Shreyas Iyer: ವಿರಾಟ್ ಕೊಹ್ಲಿ ದಾಖಲೆ ಮುರಿಯಲು ಸಜ್ಜಾದ ಶ್ರೇಯಸ್ ಅಯ್ಯರ್
ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರು ಹೊಸ ದಾಖಲೆ ಬರೆಯುವ ಉತ್ಸಾಹದಲ್ಲಿ ಇದ್ದಾರೆ. ಇನ್ನು ಕೆಲವೇ ರನ್‌ಗಳನ್ನು ಶ್ರೇಯಸ್ ಅಯ್ಯರ್ ಅವರು ಗಳಿಸಿದರೆ ಅವರು ವಿರಾಟ್ ಕೊಹ್ಲಿ ಅವರ ದಾಖಲೆಗಳನ್ನೂ ಮುರಿಯಲಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯವು ಜನವರಿ 14 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಮೊದಲ ಏಕದಿನ ಪಂದ್ಯವನ್ನು ಗೆದ್ದಿರುವ ಟೀಮ್ ಇಂಡಿಯಾ ಪ್ರಸ್ತುತ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ.
ಏತನ್ಮಧ್ಯೆ, ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಇತಿಹಾಸ ಸೃಷ್ಟಿಸುವ ಸುವರ್ಣ ಅವಕಾಶವನ್ನು ಹೊಂದಿದ್ದಾರೆ. ಎರಡನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರು 34 ರನ್ ಗಳಿಸಿದರೆ, ಏಕದಿನ ಪಂದ್ಯಗಳಲ್ಲಿ ಭಾರತಕ್ಕಾಗಿ 3000 ರನ್ ಗಳಿಸಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎನ್ನುವ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಶ್ರೇಯಸ್ ಅಯ್ಯರ್ ಅವರಿಗೆ ಶಿಖರ್ ಧವನ್ ಅವರ ದಾಖಲೆಯನ್ನು ಮುರಿಯುವುದಕ್ಕೆ ಅವಕಾಶ ಇದೆ. ಅಲ್ಲದೇ ಮುಂದುವರಿದು ಕಿಂಗ್ ವಿರಾಟ್ ಕೊಹ್ಲಿ ಅವರ ದಾಖಲೆಗಳನ್ನು ಮುರಿಯುವುದಕ್ಕೂ ಶ್ರೇಯಸ್ ಅಯ್ಯರ್ ಅವರಿಗೆ ಕೆಲವೇ ಕೆಲವು ರನ್‌ಗಳು ಬೇಕಾಗಿವೆ.

ಶಿಖರ್ ಧವನ್ ಬೃಹತ್ ದಾಖಲೆ ಮುರಿಯುವ ಅವಕಾಶ
ಇನ್ನು ಕ್ರಿಕೆಟಿಗ, ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಬೃಹತ್ ದಾಖಲೆಗಳನ್ನು ಮುರಿಯುವುದಕ್ಕೆ ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ಇದೆ. ಏಕದಿನ ಕ್ರಿಕೆಟ್‌ನಲ್ಲಿ 3000 ರನ್‌ಗಳನ್ನು ಗಳಿಸಿದ ಅತ್ಯಂತ ವೇಗದ ಭಾರತೀಯ ಕ್ರಿಕೆಟಿಗ ಎನ್ನುವ ದಾಖಲೆಯನ್ನು ಅವರು ಹೊಂದಿದ್ದಾರೆ. ಧವನ್ 72 ಏಕದಿನ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ವಿರಾಟ್ ಕೊಹ್ಲಿ 75 ಏಕದಿನ ಇನ್ನಿಂಗ್ಸ್‌ಗಳಲ್ಲಿ 3000 ರನ್ ಗಳಿಸಿದ್ದಾರೆ. ಇದೀಗ ಶ್ರೇಯಸ್ ಈ ಇಬ್ಬರೂ ಆಟಗಾರರನ್ನು ಮೀರಿಸುವ ಅವಕಾಶವನ್ನು ಹೊಂದಿದ್ದಾರೆ. ಮುಂದಿನ ಪಂದ್ಯದಲ್ಲಿ ಶ್ರೇಯಸ್ 34 ರನ್ ಗಳಿಸಿದರೆ, ಅವರು 69 ಇನಿಂಗ್ಸ್‌ಗಳಲ್ಲಿ 3000 ಏಕದಿನ ರನ್‌ಗಳನ್ನು ಗಳಿಸಲಿದ್ದಾರೆ. ಅಲ್ಲದೇ ಏಕದಿನ ಕ್ರಿಕೆಟ್‌ನ 69 ಇನಿಂಗ್ಸ್‌ಗಳಲ್ಲಿ 3000 ರನ್‌ಗಳನ್ನು ಗಳಿಸಿದ ವೇಗದ ಕ್ರಿಕೆಟಿಗ ಎನ್ನುವ ಖ್ಯಾತಿಯನ್ನು ಗಳಿಸಲಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 3000 ರನ್ ಗಳಿಸಿರುವ ಕ್ರಿಕೆಟಿಗರು
1. ಶಿಖರ್ ಧವನ್ - 72 ಇನಿಂಗ್ಸ್
2. ವಿರಾಟ್ ಕೊಹ್ಲಿ - 75 ಇನಿಂಗ್ಸ್
3. ಕೆ.ಎಲ್. ರಾಹುಲ್ - 78 ಇನಿಂಗ್ಸ್
4. ನವಜೋತ್ ಸಿಂಗ್ ಸಿಧು - 79 ಇನಿಂಗ್ಸ್
5. ಸೌರವ್ ಗಂಗೂಲಿ - 82 ಇನಿಂಗ್ಸ್
ಶ್ರೇಯಸ್‌ಗೆ ಮತ್ತೊಂದು ದಾಖಲೆ ಬರೆಯುವ ಅವಕಾಶ
ಮುಂದಿನ ಪಂದ್ಯದಲ್ಲಿ 34 ರನ್‌ಗಳನ್ನು ಗಳಿಸುವ ಮೂಲಕ, ಶ್ರೇಯಸ್ ಅಯ್ಯರ್ ವಿವ್ ರಿಚರ್ಡ್ಸ್ ಜೊತೆಗೆ ವಿಶ್ವ ಕ್ರಿಕೆಟ್‌ನಲ್ಲಿ 3000 ಏಕದಿನ ರನ್‌ಗಳನ್ನು ತಲುಪಿದ ನಾಲ್ಕನೇ ಅತಿ ವೇಗದ ಆಟಗಾರ ಎನ್ನುವ ಖ್ಯಾತಿ ಗಳಿಸುವ ಸಾಧ್ಯತೆಯೂ ಇದೆ. ಹೀಗಾಗಿ, ಮುಂದಿನ ಪಂದ್ಯಗಳು ಶ್ರೇಯಸ್ ಅಯ್ಯರ್ ಅವರಿಗೆ ಅತ್ಯಂತ ಪ್ರಮುಖವಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications