Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

BCCI: ಶ್ರೇಯಸ್ ಅಯ್ಯರ್‍‌ಗೆ ಬಿಸಿಸಿಐ ಬಿಗ್ ಗಿಫ್ಟ್!

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಕ್ರಿಕೆಟಿಗರ ಕೇಂದ್ರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗ ಪುರುಷ ಆಟಗಾರರ ಸರದಿ. ಈ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಕಳೆದ ವರ್ಷದ ಅತ್ಯುತ್ತಮ ಪ್ರದರ್ಶನದ ನಂತರ ಕೆಲವು ಆಟಗಾರರಿಗೆ ಬಿಗ್ ಗಿಫ್ಟ್ ನೀಡಬಹುದು. ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ಗ್ರೇಡ್‌ಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.

ರೋಹಿತ್, ವಿರಾಟ್ ಮತ್ತು ಜಡೇಜಾ ಪ್ರಸ್ತುತ ಎ+ ದರ್ಜೆಯಲ್ಲಿದ್ದಾರೆ. ಇದರಲ್ಲಿ ಪ್ರತಿಯೊಬ್ಬ ಆಟಗಾರನಿಗೆ 7 ಕೋಟಿ ರೂ. ನೀಡಲಾಗುತ್ತದೆ. ಕಳೆದ ಬಾರಿ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ 30 ಆಟಗಾರರ ಹೆಸರುಗಳಿದ್ದವು. ಈಗ ಹೊಸ ಪಟ್ಟಿಯಲ್ಲಿ ಎಷ್ಟು ಆಟಗಾರರಿಗೆ ಸ್ಥಾನ ನೀಡಲಾಗಿದೆ ಎಂಬುದು ಕುತೂಹಲ ಮೂಡಿಸಿದೆ.

Shreyas Iyer likely to get promotion in BCCI central contract list

ಬಿಸಿಸಿಐ ಆಟಗಾರರಿಗೆ ಎ+ ದರ್ಜೆಯಲ್ಲಿ 7 ಕೋಟಿ ರೂ., ಎ ದರ್ಜೆಯಲ್ಲಿ 5 ಕೋಟಿ ರೂ., ಬಿ ದರ್ಜೆಯಲ್ಲಿ 3 ಕೋಟಿ ರೂ. ಮತ್ತು ಸಿ ದರ್ಜೆಯಲ್ಲಿ 1 ಕೋಟಿ ರೂ. ಪಾವತಿಸುತ್ತದೆ. ರಾಷ್ಟ್ರೀಯ ಆಯ್ಕೆ ಸಮಿತಿ, ಹೆಡ್‌ಕೋಚ್ ಮತ್ತು ಬಿಸಿಸಿಐ ಕಾರ್ಯದರ್ಶಿ ಅವರೊಂದಿಗೆ ಸಮಾಲೋಚಿಸಿ ಕೇಂದ್ರ ಒಪ್ಪಂದ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಇದಾದ ನಂತರ ಅದನ್ನು ಅನುಮೋದನೆಗಾಗಿ ಅಪೆಕ್ಸ್ ಕೌನ್ಸಿಲ್ ಮುಂದೆ ಇಡಲಾಗುತ್ತದೆ.

ವರದಿಗಳ ಪ್ರಕಾರ, ಎ+ ದರ್ಜೆಯಲ್ಲಿರುವ ಹೆಚ್ಚಿನ ಹಿರಿಯ ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ಒಮ್ಮತ ಬಂದಿಲ್ಲ. ಜಸ್ಪ್ರೀತ್ ಬುಮ್ರಾ, ರೋಹಿತ್, ಕೊಹ್ಲಿ ಮತ್ತು ಜಡೇಜಾ ಕಳೆದ ವರ್ಷ ಅಗ್ರ ಶ್ರೇಯಾಂಕದಲ್ಲಿ ಸ್ಥಾನ ಪಡೆದಿದ್ದರು. ಎ+ ಎಂದರೆ ದೇಶಕ್ಕಾಗಿ ಮೂರು ಸ್ವರೂಪಗಳಲ್ಲಿ (ಟೆಸ್ಟ್, ಏಕದಿನ ಮತ್ತು ಟಿ20) ಅದ್ಭುತ ಪ್ರದರ್ಶನ ನೀಡಿದ ಆಟಗಾರರನ್ನು ಇರಿಸುವ ದರ್ಜೆ. ಈ ಬಾರಿ ಬುಮ್ರಾ ಮಾತ್ರ ಎ+ ದರ್ಜೆಯಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗತ್ತಿದೆ.

ಅಕ್ಸರ್‍‌ಗೆ ಬಡ್ತಿ

ಟೀಮ್ ಇಂಡಿಯಾ ಮಾಜಿ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಬಾರಿ ಎ ಗ್ರೇಡ್‌ನಲ್ಲಿ ಇರುವುದಿಲ್ಲ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಅಕ್ಸರ್ ಪಟೇಲ್ ಅವರನ್ನು ಬಿ ಗುಂಪಿನಿಂದ ಎ ಗುಂಪಿಗೆ ಬಡ್ತಿ ನೀಡುವ ಸಾಧ್ಯತೆ ಹೆಚ್ಚಿದೆ. ಅಕ್ಸರ್ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಭಾರತ ಪರ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

ಕಳೆದ ಋತುವಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಕೇಂದ್ರ ಒಪ್ಪಂದ ಪಟ್ಟಿಯಿಂದ ಕೈಬಿಡಲಾಗಿತ್ತು. ಆದರೆ ಈ ಬಾರಿ ಅವರು ಕಮ್‌ಬ್ಯಾಕ್ ರೀತಿ ನೋಡಿದರೆ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಬಹುತೇಕ ಸ್ಥಾನ ಪಡೆಯುವುದು ಖಚಿತವಾಗಿದೆ. ಈ ಋತುವಿನಲ್ಲಿ ಶ್ರೇಯಸ್ 11 ಏಕದಿನ ಪಂದ್ಯಗಳನ್ನು ಆಡಿದ್ದು, ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರರು.

ಯಾವುದೇ ಆಟಗಾರನು ಬಿಸಿಸಿಐ ಕೇಂದ್ರ ಒಪ್ಪಂದ ಪಟ್ಟಿಗೆ ಸೇರಬೇಕಾದರೆ, ಅವನು ಒಂದು ಋತುವಿನಲ್ಲಿ ಕನಿಷ್ಠ ಮೂರು ಟೆಸ್ಟ್ ಅಥವಾ ಎಂಟು ಏಕದಿನ ಅಥವಾ 10 ಟಿ20 ಪಂದ್ಯಗಳನ್ನು ಆಡಬೇಕು. ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೆ ಗ್ರೇಡ್ ಬಿ ಒಪ್ಪಂದದಿಂದ ಬಡ್ತಿ ಸಿಗುವುದೇ ಎಂಬುದು ಕುತೂಹಲ ಮೂಡಿಸಿದೆ.

ಆಕಾಶ್ ದೀಪ್, ಸರ್ಫರಾಜ್ ಖಾನ್, ನಿತೀಶ್ ಕುಮಾರ್ ರೆಡ್ಡಿ ಹೊಸ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆಕಾಶ್ ದೀಪ್ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಸರ್ಫರಾಜ್ ಖಾನ್ ಮೂರು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿತೀಶ್ 4 ಟಿ20ಗಳನ್ನು ಹೊರತುಪಡಿಸಿ 5 ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದಿದ್ದಾರೆ. ಶಾರ್ದೂಲ್ ಠಾಕೂರ್ ಮತ್ತು ಋತುರಾಜ್ ಗಾಯಕ್ವಾಡ್ ಅವರನ್ನು ಕೈಬಿಡುವ ಸಾಧ್ಯತೆ ಇದೆ.

Story first published: Tuesday, March 25, 2025, 14:05 [IST]
Other articles published on Mar 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+