Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shreyas Iyer: ಸನ್‌ ಗ್ಲಾಸ್‌ ಹಾಕಿಕೊಂಡ ಬ್ಯಾಟ್ ಮಾಡಿದ ಶ್ರೇಯಸ್‌ ಅಯ್ಯರ್‌ ಟ್ರೋಲ್‌ಗೆ ಗುರಿ

ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕು ಎಂಬುದು ಸದ್ಯ ಟೀಮ್ ಇಂಡಿಯಾದ ಮಿಡ್ಲ್‌ ಆರ್ಡರ್‌ ಬ್ಯಾಟರ್‌ ಶ್ರೇಯಸ್ ಅಯ್ಯರ್‌ ಕನಸು. ಈಗಾಗಲೇ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿರುವ ಶ್ರೇಯಸ್‌, ಟೆಸ್ಟ್‌ ತಂಡವನ್ನು ಸೇರುವ ಕನಸಿನಲ್ಲಿದ್ದಾರೆ. ಆದರೆ ಅವರ ಫಾರ್ಮ್‌ ಅವರ ಕೈಯನ್ನು ಹಿಡಿಯುತ್ತಿಲ್ಲ.

ಶ್ರೇಯಸ್‌ ಅಯ್ಯರ್‌, ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಆದರೆ ಈ ವೇಳೆ ಬಿಗ್ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾಗಿದ್ದರು. ಈಗ ದೇಶೀಯ ಟೂರ್ನಿಯಾದ ದುಲೀಪ್ ಟ್ರೋಫಿಯಲ್ಲಿ ಬ್ಯಾಟ್ ಮಾಡುತ್ತಿದ್ದು, ರನ್‌ ಕಲೆ ಹಾಕುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಆದರೆ ಅಭಿಮಾನಿಗಳು ಇವರ ವೈಯ್ಯರಾವನ್ನು ಕಂಡು ಟ್ರೋಲ್ ಮಾಡಿದ್ದಾರೆ.

Shreyas Iyer Out for Duck in Duleep Trophy Trolled for Wearing Sunglasses While Batting

ಟೆಸ್ಟ್‌ ತಂಡ ಸೇರುವ ಕನಸು

ಟೀಮ್‌ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಆಸೆ ಶ್ರೇಯಸ್‌ ಅಯ್ಯರ್‌ ಅವರದ್ದಾಗಿದೆ. ಸದ್ಯ ಅವರು ಟೀಮ್ ಇಂಡಿಯಾದ ಪರ ಯಾವುದೇ ಪಾರ್ಮೆಟ್‌ನಲ್ಲಿ ಶಾಶ್ವತ ಸ್ಥಾನ ಪಡೆದಿಲ್ಲ. ಹೀಗಾಗಿ ಅವರು ನಿರಂತರ ಅಭ್ಯಾಸ ಮಾಡುತ್ತಲೆ ಇದ್ದಾರೆ. ಬುಚ್ಚಿಬಾಬು ಟೂರ್ನಿಯಲ್ಲಿ ಆಡುವ ವೇಳೆಯೂ ಶ್ರೇಯಸ್‌ ರನ್‌ ಕಲೆ ಹಾಕುವಲ್ಲಿ ಹಿಂದೆಟು ಹಾಕಿದ್ದಾರೆ.

ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆಯ್ಕೆಗಾರರ ​​ಗಮನ ಸೆಳೆಯುವ ಭರವಸೆಯನ್ನು ಶ್ರೇಯಸ್ ಹೊಂದಿದ್ದಾರೆ. ಆದರೆ ಭಾರತ ಡಿ ನಾಯಕರಾಗಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಏಳು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದರು. ಅಯ್ಯರ್ ಔಟಾದದ್ದಕ್ಕಿಂತ ಹೆಚ್ಚಾಗಿ ಅವರು ಬ್ಯಾಟಿಂಗ್‌ಗೆ ಬಂದಾಗ ಧರಿಸಿದ್ದ ಕಪ್ಪು ಕನ್ನಡಕವೇ ಹೆಚ್ಚು ಚರ್ಚೆಯಾಗುತ್ತಿದೆ.

ಖಲೀಲ್‌ ಅಹ್ಮದ್ ತೋಡಿದ ಖೆಡ್ಡಾ

ಶಾರ್ಟ್ ಬಾಲ್ ವಿರುದ್ಧ ಶ್ರೇಯಸ್ ಅಯ್ಯರ್ ಅವರ ದೌರ್ಬಲ್ಯ ಎಲ್ಲರಿಗೂ ತಿಳಿದಿದ್ದೇ. ಇವರ ಈ ತಂತ್ರವನ್ನೇ ಎದುರಾಳಿಗು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಆದರೆ ದುಲೀಪ್‌ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ಶಾರ್ಟ್‌ ಎಸೆತಕ್ಕೆ ಔಟ್ ಏನು ಆಗಲಿಲ್ಲ. ಆದರೆ ಅನುಭವಿ ವೇಗಿ ಖಲೀಲ್ ಅಹ್ಮದ್ ಅವರು ಸೆಟಪ್‌ಗೆ ಬಲಿಯಾದರು. ಫುಲ್ ಲೆಂತ್ ಎಸೆತವನ್ನು ತಪ್ಪಾಗಿ ಅರ್ಥೈಸಿ, ಹಿಂಬದಿಯಿಂದ ಬಾರಿಸಲು ಯತ್ನಿಸಿ ಮಿಡ್ ಆನ್‌ನಲ್ಲಿ ಕ್ಯಾಚ್ ನೀಡಿದರು.

ಟ್ರೋಲ್‌ಗೆ ಒಳಗಾದ ಶ್ರೇಯಸ್

ಶ್ರೇಯಸ್ ಅಯ್ಯರ್ ಬ್ಯಾಟ್ ವೈಫಲ್ಯದ ಜೊತೆಗೆ ಅವರ ಸನ್ ಗ್ಲಾಸ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಕ್ರಿಕೆಟ್‌ ಅಂಗಳದಲ್ಲಿ ಕೆಲವೊಮ್ಮೆ ಫೀಲ್ಡರ್‌ಗಳು ಇನ್ನು ಕೆಲವೊಮ್ಮೆ ಬೌಲರ್‌ಗಳು ಸನ್‌ ಗ್ಲಾಸ್‌ ಬಳಸುತ್ತಾರೆ. ಆದರೆ ಸನ್‌ ಗ್ಲಾಸ್‌ ಹಾಕಿಕೊಂಡು ಬ್ಯಾಟ್ ಮಾಡುವುದು ನೋಡುವುದು ಅಪರೂಪ. ಏಳು ಎಸೆತಗಳನ್ನು ಎದುರಿಸಿದರೂ ರನ್‌ ಕಲೆ ಹಾಕುವಲ್ಲಿ ಯಶಸ್ವಿ ವಿಫಲರಾಗಿದ್ದಾರೆ.

ಶ್ರೇಯಸ್ ಅಯ್ಯರ್ ಅವರ ಈ ಲುಕ್‌ ಕಂಡು ಅಭಿಮಾನಿಗಳು ಅವರನ್ನು ಟ್ರೋಲ್ ಮಾಡಿದ್ದಾರೆ. ಸದ್ಯ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕೇವಲ ಒಂದೇ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿರುವ ಶ್ರೇಯಸ್‌ ಅಯ್ಯರ್‌, ರನ್ ಕಲೆ ಹಾಕುವಲ್ಲಿ ಹಿಂದೆ ಬಿದಿದ್ದಾರೆ.

Story first published: Friday, September 13, 2024, 18:09 [IST]
Other articles published on Sep 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+