Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shreyas Iyer: ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ಗೆ ಬಿಸಿಸಿಐ ಪೆಟ್ಟು

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಗೆಲುವಿನ ಸಂಭ್ರಮ ಪಂಜಾಬ್‌ ಕಿಂಗ್ಸ್‌ ಪಾಳಯದಲ್ಲಿ ಹಸಿರಾಗಿ ಇರುವಾಗಲೇ ಬಿಸಿಸಿಐ ಪಿಬಿಕೆಎಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಅವರ ಆ ತಪ್ಪಿಗೆ ಶಿಸ್ತು ಕ್ರಮ ಕೈಗೊಂಡಿದೆ. ಶ್ರೇಯಸ್‌ ಅಯ್ಯರ್ ಅವರ ಯಾವ ತಪ್ಪಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

18ನೇ ಆವೃತ್ತಿಯ 49ನೇ ಪಂದ್ಯದಲ್ಲಿ ಬುಧವಾರ ಚೆನ್ನೈನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮುನ್ನಡೆಯ ಪಂಜಾಬ್‌ ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸದ ಕಾರಣದಿಂದ ದಂಡನೆಗೆ ಗುರಿಯಾಗಿದೆ. ಚೆನ್ನೈ ವಿರುದ್ಧ ಜಯ ಸಾಧಿಸಿದರೂ, ಶ್ರೇಯಸ್‌ ಅಯ್ಯರ್‌ ಅವರಿಗೆ ಬಿಸಿಸಿಐ 12 ಲಕ್ಷ ದಂಡ ವಿಧಿಸಿದೆ. 19ನೇ ಓವರ್‌ನಲ್ಲಿ ಸ್ಲೋ ಓವರ್‌ಗಾಗಿ ಮೈದಾನದಲ್ಲೇ ದಂಡ ತೆತ್ತಿದ್ದ ಶ್ರೇಯಸ್‌ ಒಬ್ಬ ಎಕ್ಸ್‌ಟ್ರಾ ಫೀಲ್ಡರ್‌ನನ್ನು 30 ಯಾರ್ಡ್‌ ಸರ್ಕಲ್‌ನಲ್ಲಿ ಕರೆಸಿಕೊಂಡಿತ್ತು.

Shreyas Iyer Fined 12 Lakh for Slow Over Rate Despite PBKS Win Over CSK

ಒಬ್ಬ ಫೀಲ್ಡರ್‌ 30 ಯಾರ್ಡ್‌ ಸರ್ಕಲ್‌ ಒಳಗೆ ಬಂದ್ರೂ ಸಹ ಚೆನ್ನೈ ಇದರ ಲಾಭವನ್ನು ಪಡೆಯುವಲ್ಲಿ ವಿಫಲವಾಯಿತು. ಚಹಾಲ್‌ ಇದೇ ಓವರ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿ ಬೀಗಿದರು.

ಬಿಸಿಸಿಐ ಹೇಳಿದ್ದೇನು?

ಈ ಬಗ್ಗೆ ಬಿಸಿಸಿಐ ಪ್ರತಿಕಾ ಪ್ರಕಟಣೆಯನ್ನು ಸಹ ಹೊರಡಿಸಿದೆ. ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್ ಅಯ್ಯರ್‌ ಅವರು 49ನೇ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಹಾಕದ ಕಾರಣ ಅವರ ವಿರುದ್ಧ ದಂಡ ವಿಧಿಸಲಾಗಿದೆ. ಪ್ರಸಕ್ತ ಟೂರ್ನಿಯಲ್ಲಿ ಪಂಜಾಬ್‌ ಇದೇ ಮೊದಲ ಬಾರಿಗೆ ಆರ್ಟಿಕಲ್‌ 2.22 ಐಪಿಎಲ್‌ ಕೋಡ್ ಆಫ್‌ ಕಂಡಕ್ಟ್‌ ರೂಲ್ಸ್‌ ಬ್ರೇಕ್‌ ಮಾಡಿದೆ. ಹೀಗಾಗಿಯೇ ಶ್ರೇಯಸ್‌ ಅಯ್ಯರ್‌ಗೆ 12 ಲಕ್ಷ ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

Shreyas Iyer Fined 12 Lakh for Slow Over Rate Despite PBKS Win Over CSK

ಚೆನ್ನೈ ವಿರುದ್ಧದ ಗೆಲುವಿನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಯುಜುವೇಂದ್ರ ಚಹಾಲ್‌ ಅವರು ಪ್ರಮುಖ ಕಾಣಿಕೆ ನೀಡಿದ್ದಾರೆ. ಶ್ರೇಯಸ್‌ 41 ಎಸೆತಗಳಲ್ಲಿ 72 ರನ್‌ ಸಿಡಿಸಿದರೆ, ಚಹಾಲ್‌ ಹ್ಯಾಟ್ರಿಕ್‌ ಸೇರಿದಂತೆ 32 ರನ್‌ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಈ ಗೆಲುವಿನ ಮೂಲಕ ಪಂಜಾಬ್‌ ಕಿಂಗ್ಸ್‌ ಅಂಕ ಪಟ್ಟಿಯಲ್ಲಿ ಭರ್ಜರಿ ಏರಿಕೆ ಕಂಡಿದೆ. ಅಲ್ಲದೆ ಆಡಿದ 10 ಪಂದ್ಯಗಳಲ್ಲಿ 6 ಜಯ ಸಾಧಿಸಿದ್ದು, 13 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

Story first published: Thursday, May 1, 2025, 12:33 [IST]
Other articles published on May 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+