಿ ಕಡೆಗಣನೆ ಮಾಡುತ್ತಿದೆ.

ಟಿ20 ಕ್ರಿಕೆಟ್‌ನಲ್ಲಿ ಶ್ರೇಯಸ್ ಸಾಧನೆ
ಶ್ರೇಯಸ್ ಅಯ್ಯರ್ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು 51 ಪಂದ್ಯಗಳಲ್ಲಿ 30.66ರ ಸರಾಸರಿಯಲ್ಲಿ 1104 ರನ್ ಕಲೆ ಹಾಕಿದ್ದಾರೆ. ಈ ವೇಳೆ 8 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಇವರು ಐಪಿಎಲ್‌ನಲ್ಲಿ ಆಡಿದ 133 ಪಂದ್ಯಗಳಲ್ಲಿ 34.23ರ ಸರಾಸರಿಯಲ್ಲಿ 3731 ರನ್ ಸಿಡಿಸಿದ್ದಾರೆ. ಈ ವೇಳೆ 27 ಅರ್ಧಶತಕ ಸಿಡಿಸಿದ್ದಾರೆ.