ತಮಾಷೆಯ ಪೋಸ್ಟ್‌ನಲ್ಲಿ ಕ್ವಾರಂಟೈನ್ ಅನುಭವ ಹಂಚಿಕೊಂಡ ಶ್ರೇಯಸ್

ಸಿಡ್ನಿ: ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿಸಿರುವ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಸುದೀರ್ಘ ಪ್ರವಾಸ ಸರಣಿಗಾಗಿ ಸಿಡ್ನಿ ತಲುಪಿರುವ ಭಾರತ ತಂಡ ಕೊರೊನಾ ಕಾರಣ 14 ದಿನ ಕ್ವಾರಂಟೈನ್ ಪಾಲಿಸಲಿರುವುದರಿಂದ ಸದ್ಯ ಸಿಡ್ನಿಯ ಹೋಟೆಲ್‌ನಲ್ಲಿ ಭಾರತೀಯ ಆಟಗಾರರಿದ್ದಾರೆ.
ಆಸ್ಟ್ರೇಲಿಯಾ ತಲುಪಿದ ನಂತರ ಆಟಗಾರರನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿಡಲಾಗುತ್ತದೆ. 14 ದಿನಗಳ ಕಾಲ ಆಟಗಾರರು ಬಯೋ ಬಬಲ್ ಒಳಗಿದ್ದು ಕ್ವಾರಂಟೈನ್ ಪಾಲಿಸಬೇಕಾಗಿರುತ್ತದೆ. ಬೇರೆ ಬೇರೆ ಆಟಗಾರರು ಆಸ್ಟ್ರೇಲಿಯಾ ಪ್ರವಾಸದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕ ಶ್ರೇಯಸ್ ಐಯ್ಯರ್ ಕೂಡ ತಮಾಷೆಯ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.
ಕ್ವಾರಂಟೈನ್ ಅನ್ನು ಹೇಗೆ ಕಳೆಯುತ್ತೇವೆ ಎಂಬುದನ್ನು ತಮಾಷೆಯಾಗಿ ತಿಳಿಸಿರುವ ಶ್ರೇಯಸ್, ಟ್ವಿಟರ್ ಪೋಸ್ಟ್‌ನಲ್ಲಿ 'ಒಳ್ಳೆಯ ಸಂಗಾತಿಯೊಂದಿಗೆ ಕ್ವಾರಂಟೈನ್ ಪಾಲಿಸುತ್ತಿರುವುದು,' ಎಂದು ಶೀರ್ಷಿಕೆ ಹಾಕಿಕೊಂಡಿದ್ದಾರೆ. ತಮಾಷೆಯೆಂದರೆ ಚಿತ್ರದಲ್ಲಿ ಶ್ರೇಯಸ್ ಅವರೇ ಬೇರೆ ಬೇರೆ ಬಂಗಿಯಲ್ಲಿದ್ದಾರೆ ಬಿಟ್ಟರೆ ಬೇರ್ಯಾರೂ ಜೊತೆಯಲ್ಲಿಲ್ಲ.
ಕ್ವಾರಂಟೈನ್ ಸಮಯದಲ್ಲಿ ನಮಗೆ ನಾವೇ ಎಲ್ಲ ಎಂಬುದನ್ನು ಶ್ರೇಯಸ್ ತರಲೆಯಾಗಿ ಒಂದೇ ಚಿತ್ರದಲ್ಲಿ ವಿವರಿಸಿದ್ದಾರೆ. ಶ್ರೇಯಸ್ ಐಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ರನ್ನರ್ಸ್ ಪ್ರಶಸ್ತಿ ಜಯಿಸಿದೆ. ಈ ವರ್ಷ ಫೈನಲ್‌ಗೆ ಪ್ರವೇಶಿಸಿದ್ದ ಡೆಲ್ಲಿ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದ ದಾಖಲೆ ನಿರ್ಮಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications